ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಬೆಂಕಿ ದುರಂತ: ಲಕ್ಷಾಂತರ ರುಪಾಯಿ ನಷ್ಟದ ಬಗ್ಗೆ ಯೋಚಿಸದೆ ಸಂತ್ರಸ್ತರ ಜೀವ ರಕ್ಷಣೆಗೆ ಮುಂದಾದ ಸ್ಥಳೀಯ ಅಂಗಡಿ ಮಾಲಕ

ದೆಹಲಿಯಲ್ಲಿ ಬುಧವಾರ ನಡೆದ ಬೆಂಕಿ ದುರಂತದ ವೇಳೆ ಜೀವ ರಕ್ಷಣೆಗಾಗಿ ಸ್ಥಳೀಯ ಅಂಗಡಿ ಮಾಲೀಕರೊಬ್ಬರು ತಮಗಾಗ ಬಹುದಾದ ಲಕ್ಷಾಂತರ ರೂಪಾಯಿ ನಷ್ಟದ ಬಗ್ಗೆ ಯೋಚಿಸದೆ ಸಹಾಯಕ್ಕೆ ಮುಂದಾದರು. ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅವರಿಗೆ ಪರಿಹಾರ ಒದಗಿಸಬೇಕು ಎಂದು ಅನೇಕರು ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ದೆಹಲಿ ಬೆಂಕಿ ದುರಂತದ ಹೀರೋ ಇವರು

ಸಂಗ್ರಹ ಚಿತ್ರ -

ನವದೆಹಲಿ: ದಕ್ಷಿಣ ದೆಹಲಿಯ (delhi) ಮಾಳವೀಯ ನಗರದಲ್ಲಿ (Malaviya) ಬುಧವಾರ ಸಂಭವಿಸಿದ ಬೆಂಕಿ ದುರಂತದಲ್ಲಿ (fire accident) ರೆಸ್ಟೋರೆಂಟ್ ನಲ್ಲಿ ಉಳಿದುಕೊಂಡಿದ್ದ ಅತಿಥಿಗಳ ರಕ್ಷಣೆಗಾಗಿ ಸ್ಥಳೀಯ ಅಂಗಡಿ ಮಾಲೀಕರೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆ, ಕಂಬಳಿಗಳನ್ನು ನೀಡಿದ್ದಾರೆ. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (viral news) ಆಗಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅವರಿಗೆ ಪರಿಹಾರ ಒದಗಿಸುವಂತೆ ಅನೇಕರು ಆಗ್ರಹವನ್ನು ಕೂಡ ಮಾಡಿದ್ದಾರೆ. ಮಾಳವೀಯ ನಗರದ ಅತ್ಯಂತ ಕಿರಿದಾದ ಜನದಟ್ಟಣೆಯ ಹೌಜ್ ರಾಣಿ ಪ್ರದೇಶದ ಬೆಡ್ ಆಂಡ್ ಬ್ರೇಕ್‌ಫಾಸ್ಟ್ ಫ್ಲೋರಿಶ್ ಸ್ಟೇಸ್‌ನಲ್ಲಿ ಬುಧವಾರ ಮುಂಜಾನೆ ಬೆಂಕಿ ದುರಂತ ಸಂಭವಿಸಿ ಒಟ್ಟು 21 ಮಂದಿ ಸಾವನ್ನಪ್ಪಿದ್ದರು.

ದೆಹಲಿಯ ಬೆಂಕಿ ದುರಂತದ ವೇಳೆ ರೆಸ್ಟೋರೆಂಟ್ ನಲ್ಲಿ ತಂಗಿದ್ದವರ ರಕ್ಷಣೆಗಾಗಿ ಸ್ಥಳೀಯ ಅಂಗಡಿ ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಮಾಳವೀಯ ಹೌಜ್ ರಾಣಿ ಪ್ರದೇಶದಲ್ಲಿ ಬೆಡ್ ಆಂಡ್ ಬ್ರೇಕ್‌ಫಾಸ್ಟ್ ಫ್ಲೋರಿಶ್ ಸ್ಟೇಸ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಒಂಬತ್ತು ಮಂದಿ ಭಾರತೀಯರು, 12 ವಿದೇಶಿಯರು ಸೇರಿದಂತೆ ಒಟ್ಟು 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

