Viral Video: ಕೇವಲ 30 ಸೆಕೆಂಡುಗಳಲ್ಲಿ 238 ಜಿಗಿತ! ದಾಖಲೆ ಬರೆದ ಚೀನಾದ ವ್ಯಕ್ತಿ
World Jump-Rope Championship: ಜಪಾನ್‍ನಲ್ಲಿ ನಡೆದ 2025ರ ವಿಶ್ವ ಜಂಪ್-ರೋಪ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಜಂಪ್ ರೋಪರ್ ಹೊಸ ಇತಿಹಾಸ ಬರೆದಿದ್ದಾರೆ. ಜಿಗಿತದಲ್ಲಿ ಅಜೇಯ ದಾಖಲೆಯನ್ನು ಮುರಿದು ಚೀನಾದ ಜಂಪ್ ರೋಪರ್ ಗಮನ ಸೆಳೆದಿದ್ದಾರೆ. ಸೆನ್ ಕ್ಸಿಯಾಲಿನ್ ಎಂಬ ಚೀನಾದ ವ್ಯಕ್ತಿ ಕೇವಲ 30 ಸೆಕೆಂಡುಗಳಲ್ಲಿ 238 ಸಿಂಗಲ್-ಅಂಡರ್‌ಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.


ಟೋಕಿಯೊ: ಜಪಾನ್‍ನಲ್ಲಿ ನಡೆದ 2025ರ ವಿಶ್ವ ಜಂಪ್-ರೋಪ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಜಂಪ್ ರೋಪರ್ ಹೊಸ ಇತಿಹಾಸ ಬರೆದಿದ್ದಾರೆ. ಜಿಗಿತದಲ್ಲಿ ಅಜೇಯ ದಾಖಲೆಯನ್ನು ಮುರಿದು ಚೀನಾದ ಜಂಪ್ ರೋಪರ್ ಗಮನ ಸೆಳೆದಿದ್ದಾರೆ. ಸೆನ್ ಕ್ಸಿಯಾಲಿನ್ ಎಂಬ ಚೀನಾದ ವ್ಯಕ್ತಿ ಕೇವಲ 30 ಸೆಕೆಂಡುಗಳಲ್ಲಿ 238 ಸಿಂಗಲ್-ಅಂಡರ್‌ಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆನ್ ಕ್ಸಿಯಾಲಿನ್ ಅವರ ಪ್ರದರ್ಶನದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್(Viral Video) ಆಗಿದೆ.
ಹಿಂದೆಂದೂ ನೋಡಿರದ ಸೆನ್ ಅವರ ಕೌಶಲ್ಯವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಸೆನ್ ಕ್ಸಿಯಾಲಿನ್ ವಿಶ್ವದ ಅತ್ಯಂತ ವೇಗದ ಜಂಪ್ ರೋಪರ್ ಎಂದು ಪ್ರಸಿದ್ಧರಾಗಿದ್ದಾರೆ. ಅವರು ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌ ನಗರದ ಹುವಾಡು ಜಿಲ್ಲೆಯ ನಿವಾಸಿಯಾಗಿದ್ದಾರೆ. ಈ ಹಿಂದೆ ಇದ್ದ 228 ಜಿಗಿತಗಳ ದಾಖಲೆಯನ್ನು ಮುರಿದು ಕೇವಲ 30 ಸೆಕೆಂಡುಗಳಲ್ಲಿ 238 ಸಿಂಗಲ್-ಅಂಡರ್‌ಗಳೊಂದಿಗೆ ಹೊಸ ದಾಖಲೆ ಬರೆದಿದ್ದಾರೆ. ಈ ವಿಡಿಯೊವನ್ನು @CCTV ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, 21 ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.
ವಿಡಿಯೊ ವೀಕ್ಷಿಸಿ:
ಸೆನ್ ಕ್ಸಿಯಾಲಿನ್ ಯಾರು?
ಸೆನ್ ಕ್ಸಿಯಾಲಿನ್ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌ ನಗರದ ಹುವಾಡು ಜಿಲ್ಲೆಯವರು. ಅವರು 2004 ರಲ್ಲಿ ಜನಿಸಿದರು ಮತ್ತು ನವೆಂಬರ್ 2015 ರಲ್ಲಿ ನಡೆದ ಮೊದಲ ವಿಶ್ವ ಅಂತರ-ಶಾಲಾ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಆಗ ಅವರು ಕೇವಲ 11 ವರ್ಷ ವಯಸ್ಸಿನವರಾಗಿದ್ದರು. ಅವರು 30 ಸೆಕೆಂಡುಗಳ ಸಿಂಗಲ್ ರೋಪ್ ಸ್ಪೀಡ್ ಸ್ಪರ್ಧೆಯಲ್ಲಿ 220 ಜಿಗಿತಗಳನ್ನು ಮತ್ತು 3 ನಿಮಿಷಗಳ ಸಿಂಗಲ್ ರೋಪ್ ಎಂಡ್ಯೂರೆನ್ಸ್‌ನಲ್ಲಿ 548 ಜಿಗಿತಗಳನ್ನು ಸಾಧಿಸಿದರು.
ಈ ಸುದ್ದಿಯನ್ನೂ ಓದಿ: Viral Video: ಪ್ರವಾಹದ ನಡುವೆ ಬಾಹುಬಲಿ ಸಿನಿಮಾದಂತೆ ಮಗುವನ್ನು ತಲೆಯ ಮೇಲೆ ಹೊತ್ತು ಸಾಗಿದ ತಂದೆ- ವೈರಲ್ ವಿಡಿಯೊ ನೋಡಿ
ಇಲ್ಲಿಯವರೆಗೆ, ಅವರು ನಿರಂತರವಾಗಿ 220 ಜಂಪ್‌ಗಳಿಂದ 222, 226, 228, 230 ಮತ್ತು ಈಗ 238 ಜಂಪ್‌ಗಳವರೆಗೆ ತಮ್ಮ ದಾಖಲೆಗಳನ್ನು ಮುರಿದಿದ್ದಾರೆ. ಸೆನ್ ಹಲವಾರು ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ. 3 ನಿಮಿಷದ ಸಿಂಗಲ್ ರೋಪ್, 30-ಸೆಕೆಂಡ್ ಸಿಂಗಲ್ ರೋಪ್, 2×30 ಸೆಕೆಂಡ್ ಡಬಲ್ ಅಂಡರ್ಸ್, 4×30 ಸೆಕೆಂಡ್ ಡಬಲ್ ಡಚ್ ಮತ್ತು 60 ಸೆಕೆಂಡ್ ಡಬಲ್ ಡಚ್‌ನಂತಹ ಸ್ಪರ್ಧೆಗಳಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ.