ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕುಡಿಯೋದೆ ನನ್ನ ವೀಕ್ನೆಸ್ಸು... ತಲೆಗೆ ಬ್ಯಾಂಡೇಜ್, ಕೈಯಲ್ಲಿ ಮೂತ್ರದ ಚೀಲ ಹಿಡಿದು ಬಾರ್‌ಗೆ ಎಂಟ್ರಿ!

Patient Drink Liquor: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಆಸ್ಪತ್ರೆಯ ಹಾಸಿಗೆಯಿಂದ ಎದ್ದು ಹೊರಬಂದ ಆತ ತಲೆಯಲ್ಲಿ ಬ್ಯಾಂಡೇಜ್, ಕೈಯಲ್ಲಿ ಮೂತ್ರದ ಚೀಲ ಹಿಡಿದುಕೊಂಡು ತಲುಪಿದ್ದು ಮದ್ಯದಂಗಡಿಗೆ! ಇದರ ವಿಡಿಯೊ ವೈರಲ್ ಆಗಿದೆ.

ಕುಡಿಯೋದೆ ನನ್ನ ವೀಕ್ನೆಸ್ಸು... ಭಾರೀ ವೈರಲಾಗ್ತಿದೆ ಈ ವಿಡಿಯೊ

-

Priyanka P Priyanka P Oct 28, 2025 1:05 PM

ಲಖನೌ: ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಕೈಯಲ್ಲಿ ಮೂತ್ರದ ಚೀಲವನ್ನು ಹಿಡಿದುಕೊಂಡು ಮದ್ಯದಂಗಡಿಗೆ ನಡೆದುಕೊಂಡು ಹೋಗಿದ್ದಾರೆ. ಮದ್ಯ (Liquor) ಖರೀದಿಸಿದ ರೋಗಿಯು ಅದನ್ನು ಕುಡಿದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವಿಪಿನ್ ಎಂದು ಗುರುತಿಸಲಾದ ರೋಗಿಯು ತಲೆ, ಕೈಗೆ ಬ್ಯಾಂಡೇಜ್ ಕಟ್ಟಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ, ಹಾಸಿಗೆಯಿಂದ ಎದ್ದು, ಮೂತ್ರದ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಹತ್ತಿರದ ಮದ್ಯದ ಅಂಗಡಿಯನ್ನು ತಲುಪಿದ ರೋಗಿಯು ಮದ್ಯವನ್ನು ಖರೀದಿಸಿ, ಅಲ್ಲೇ ಗಟಗಟನೆ ಕುಡಿದಿದ್ದಾನೆ. ಕೆಲವು ಕ್ಷಣಗಳ ನಂತರ, ಮೂರ್ಛೆ ಹೋಗಿ ನೆಲಕ್ಕೆ ಬಿದ್ದಿದ್ದಾನೆ. ಇದನ್ನು ನೋಡಿದ ಜನರು ಅವನ ಸಹಾಯಕ್ಕೆ ಧಾವಿಸಿದರು. ವರದಿಗಳ ಪ್ರಕಾರ, ವಿಪಿನ್ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಆತ ಈ ರೀತಿ ವರ್ತಿಸಿದ್ದಾನೆ. ಅಪಘಾತದಿಂದ ಉಂಟಾದ ಗಾಯದಿಂದಾಗಿ ಆತನ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವನ ತಾಯಿ ತಿಳಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ರಾಜೇಶ್ ಕುಮಾರ್ ಘಟನೆಯನ್ನು ದೃಢಪಡಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊ ನಮ್ಮ ಗಮನಕ್ಕೆ ಬಂದಿದೆ. ರೋಗಿಯು ವಾರ್ಡ್‌ನಿಂದ ಮೇಲ್ವಿಚಾರಣೆಯಿಲ್ಲದೆ ಹೇಗೆ ಹೊರನಡೆದರು ಎಂಬುದನ್ನು ತಿಳಿದುಕೊಳ್ಳಲು ಈ ವಿಚಾರವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Viral Video: ಎಣ್ಣೆ ಮತ್ತಲ್ಲಿ ಯುವತಿಗೆ ಕಿರುಕುಳ; ಪಾಠ ಕಲಿಸಲು ಆಕೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಈ ಘಟನೆಯು ಆಸ್ಪತ್ರೆಯ ಭದ್ರತೆ ಮತ್ತು ರೋಗಿಗಳ ಮೇಲ್ವಿಚಾರಣಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಥಳೀಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಸ್ಥಿತಿಯಲ್ಲಿರುವ ರೋಗಿಯು ಹೇಗೆ ಹೊರನಡೆಯಬಹುದು. ಆಸ್ಪತ್ರೆಯಲ್ಲಿದ್ದ ಯಾರೂ ಆತನ ಬಗ್ಗೆ ಗಮನವಹಿಸಲಿಲ್ಲವೆ ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಮದ್ಯದ ಬಾಟಲಿ ಕದಿಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಕುಡುಕ

ಇತ್ತೀಚೆಗೆ ಕುಡುಕನೊಬ್ಬ ಮದ್ಯದ ಬಾಟಲಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮದ್ಯದ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿತ್ತು. ಈ ಹಾಸ್ಯಾಸ್ಪದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಇತರ ಗ್ರಾಹಕರು ಕೂಡಲೇ ಅವನನ್ನು ಕಬ್ಬಿಣದ ಗ್ರಿಲ್‍ನಿಂದ ರಕ್ಷಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯು ಜನನಿಬಿಡ ಮದ್ಯದ ಅಂಗಡಿಯಲ್ಲಿ ಮದ್ಯದ ಬಾಟಲಿಯನ್ನು ಕಳ್ಳತನ ಮಾಡಲು ಹೋದಾಗ ಅಂಗಡಿಯ ಕಬ್ಬಿಣದ ಗ್ರಿಲ್‍ನಲ್ಲಿ ಸಿಲುಕಿಕೊಂಡಿದ್ದ.