ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬೀಚ್‌ನಲ್ಲಿ ರೊಮ್ಯಾನ್‌ ಮಾಡುತ್ತ ಮೈಮರೆತ ಜೋಡಿ: ಮಹಿಳೆ ನೀರುಪಾಲು...ವೈರಲ್ ಆಯ್ತು ಭಯಾನಕ ವಿಡಿಯೊ

ಸುಂದರ ಕ್ಷಣಗಳನ್ನು ಕಳೆಯುವ ಆಸೆಯಲ್ಲಿ ಅವರಿಬ್ಬರು ಬೀಚ್‌ಗೆ ಬಂದಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಮಹಿಳೆ ತನ್ನ ಗೆಳೆಯನೊಂದಿಗೆ ಬೀಚ್‌ಗೆ ಬಂದಿದ್ದು, ಜತೆಜತೆಯಾಗಿ ಹೆಜ್ಜೆ ಹಾಕುತ್ತಿದ್ದಾಗಲೇ ಬೃಹತ್ ಅಲೆಯೊಂದು ಎದುರಾಗಿದೆ. ಈ ಅಲೆಗೆ ಸಿಲುಕಿ ಮಹಿಳೆ ಕೊಚ್ಚಿಕೊಂಡು ಹೋಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಬೀಚ್‌ನಲ್ಲಿ ರೋಮ್ಯಾನ್ಸ್‌ನಲ್ಲಿದ್ದಾಗ ನಡೆಯಿತು ದುರಂತ

ಮಾಸ್ಕೋ: ನದಿ, ಸಮುದ್ರ, ಜಲಪಾತಗಳ ಬಳಿ ಕೊಂಚ ಎಚ್ಚರ ತಪ್ಪಿದರೂ ಸಾಕು ದೊಡ್ಡ ದುರಂತವೇ ನಡೆದುಹೋಗುತ್ತದೆ. ನೀರಿನೊಂದಿಗೆ ಆಟವಾಡಲು ಹೋಗಿ ಅದೆಷ್ಟೋ ಮಂದಿ ಕ್ಷಣಮಾತ್ರದಲ್ಲಿ ಪ್ರಾಣ ಕಳೆದುಕೊಂಡಿರುವ ಹಲವಾರು ಘಟನೆಗಳಿವೆ. ಅಂತಹುದ್ದೇ ಒಂದು ಘಟನೆ ಈಗ ರಷ್ಯಾದ (Russia) ಸೋಚಿಯಲ್ಲಿ(Sochi beach) ನಡೆದಿದೆ. ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ. ಮಹಿಳೆಯೊಬ್ಬರು ತನ್ನ ಗೆಳೆಯನೊಂದಿಗೆ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಮುದ್ರ ಪಾಲಾಗಿದ್ದಾರೆ. ಈ ಭಯಾನಕ ಘಟನೆ ನಡೆದು ಹಲವು ದಿನಗಳಾಗಿದ್ದು,ಈಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸುಂದರ ಕ್ಷಣಗಳನ್ನು ಕಳೆಯುವ ಆಸೆಯಲ್ಲಿ ಅವರಿಬ್ಬರು ಬೀಚ್‌ಗೆ ಬಂದಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಮಹಿಳೆ ತನ್ನ ಗೆಳೆಯನೊಂದಿಗೆ ಹೆಜ್ಜೆ ಹಾಕುತ್ತಿದ್ದಾಗಲೇ ಬೃಹತ್ ಅಲೆಯೊಂದು ಅಪ್ಪಳಿಸಿದೆ. ಈ ವೇಳೆ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ಘಟನೆ ನಡೆದು ಹಲವು ದಿನಗಳಾದರೂ ಮಹಿಳೆಯ ಯಾವುದೇ ಸುಳಿವು ಸಿಕ್ಕಿಲ್ಲ.

ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಜೋಡಿಗಳು ರೊಮಾನ್ಸ್​ ಮಾಡುತ್ತಿರುವುದನ್ನು ಕಾಣಬಹುದು. ಅವರು ಸಂತೋಷದ ಕ್ಷಣದಲ್ಲಿದ್ದಾಗಲೇ ಈ ದುರಂತ ನಡೆದಿದೆ.

ಇದನ್ನೂ ಓದಿ: Viral Video: ಮದುವೆಯಾದ ಬೆನ್ನಲ್ಲೇ ಭರ್ಜರಿಯಾಗಿ ಹೆಜ್ಜೆ ಹಾಕಿದ ಸಂಸದೆ ಮಹುವಾ ಮೊಯಿತ್ರಾ; ವಿಡಿಯೊ ವೈರಲ್

ಸಮುದ್ರದ ಅಲೆಗಳ ಜತೆ ಅವರು ಹೆಜ್ಜೆ ಹಾಕುತ್ತಿದ್ದರು. ಪರಸ್ಪರ ಚುಂಬಿಸುತ್ತಿದ್ದಾಗ ಭಾರಿ ಗಾತ್ರದ ಅಲೆಯೊಂದು ಅವರಿಬ್ಬರನ್ನು ಬೇರೆ ಬೇರೆ ಮಾಡಿದೆ. ಯುವಕ ತನ್ನ ಸ್ನೇಹಿತೆಯನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ವಿಫಲನಾಗಿದ್ದಾನೆ. ಭಾರಿ ಗಾತ್ರದ ಅಲೆಗಳು ಆತನನ್ನು ಸಮುದ್ರದಿಂದ ಹೊರ ದೂಡಿದರೆ ಮಹಿಳೆಯನ್ನು ತನ್ನತ್ತ ಸೆಳೆದುಕೊಂಡಿರುವ ಸಂಪೂರ್ಣ ದೃಶ್ಯವಾಳಿಗಳು ಕೆಮರಾದಲ್ಲಿ ಸೆರೆಯಾಗಿದೆ.

ಈ ಘಟನೆ ರಷ್ಯಾದಲ್ಲಿ ನಡೆದಿದ್ದರೂ ಸಮುದ್ರ ತೀರದಲ್ಲಿ ನಡೆಯಬಹುದಾದ ಅಪಾಯಗಳ ಬಗ್ಗೆ ಎಲ್ಲರನ್ನೂ ಎಚ್ಚರಿಸುವಂತಿದೆ.