ದೇವರ ಅಚ್ಚುಮೆಚ್ಚಿನ ಮಗು ಇವರೇ ನೋಡಿ; ಇಂಡಿಗೋ ಬಿಕ್ಕಟ್ಟಿನ ನಡುವೆಯೂ ಅದೃಷ್ಟದ ಪ್ರಯಾಣ ಮಾಡಿದ ಬೆಂಗಳೂರಿನ ಮಹಿಳೆ
ದೇಶಾದ್ಯಂತ ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿಗಳಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಮಹಿಳೆಯೊಬ್ಬರು ತಾನು ಪ್ರಯಾಣಿಸಿದ ಇಂಡಿಗೋ ಫ್ಲೈಟ್ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಟೇಕ್ ಆಫ್ ಆಯಿತು ಎಂದು ಹೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಇತ್ತೀಚೆಗೆ ಜೋಧ್‌ಪುರದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವಿಮಾನದಲ್ಲಿ ಅವರಿಗೆ ಯಾವುದೇ ತೊಂದರೆ ಎದುರಾಗಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಲಗೇಜ್ -
ಬೆಂಗಳೂರು, ಡಿ. 8: ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಫ್ಲೈಟ್ (Indigo Flight) ರದ್ದುಗೊಂಡಿರುವುದರಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆಯೇ ಸಾವಿರಾರು ಸಂಚಾರ ರದ್ದಾಗುತ್ತಿರುವುದರಿಂದ ಸಾವಿರಾರು ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ಅಲೆಯುವಂತಾಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ನಿರ್ಮಾನವಾಗುತ್ತಿದೆ. ಸಾವಿರಾರು ಪ್ರವಾಸಿಗರು ಏರ್‌ಪೋರ್ಟ್‌ನಲ್ಲಿ ಬಾಕಿ ಉಳಿದಿದ್ದಾರೆ. ಆದರೆ ಈ ಎಲ್ಲ ಅವ್ಯವಸ್ಥೆಯ ನಡುವೆಯೂ ಮಹಿಳೆಯೊಬ್ಬರು ತಮ್ಮ ಆರಾಮದಾಯಯಕ ಪ್ರಯಾಣದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಹಿಳೆ ತಾವು ಯಾವುದೇ ಸಮಸ್ಯೆಯ ಸುಳಿವಿಗೆ ಸಿಲುಕದೆ ಇಂಡಿಗೋದಲ್ಲಿ ಸುಗಮವಾಗಿ ಪ್ರಯಾಣಿಸಿರುವುದನ್ನು ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದೇಶಾದ್ಯಂತ ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದುಗೊಂಡಿರುವುದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲೇ ಮಹಿಳೆಯೊಬ್ಬರು ತಾನು ಪ್ರಯಾಣಿಸಿದ ಫ್ಲೈಟ್ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಟೇಕ್ ಆಫ್ ಆಯಿತು ಎಂದು ಹೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವಿಮಾನದಲ್ಲಿ ಯಾವುದೇ ತೊಂದರೆ ಎದುರಾಗಿಲ್ಲ ಎಂದು ಬೆಂಗಳೂರಿನ ಮಹಿಳೆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
took an indigo flight. flew on time. landed before time. got my luggage without drama. am I god’s favourite child or what?🧿 pic.twitter.com/JU4nhH3bXC
— Kanika (@DalRotiForLife) December 6, 2025
ವಿಮಾನವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಲ್ಯಾಂಡ್ ಆಗಿದ್ದು ಲಗೇಜ್ ಕೂಡ ಯಾವುದೇ ವಿಳಂಬ ಅಥವಾ ತೊಂದರೆಯಿಲ್ಲದೆ ತಲುಪಿತು. ಈ ಅದ್ಭುತ ಅನುಭವವನ್ನು ಶೇರ್ ಮಾಡಿಕೊಂಡ ಮಹಿಳೆ "ಇಂಡಿಗೋ ವಿಮಾನದಲ್ಲಿ ಇಂದು ಪ್ರಯಾಣ ಮಾಡಿದೆ...ಫ್ಲೈಟ್ ಸಮಯಕ್ಕೆ ಸರಿಯಾಗಿ ಟೇಕ್ ಆಫ್ ಆಗಿದ್ದಲ್ಲದೆ ಸಮಯಕ್ಕಿಂತ ಮುಂಚೆಯೇ ಲ್ಯಾಂಡ್ ಆಯಿತು. ಯಾವುದೇ ಗೊಂದಲವಿಲ್ಲದೆ ಲಗೇಜ್ ಕೂಡ ಕೈ ಸೇರಿತು. ನಾನೇನು ದೇವರ ಅಚ್ಚುಮೆಚ್ಚಿನ ಮಗುವೇ?ʼʼ ಎಂದು ಅವರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!
ಇಂಡಿಗೋ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆಗಳು ಉಂಟಾಗಿದ್ದು, ಹಲವು ವಿಮಾನಗಳು ರದ್ದುಗೊಂಡಿದ್ದಲ್ಲದೆ ಗಂಟೆಗಟ್ಟಲೆ ವಿಳಂಬವಾಗಿದ್ದವು. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತೆ ಆಗಿತ್ತು. ಇಂತಹ ಗೊಂದಲದ ವಾತಾವರಣದ ನಡುವೆಯೇ ಮಹಿಳೆ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇದು ಇಂಡಿಗೋದ ಸಾರ್ವಜನಿಕ ಸಂಪರ್ಕ (PR) ಪ್ರಯತ್ನ ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು ನೀವು ಯಾವುದೇ ಸಮಸ್ಯೆಗಳನ್ನು ಎದುರಿಸದ ಅದೃಷ್ಟಶಾಲಿ ಎಂದು ಬರೆದುಕೊಂಡಿದ್ದಾರೆ.