ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಹಾರ ನೀಡಲು ಬಂದ ಮಹಿಳೆಯ ತಲೆ ಕಚ್ಚಿದ ಒಂಟೆ; ಅಷ್ಟಕ್ಕೂ ಆಗಿದ್ದೇನು?

ರಾಜಸ್ಥಾನದ ಚುರು ಜಿಲ್ಲೆಯಲ್ಲಿ 54 ವರ್ಷದ ಚುಕಿ ದೇವಿ ಎಂಬ ಮಹಿಳೆ ತನ್ನ ಸಾಕು ಒಂಟೆಗೆ ಆಹಾರ ನೀಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ವರ್ತಿಸಿ ಅವಳ ತಲೆಯನ್ನು ಕಚ್ಚಿದೆ. ಇದರಿಂದ ಒಂಟೆಯ ಹಲ್ಲುಗಳು ಅವಳ ನೆತ್ತಿಯನ್ನು ಚುಚ್ಚಿ ಆಳವಾದ ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ತಲೆಗೆ ವೈದ್ಯರು 20 ಹೊಲಿಗೆ ಹಾಕಿದ್ದಾರೆ.ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಮಹಿಳೆಯ ತಲೆಗೆ ಕಚ್ಚಿದ ಒಂಟೆ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

Profile pavithra Jul 18, 2025 6:52 PM

ಜೈಪುರ್: ಸಾಕು ಪ್ರಾಣಿಗಳು ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತವೆ.ಇದೀಗ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, 54 ವರ್ಷದ ಮಹಿಳೆಯೊಬ್ಬಳು ತನ್ನ ಸಾಕು ಒಂಟೆಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ. ತನ್ನ ಹೊಲದಲ್ಲಿ ಒಂಟೆಗೆ(Camel)ಆಹಾರ ನೀಡುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಈ ಸುದ್ದಿ ಈಗ ವೈರಲ್‌(Viral Video) ಆಗಿದೆ.

ಚುಕಿ ದೇವಿ ಒಂಟೆಯ ದಾಳಿಯಿಂದ ಗಾಯಗೊಂಡ ಮಹಿಳೆ. ಈಕೆಯ ಕುಟುಂಬ ಸದಸ್ಯರು ತಿಳಿಸಿದ ಪ್ರಕಾರ, ಚುಕಿ ದೇವಿ ತನ್ನ ಸಂಬಂಧಿಕರೊಂದಿಗೆ ಹೊಲದಿಂದ ಕಳೆಗಳನ್ನು ಕೀಳುತ್ತಿದ್ದಳು. ಕೆಲಸ ಮುಗಿದ ನಂತರ, ಅವಳು ಎಂದಿನಂತೆ ತನ್ನ ಒಂಟೆಗೆ ಆಹಾರ ನೀಡಲು ಹೋಗಿದ್ದಾಳೆ. ಆದರೆ, ಆ ಒಂಟೆ ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ತಿರುಗಿ ಅವಳ ತಲೆಯನ್ನು ಕಚ್ಚಿದೆ. ಒಂಟೆಯ ಹಲ್ಲುಗಳು ಅವಳ ನೆತ್ತಿಯನ್ನು ಚುಚ್ಚಿ ಅವಳ ತಲೆಗೆ ಪೆಟ್ಟಾಗಿದೆ. ಇದರಿಂದ ತೀವ್ರವಾಗಿ ರಕ್ತಸ್ರಾವವಾಗಿ ಅವಳು ನೋವಿನಿಂದ ಕಿರುಚಿದ್ದಾಳೆ.

ಆಕೆಯ ಕಿರುಚಾಟ ಕೇಳಿ, ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಒಂಟೆಯನ್ನು ಕೋಲುಗಳಿಂದ ಹೊಡೆದು ಆಕೆಯನ್ನು ಬಿಡಿಸಿದ್ದಾರೆ. ತಕ್ಷಣ ಆಕೆಯನ್ನು ಚುರುವಿನ ಸರ್ಕಾರಿ ಭಾರತೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವಳನ್ನು ಪರೀಕ್ಷಿಸಿದ ವೈದ್ಯರು ಅವಳ ತಲೆಗೆ ಆಳವಾದ ಗಾಯಗಳಾಗಿದ್ದರಿಂದ 20 ಹೊಲಿಗೆಗಳು ಹಾಕಬೇಕಾಗಿವೆ ಎಂದು ದೃಢಪಡಿಸಿದರು. ತಲೆಯ ಆಂತರಿಕ ಗಾಯಗಳನ್ನು ಪರಿಶೀಲಿಸಲು ಸಿಟಿ ಸ್ಕ್ಯಾನ್ ಅನ್ನು ಸಹ ನಡೆಸಲಾಯಿತು. ಅವಳ ಸ್ಥಿತಿ ಈಗ ಸ್ಥಿರವಾಗಿದ್ದರೂ, ಆಕೆಯನ್ನು ಮೇಲೆ ನಿಗಾ ಇಡಲು ಐಸಿಯುನಲ್ಲಿ ಇರಿಸಲಾಗಿದೆ.

ಘಟನೆಯ ಬಗ್ಗೆ ಕುಟುಂಬ ಆಘಾತ ವ್ಯಕ್ತಪಡಿಸಿದ್ದು, ಒಂಟೆ ಹಿಂಸಾತ್ಮಕವಾಗಿ ಬದಲಾಗಬಹುದೆಂದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇಂತಹ ಪ್ರಾಣಿಗಳ ದಾಳಿಯನ್ನು ತಡೆಯಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಜ್ಞರು ತಿಳಿಸಿದಂತೆ, ವಿಶೇಷವಾಗಿ ಒಂಟೆಗಳಂತಹ ದೊಡ್ಡ ಪ್ರಾಣಿಗಳು ಒತ್ತಡ, ವಿಪರೀತ ಶಾಖದಿಂದಾಗಿ ಸಡನ್ ಆಗಿ ಆಕ್ರಮಣಕಾರಿಯಾಗಬಹುದು. ಸಾಕುಪ್ರಾಣಿಗಳಾಗಿದ್ದರೂ ಸಹ, ಅಂತಹ ಪ್ರಾಣಿಗಳನ್ನು ನಿರ್ವಹಿಸುವಾಗ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡುತ್ತಾರೆ.

ಈ ಸುದ್ದಿಯನ್ನೂ ಓದಿ:Viral Video: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ... ಏನಿದು ಇಂಟ್ರೆಸ್ಟಿಂಗ್ ಕಹಾನಿ?

ಈ ಪ್ರದೇಶದಲ್ಲಿ ಇಂತಹ ಪ್ರಕರಣ ನಡೆದಿದ್ದು ಇದೇ ಮೊದಲಲ್ಲ. ಕಿಶನ್‌ಗಢ (ಅಜ್ಮೀರ್) ನ ಪಿತಾಂಬರ್ ಕಿ ಗಾಲ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, ಅಲ್ಲಿನ 72 ವರ್ಷದ ರಾಕೇಶ್ ವಿಲ್ಸನ್ ಎಂಬ ವ್ಯಕ್ತಿ ಜೇನುನೊಣಗಳಿಂದ ದಾಳಿಗೊಳಗಾಗಿ ಸಾವನ್ನಪ್ಪಿದನು.