ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೆಸ್ಟೋರೆಂಟ್‌ನಲ್ಲಿ ವೈದ್ಯಗೆ ಕಾದಿತ್ತು ಸರ್‌ಪ್ರೈಸ್‌: ಪತ್ನಿಗೆ ಮರುಜನ್ಮ ನೀಡಿದವರು ನೀವು ಎಂದು ಬಿಲ್ ಪಾವತಿಸಿದ ಪತಿ

Viral News: ರೆಸ್ಟೋರೆಂಟ್‌ಗೆ ಊಟಕ್ಕೆಂದು ತೆರಳಿದ್ದ ವೈದ್ಯರ ಬಿಲ್ ಅನ್ನು ಅಪರಿಚಿತ ದಂಪತಿ ಪಾವತಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಭಾರಿ ವೈರಲ್ ಆಗಿದ್ದು ಈ ಬಗ್ಗೆ ವೈದ್ಯರೇ ಭಾವುಕರಾಗಿದ್ದಾರೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಫೆ. 3: ವೈದ್ಯರು ದೇವರಿಗೆ ಸಮಾನ ಎನ್ನುವುದನ್ನು ಹೆಚ್ಚಿನವರು ಅರಿತಿದ್ದಾರೆ. ಜೀವ ಉಳಿಸುವ ವೈದ್ಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅಂತೆಯೇ ದೆಹಲಿಯಲ್ಲಿ ನಡೆದ ಈ ಘಟನೆ ಹೆಚ್ಚಿನವರ ಹೃದಯ ಗೆದ್ದಿದೆ. ರೆಸ್ಟೋರೆಂಟ್‌ಗೆ ಊಟಕ್ಕೆಂದು ತೆರಳಿದ್ದ ವೈದ್ಯರ ಬಿಲ್ ಅನ್ನು ಅಪರಿಚಿತ ದಂಪತಿ ಪಾವತಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯೂ ಭಾರಿ ವೈರಲ್ (Viral News) ಆಗಿದ್ದು ಈ ಬಗ್ಗೆ ವೈದ್ಯರೇ ಭಾವುಕರಾಗಿದ್ದಾರೆ.

ವೈದ್ಯರೊಬ್ಬರ ಬಿಲ್ ಅನ್ನು ಸದ್ದಿಲ್ಲದೆ ಪಾವತಿಸುವ ಮೂಲಕ ಅವರಿಗೆ ಧನ್ಯವಾದ ಆರ್ಪಿಸಿದ ಕುಟುಂಬದ ಬಗ್ಗೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ದೆಹಲಿಯ ವೈದ್ಯ ಡಾ. ಇದ್ರಿಸ್ ತಾಹಿರ್ ಇತ್ತೀಚೆಗೆ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಆಗ ಅಲ್ಲಿದ್ದ ಪಕ್ಕದ ಟೇಬಲ್‌ನಲ್ಲಿ ದಂಪತಿ ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಊಟ ಮಾಡುತ್ತಿದ್ದರು. ವೈದ್ಯರನ್ನು ಗಮನಿಸಿದ ಈ ದಂಪತಿ ವೈದ್ಯರ ಬಿಲ್ ಕೂಡ ಪಾವತಿ ಮಾಡಿದ್ದಾರೆ.

ವೈರಲ್‌ ಪೋಸ್ಟ್‌:



ಊಟ ಮುಗಿಸಿ ಡಾಕ್ಟರ್ ಬಿಲ್ ಪಾವತಿಸಲು ಹೋದಾಗ ಕೌಂಟರ್‌ನಲ್ಲಿದ್ದ ವ್ಯಕ್ತಿ ನಿಮ್ಮ ಬಿಲ್ ಅನ್ನು ಈಗಾಗಲೇ ಪಕ್ಕದ ಟೇಬಲ್‌ನವರು ಪಾವತಿಸಿದ್ದಾರೆ ಎಂದು ತಿಳಿಸಿದರು. ಗೊಂದಲಕ್ಕೊಳಗಾದ ವೈದ್ಯ ಯಾಕೆ ಪಾವತಿಸಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರ ಅವರನ್ನು ಭಾವುಕರನ್ನಾಗಿ ಮಾಡಿದೆ. "ನೀವು ಬಹುಶಃ ನನ್ನನ್ನು ಗುರುತಿಸರಲಿಕ್ಕಿಲ್ಲ. ಆದರೆ ಐದು ತಿಂಗಳ ಹಿಂದೆ ನನ್ನ ಗರ್ಭಿಣಿ ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡಿದವರು ನೀವು. ಈಗ ಅವಳಿ ಮಕ್ಕಳು ನಮ್ಮೊಂದಿಗೆ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸಲ್ಲಿಸಿದ ಒಂದು ಸಣ್ಣ ಅರ್ಪಣೆ ಎಂದಿದ್ದಾರೆ.

ಸ್ಕೂಟರ್‌ನಿಂದ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಕಾರು

ಈ ಘಟನೆಯನ್ನು ಡಾ. ಇದ್ರಿಸ್ ತಾಹಿರ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಕ್ಷಣಗಳು, ಕೆಲಸಕ್ಕೆ ಸಿಗುವ ತೃಪ್ತಿ. ನಮ್ಮನ್ನು ಮುನ್ನಡೆಸುವ ಕೆಲವು ವಿಷಯಗಳಲ್ಲಿ ಇದೂ ಸೇರಿದೆ ಎಂದು ಬರೆದಿದ್ದಾರೆ. ಈ ಪೋಸ್ಟ್ ಅನ್ನು ಇಲ್ಲಿಯವರೆಗೆ 1.21 ಲಕ್ಷ ಬಾರಿ ವೀಕ್ಷಿಸಲಾಗಿದೆ. ಅನೇಕ ಬಳಕೆದಾರರು ಪೋಸ್ಟ್‌ಗೆ ಹೃತ್ಪೂರ್ವಕವಾಗಿ ಪ್ರತಿಕ್ರಿಯಿಸಿದ್ದಾರೆ.

ಬಳಕೆದಾರರೊಬ್ಬರು ವೈದ್ಯರಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಕ್ಷಣಗಳು ನಿಮ್ಮನ್ನು ಯಾವಾಗಲೂ ನೆನಪಿನಲ್ಲಿ ಇಡುವಂತೆ ಮಾಡುತ್ತದೆ ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದಿದ್ದಾರೆ.