ದುಬಾರಿ ಫೋನ್ ಬೇಡ..ಕೀಪ್ಯಾಡ್ ಫೋನ್ ಸಾಕು! ತಾಜ್ ಮಹಲ್ ವೀಕ್ಷಣೆಗೆ ಬಂದ ಬಡ ದಂಪತಿಯ ವಿಡಿಯೋ ಕಂಡು ನೆಟ್ಟಿಗರು ಫಿದಾ!
Viral Video: ಇಲ್ಲೊಂದು ದಂಪತಿ ತಾಜ್ ಮಹಲ್ ಭೇಟಿ ನೀಡಿದ್ದು ಆ ಸ್ಥಳದ ಜ್ಞಾಪಕಾರ್ಥವಾಗಿ ತಮ್ಮ ಕೀಪ್ಯಾಡ್ ಸೆಟ್ ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋದಲ್ಲಿ ಕ್ಯಾಮರಾ ಗುಣಮಟ್ಟ ಪರಿಪೂರ್ ವಾಗಿಲ್ಲದಿದ್ದರೂ ಅಲ್ಲಿಗೆ ತೆರಳಿದ್ದ ನೆನಪನ್ನು ಸದಾ ಜೋಪಾನವಾಗಿಸುವ ಆ ಬ್ಲರ್ ಫೋಟೊ ಕೂಡ ತುಂಬಾ ಮಹತ್ವದ್ದಾಗಿದೆ ಎಂದು ಈ ದಂಪತಿಗಳು ಸಾಬೀತು ಪಡಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ತಾಜ್ ಮಹಲ್ ವೀಕ್ಷಣೆಗೆ ಬಂದ ದಂಪತಿ -
ನವದೆಹಲಿ, ಜ. 4: ಬಹುತೇಕ ಜನರು ಇಂದು ಮೊಬೈಲ್ ಫೋನ್ ಮೇಲೆ ಅತಿಯಾಗಿ ಅವಲಂಬಿಸಿದ್ದಾರೆ. ಫೋಟೊ ತೆಗೆಯಲು, ರೀಲ್ಸ್ ಮಾಡಲು, ಮಾತನಾಡಲು, ಸೋಶಿಯಲ್ ಮಿಡಿಯಾ ಬಳಸಲು ಎಲ್ಲದಕ್ಕೂ ಮೊಬೈಲ್ ಫೋನ್ ಬೇಕು. ಬಳಕೆದಾರರು ಹೆಚ್ಚಾದಂತೆ ಕೀಪ್ಯಾಡ್ ಸೆಟ್ ಬದಲಾಗಿ ಸ್ಮಾರ್ಟ್ ಫೋನ್ ಹೊಸ ಹೊಸ ವರ್ಶನ್ ಬರುವ ಪ್ರಮಾಣ ಕೂಡ ಹೆಚ್ಚಾಗಿದೆ. ಈಗಂತೂ ಕೀಪ್ಯಾಡ್ ಸೆಟ್ ಬಳಕೆ ಮಾಡುವವರ ಪ್ರಮಾಣ ಬಹಳ ಕಡಿಮೆ ಆಗಿದೆ ಎಂದು ಹೇಳಬಹುದು. ಆದರೆ ಇಲ್ಲೊಂದು ದಂಪತಿ ತಾಜ್ ಮಹಲ್ (Taj Mahal) ಭೇಟಿ ನೀಡಿದ್ದು ಆ ಸ್ಥಳದ ನೆನಪಿಗಾಗಿ ತಮ್ಮ ಕೀಪ್ಯಾಡ್ ಸೆಟ್ ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋದಲ್ಲಿ ಕ್ಯಾಮರಾ ಗುಣಮಟ್ಟ (Viral Video) ಪರಿಪೂರ್ಣವಾಗಿಲ್ಲದಿ ದ್ದರೂ ಅಲ್ಲಿಗೆ ತೆರಳಿದ್ದ ನೆನಪನ್ನು ಸದಾ ಜೋಪಾನವಾಗಿಸುವ ಆ ಬ್ಲರ್ ಫೋಟೊ ಕೂಡ ತುಂಬಾ ಮಹತ್ವದ್ದಾಗಿದೆ ಎಂದು ಈ ದಂಪತಿಗಳು ಸಾಬೀತು ಪಡಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಗ್ರದ ತಾಜ್ ಮಹಲ್ ಅನ್ನು ಪ್ರೀತಿಯ ಸಂಕೇತ ಎಂದೆ ಬಹುತೇಕರು ಹೇಳುತ್ತಾರೆ. ಹೀಗಾಗಿ ಇದನ್ನು ನೋಡಲು ಪ್ರಪಂಚದಾದ್ಯಂತ ಇರುವ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಂತೆಯೇ ತಾಜ್ ಮಹಲ್‌ನಲ್ಲಿ ಭೇಟಿ ನೀಡಿದ್ದ ದಂಪತಿಗಳಿಬ್ಬರು ತಮ್ಮ ಫೋಟೊ ತೆಗೆಸಿಕೊಳ್ಳಲು ಪರದಾಡು ತ್ತಿದ್ದರು. ಅದನ್ನು ಕಂಡ ಇನ್ನೊರ್ವ ಪ್ರವಾಸಿಗನು ಅವರ ಫೋಟೊ ತೆಗೆಯಲು ಸಹಾಯಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆ ವ್ಯಕ್ತಿ ದಂಪತಿಗಳ ವಿಡಿಯೋ ಮಾಡಿದ್ದು ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ವಿಡಿಯೋ ನೋಡಿ
