ಇಂಡಿಗೋ ಬಿಕ್ಕಟ್ಟಿನ ನಡುವೆಯೂ ಮನ ಮಿಡಿಯುವ ದೃಶ್ಯ: ಮಗುವಿನೊಂದಿಗೆ ಖುಷಿ ಕ್ಷಣ ಕಳೆದ ಫ್ಲೈಟ್ ಸಿಬ್ಬಂದಿ
ಕೆಲವು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯ ಅವ್ಯವಸ್ಥೆ, ಫ್ಲೈಟ್ ಕ್ಯಾನ್ಸಲ್ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ಹತಾಶರಾಗಿರುವ ದೃಶ್ಯವೇ ಸದ್ದು ಮಾಡುತ್ತಿದೆ. ಈ ಮಧ್ಯೆ ಮುಂಬೈಯ ಮಹಿಳೆಯೊಬ್ಬರು ಶೇರ್ ಮಾಡಿಕೊಂಡ ವಿಡಿಯೊ ಎಲ್ಲರ ಗಮನ ಸೆಳೆದಿದೆ.
ಫ್ಲೈಟ್ ಸಿಬ್ಬಂದಿ ಮತ್ತು ಮಗುವಿನ ಕ್ಯೂಟ್ ವಿಡಿಯೊ -
ನವದೆಹಲಿ, ಡಿ. 8: ಇಂಡಿಗೋ ವಿಮಾನಗಳ (Indigo Flight) ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಏರ್‌ಪೋರ್ಟ್‌ಗಳಲ್ಲಿ ಹಾರಾಟ ದಿಢೀರ್ ರದ್ದಾಗಿವೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ. ವಿಮಾನ ನಿಲ್ದಾಣಗಳಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದ್ದು, ಪ್ರವಾಸಿಗರು,ಉದ್ಯೋಗಿಗಳು, ಕುಟುಂಬಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಫ್ಲೈಟ್ ರದ್ದಾಗಿರುವ ಕಾರಣ ಕೆಲವು ಮದುವೆಗಳೇ ರದ್ದಾಗಿದೆ. ಕೆಲವು ಸರಿಯಾದ ಸಮಯಕ್ಕೆ ಹೋಗಲಾಗದೇ ಕೆಲಸ ಕಳೆದುಕೊಂಡಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆಯೂ ಏರ್‌ಪೋರ್ಟ್‌ನಲ್ಲಿ ಮನ ಮಿಡಿಯುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ಫ್ಲೈಟ್ ಸಿಬ್ಬಂದಿಯೊಬ್ಬರು ಪುಟ್ಟ ಮಗುವಿನೊಂದಿಗೆ ಆಟವಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದೆ.
ಕಳೆದ ಕೆಲವು ದಿನಗಳಿಂದ ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯ ಅವ್ಯವಸ್ಥೆ, ಫ್ಲೈಟ್ ಕ್ಯಾನ್ಸಲ್‌ನಿಂದಾಗಿ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ಹತಾಶರಾಗಿದ್ದಾರೆ. ಈ ಮಧ್ಯೆ ಮುಂಬೈಯ ಮಹಿಳೆಯೊಬ್ಬರು ಶೇರ್ ಮಾಡಿಕೊಂಡ ವಿಡಿಯೊ ಎಲ್ಲರ ಗಮನ ಸೆಳೆದಿದೆ. ತಾವು ಬುಕ್ ಮಾಡಿದ ವಿಮಾನ ವಿಳಂಬವಾದರೂ ತಮ್ಮ ಮಗುವು ಸಿಬ್ಬಂದಿಯೊಂದಿಗೆ ಅತ್ಯಂತ ಖುಷಿಯಿಂದ ಆಟವಾಡಿದೆ ಎಂದು ಆ ತಾಯಿ ಸಂತೋಷ ವ್ಯಕ್ತ ಪಡಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ಶೇರ್ ಮಾಡಿದ ವಿಡಿಯೊದಲ್ಲಿ ವಿಮಾನ ಸಿಬ್ಬಂದಿಯೊಬ್ಬರು ನಗುತ್ತ ಪುಟ್ಟ ಮಗುವನ್ನು ಎತ್ತಿಕೊಂಡು ಆಟವಾಡಿಸುತ್ತಿರುವ ದೃಶ್ಯ ನೋಡಬಹುದು. ಸಿಬ್ಬಂದಿ ಪುಟ್ಟ ಮಗುವಿನ ಗಮನ ವನ್ನು ಸೆಳೆಯಲು ಪ್ರಯತ್ನಿಸಿದ್ದು, ಅದರ ಮೃದುವಾದ ಕೆನ್ನೆಗಳನ್ನು ಹಿಂಡಿದ್ದಾರೆ. ಮಗು ಕೂಡ ಕುತೂಹಲದಿಂದ ಮಹಿಳೆಯನ್ನು ನೋಡಿ ಆ ಕ್ಷಣವನ್ನು ಆನಂದಿಸುತ್ತದೆ ಕಂಡು ಬಂದಿದೆ.
ಇಂಡಿಗೋ ವಿಮಾನ ಎಡವಟ್ಟು: ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!
ಮಗುವಿನ ತಾಯಿ ತಮ್ಮ ಹಂಚಿಕೊಂಡ ಪೋಸ್ಟ್‌ನಲ್ಲಿ "ಫ್ಲೈಟ್ ವಿಳಂಬವಾಗಿದ್ದರೂ ಸಿಬ್ಬಂದಿ ಯಾವಾಗಲೂ ಉತ್ತಮ ಅತಿಥೇಯ ತೋರುತ್ತಾರೆ. ಫ್ಲೈಟ್ ವಿಳಂಬದ ಕಾರಣದಿಂದಾಗಿ ಅನೇಕ ಜನರಿಗೆ ತೊಂದರೆಯಾಗಿದೆ. ಆದರೆ ಕೆಲವೊಮ್ಮೆ ಸಣ್ಣ ವಿಚಾರದಿಂದ ಸಂತೋಷವನ್ನು ಕಂಡು ಕೊಳ್ಳುವುದು ಬಹಳ ಮುಖ್ಯ. ವಿಮಾನ ಬರುವುದು ತಡವಾಯಿತು ನಿಜ. ಈ ಮಧ್ಯೆ ನನ್ನ ಪುಟ್ಟ ಮಗ ಸಿಬ್ಬಂದಿಯೊಂದಿಗೆ ಮಸ್ತಿ ಮಾಡುತ್ತಿದ್ದಾನೆ" ಎಂದು ಬರೆದುಕೊಂಡಿದ್ದಾರೆ.
ಈ ಎಲ್ಲ ಸಂಕಷ್ಟದ ನಡುವೆಯೆ ಸಿಬ್ಬಂದಿಯ ಈ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರೊಬ್ಬರು ಈ ದೃಶ್ಯ ಈ ಎಲ್ಲ ಸಮಸ್ಯೆಗಳ ನಡುವೆ ಖುಷಿ ನೀಡಿದೆ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಮಗು ಮತ್ತು ಸಿಬ್ಬಂದಿಯ ಈ ದೃಶ್ಯ ಬಹಳಷ್ಟು ಕ್ಯೂಟ್ ಆಗಿದೆ ಎಂದು ಹೇಳಿದ್ದಾರೆ.