"ಇಸ್ಲಾಂ ಸ್ನೇಹಿ ಜಿಮ್": ಕೇರಳದಲ್ಲಿ ಭುಗಿಲೆದ್ದ ಭಾರಿ ವಿವಾದ

ಸ್ಥಳೀಯ ಅಂಗಡಿ ಮಾಲೀಕ ಮತ್ತು ಅವರ ಮಗ ಇಲ್ಲದಿದ್ದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿರುತ್ತಿತ್ತು. ಹಲವಾರು ಜೀವಗಳನ್ನು ಉಳಿಸಲು ಇವರು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಹೊಸ ಹಾಸಿಗೆ, ಕಂಬಳಿಗಳನ್ನು ನೀಡಿದರು. ರಿಯಾಜುದ್ದೀನ್ ಮನ್ಸೂರಿ ಮತ್ತು ಅವರ ಮಗ ಅರ್ಮಾನ್ ಅವರು ಜೀವ ರಕ್ಷಣೆಗಾಗಿ ಅಪಾರ ಪ್ರಮಾಣದ ಕುಶನ್ ಅನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅರ್ಮಾನ್, ಬೆಳಗ್ಗೆ 8.30ರ ಸುಮಾರಿಗೆ ನೆರೆಹೊರೆಯವರು ಬಂದು ಬೆಂಕಿ ಬಗ್ಗೆ ಹೇಳಿದರು. ತಕ್ಷಣ ನಾನು ಸ್ಥಳಕ್ಕೆ ಹೋದೆ. ಆಗ ಬೆಂಕಿ ನೆಲ ಮಹಡಿಯಲ್ಲಿತ್ತು. ಯಾರೂ ಒಳಗೆ ಹೋಗುವುದು ಸಾಧ್ಯವಿರಲಿಲ್ಲ. ಮೇಲಿನ ಮಹಡಿಯಲ್ಲಿದ್ದ ಜನರು ಕೂಗುತ್ತಾ ಜಿಗಿಯಬೇಕೇ ಎಂದು ಕೇಳುತ್ತಿದ್ದರು. ನಾನು ತಕ್ಷಣ ಅಂಗಡಿಯಿಂದ ಸುಮಾರು 20 ರಿಂದ 25 ಹೊದಿಕೆಗಳು ಮತ್ತು ಹಾಸಿಗೆಗಳನ್ನು ಹೊರತೆಗೆದು ಕಟ್ಟಡದ ಹೊರಗೆ ಹರಡಿದೆ ಎಂದು ತಿಳಿಸಿದ್ದಾರೆ.



ಸುಮಾರು ನಾಲ್ಕು ದಶಕಗಳಿಂದ ಇಲ್ಲಿ ಅಂಗಡಿ ನಡೆಸುತ್ತಿರುವುದಾಗಿ ಹೇಳಿದ ಅವರು, ರೆಸ್ಟೋರೆಂಟ್ ಒಳಗೆ ಸಿಲುಕಿಕೊಂಡಿದ್ದ ಜನರು ಸುರಕ್ಷಿತವಾಗಿ ಮೇಲಿಂದ ಕೆಳಗೆ ಹಾರಲು ಹಲವಾರು ಹೊದಿಕೆಗಳು ಮತ್ತು ಹಾಸಿಗೆಗಳು ಬೇಕಾಗಿದ್ದವು ಎಂದು ತಿಳಿಸಿದರು.

ರಿಯಾಜುದ್ದೀನ್ ಅವರು ಪ್ರತಿಕ್ರಿಯಿಸಿ ಇದರಿಂದ ನಮಗೆ ಸುಮಾರು 2 ಲಕ್ಷ ರೂ. ನಷ್ಟವಾಯಿತು. ಮೃತ ದೇಹಗಳು ಮತ್ತು ಗಾಯಾಳುಗಳನ್ನು ಹೊರತರಲು ನಾವು ಬೆಡ್‌ಶೀಟ್‌ಗಳನ್ನು ಕೂಡ ನೀಡಿದ್ದೇವೆ. ಮಾನವೀಯತೆಯ ಆಧಾರದ ಮೇಲೆ ಮಾಡಿದ್ದೇವೆ. ನಾವೆಲ್ಲರೂ ಹಿಂದೂಸ್ತಾನಿಗಳು ಮತ್ತು ಸಹೋದರರು. ಅವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿತ್ತು ಎಂದರು.

ಈ ಕುರಿತು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕರು ಅಂಗಡಿ ಮಾಲೀಕರಿಗೆ ಸರ್ಕಾರವು ಬಹುಮಾನ ನೀಡಬೇಕು ಮತ್ತು ಅವರ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ದುರ್ಬಲ‌ ಟಿಎಂಸಿಯನ್ನು ಬಯಸುವ ಬಿಜೆಪಿಗೆ ಸಂಪೂರ್ಣ ಪತನ ಇಷ್ಟವಿಲ್ಲ; ಏನಿದು ಹೊಸ ರಾಜಕೀಯ ಲೆಕ್ಕಾಚಾರ?

ಇನ್ನೊಬ್ಬರು ಪ್ರತಿಕ್ರಿಯಿಸಿ ಅವರ ಈ ಕಾರ್ಯಕ್ಕೆ ಯಾರೂ ಹಣ ನೀಡುವುದಿಲ್ಲ ಎಂದು ಗೊತ್ತಿದ್ದರೂ ಅವರು ಕೊಟ್ಟಿದ್ದಾರೆ. ಸರ್ಕಾರ ಅವರಿಗೆ ಪರಿಹಾರ ನೀಡಬೇಕು!. ಇಂತಹ ಉದಾತ್ತ ಕಾರ್ಯಗಳನ್ನು ನಾವು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.