ಇತ್ತೀಚೆಗೆ ಬಹುತೇಕ ಜನರು ತಮ್ಮ ಸ್ಮಾರ್ಟ್ ಫೋನ್ ಇದ್ದರೂ ಅದರಲ್ಲಿ ಕ್ಯಾಮರಾ ಫಿಲ್ಟರ್‌ಗಳು ಬಳಸುತ್ತಾರೆ. ಆದರೆ ಈ ದಂಪತಿಗಳ ಬಳಿ ಇರುವುದು ಕೀಪ್ಯಾಡ್ ಸೆಟ್ ಆಗಿದ್ದು ಅದರಲ್ಲೇ ಫೋಟೊ ತೆಗೆಯುವಂತೆ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ವ್ಯಕ್ತಿಯೂ ಕೀ ಪ್ಯಾಡ್ ಸೆಟ್ ನಲ್ಲಿ ಕ್ಯಾಮರಾ ಆಪ್ಶನ್ ತೆಗೆದು ಬಳಿಕ ಅದರಲ್ಲಿ ಫೋಟೊ ಕ್ಲಿಕ್ಕಿಸಿದ್ದಾನೆ. ತಾಜ್ ಮಹಲ್ ಎದುರು ದಂಪತಿಗಳು ನಿಂತುಕೊಂಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಫೋಟೊ ಬಹಳ ಬ್ಲರ್ ಆಗಿದೆ. ಕೀ ಪ್ಯಾಡ್ ಸೆಟ್ ನಲ್ಲಿ ಕ್ಲ್ಯಾರಿಟಿ ಇರಲಾರದು ಎಂದು ಫೋಟೊ ತೆಗೆದವನು ದಂಪತಿಗೆ ತಿಳಿಸಿದ್ದಾನೆ. ಆಗ ಆ ದಂಪತಿ ನಮಗೆ ಇಷ್ಟು ಸಾಕು ಪರವಾಗಿಲ್ಲ ಸರ್, ಧನ್ಯವಾದಗಳು ಎಂದು ತಿಳಿಸಿದ್ದಾರೆ. ಮೆಗಾಪಿಕ್ಸೆಲ್ ಗಳಿಗಿಂತ ನೆನಪುಗಳು ಮುಖ್ಯ ಎಂಬುದನ್ನು ಈ ದಂಪತಿಗಳು ತಿಳಿಸಿಕೊಟ್ಟಿದ್ದಾರೆ. ಸದ್ಯ ಈ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಕ್ಕೆ ಅಧಿಕ ವೀಕ್ಷಣೆ ಹಾಗೂ ಲೈಕ್ಸ್ ಅನ್ನು ಕೂಡ ಪಡೆದಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಕೂಡ ಹಾಕಿದ್ದಾರೆ.
Viral Video: ಪ್ರವಾಹದಿಂದ ಮುಳುಗಿದ ಯುಎಇ; ಮರುಭೂಮಿ ರಾಷ್ಟ್ರದಲ್ಲಿ ಇಷ್ಟೊಂದು ಭಾರಿ ಮಳೆ ಏಕೆ?
ಇತ್ತೀಚಿನ ಜನಾಂಗದವರು ಫೋಟೊಗಾಗಿಯೇ ದುಬಾರಿ ಮೊತ್ತದ ಮೆಗಾಫಿಕ್ಸಲ್ ಕ್ಯಾಮರಾ ಇರುವ ಫೋನ್ ಖರೀದಿ ಮಾಡುತ್ತಾರೆ. ಅದರಲ್ಲಿ ಸಾವಿರಾರು ಫೋಟೊ ತೆಗೆಸಿ ಸೋಶಿಯಲ್ ಮಿಡಿಯಾ ದಲ್ಲಿ ಅಪ್ಲೋಡ್ ಮಾಡಿ ಸುಮ್ಮನಾಗುತ್ತಾರೆ. ಆದರೆ ತಾವು ಹೋದ ಪ್ರವಾಸಿಸ್ಥಳ, ದೇಗುಲ ಇವುಗಳ ಸೌಂದರ್ಯವನ್ನು ಸವಿಯದೇ ಫೋಟೊ ಕ್ಲಿಕ್ಲಿಸುದರಲ್ಲಿ ಮಗ್ನರಾಗುತ್ತಾರೆ. ಅಂತವರಿಗೆ ಹೋಲಿಸಿ ದರೆ ಈ ದಂಪತಿಗಳು ಎಷ್ಟೋ ಮೇಲು. ಸರಳ ಜೀವನದಲ್ಲಿ ಸಾರ್ಥಕತೆ ಕಂಡಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಟೊದಲ್ಲಿ ಇರುವ ಜನರು ಬಹಳ ಮುಗ್ದರಾಗಿದ್ದು ಅವರಿಗೆ ಕ್ಲ್ಯಾರಿಟಿ ಫೋಟೊಗಿಂತಲು ಆ ಕ್ಷಣ ನೆನಪಾಗಿ ಉಳಿಯುವುದೇ ಮುಖ್ಯವಾಗಿದೆ. ಇದು ಬರಿಯ ನೆನಪಲ್ಲ, ಇದು ಜೀವನದ ತುಂಬಾ ಅಮೂಲ್ಯ ಕ್ಷಣ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ..