ʼಧುರಂಧರ್ʼ ಸ್ಟೈಲ್‌ನಲ್ಲಿ ಸ್ಟೆಪ್ ಹಾಕಿ ಮಗಳನ್ನು ಬರ ಮಾಡಿಕೊಂಡ ತಂದೆ: ವೈರಲ್ ವಿಡಿಯೊ ಇಲ್ಲಿದೆ
Viral Video: ರಣವೀರ್ ಸಿಂಗ್ ನಟನೆಯ ಬಾಲಿವುಡ್ ಚಿತ್ರ ‘ಧುರಂಧರ್ʼ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸದ್ಯ ಈ ಸಿನಿಮಾದ ಹಾಡುಗಳು ಕೂಡ ಸಿಕ್ಕಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು, ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಕ್ರೇಝ್ ಈಗ ಆಸ್ಪತ್ರೆಯ ಮೆಟ್ಟಿಲೇರಿದೆ. ಚಿತ್ರದ 'FA9LA' ಹಾಡಿಗೆ ಹೊಸದಾಗಿ ತಂದೆಯಾದ ವ್ಯಕ್ತಿಯೊಬ್ಬರು ಡ್ಯಾನ್ಸ್ ಮಾಡಿದ್ದಾರೆ.
ʼಧುರಂಧರ್ʼ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡಿದ ತಂದೆ -
ನವದೆಹಲಿ, ಡಿ. 18: ರಣವೀರ್ ಸಿಂಗ್ ನಟನೆಯ ಬಾಲಿವುಡ್ ಚಿತ್ರ ‘ಧುರಂಧರ್ʼ (Dhurandhar) ಸದ್ಯ ಭಾರಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತಿತರರು ನಟಿಸಿದ್ದು ಅಭಿಮಾನಿಗಳು ಮನ ಸೋತಿದ್ದಾರೆ. ಸದ್ಯ ಈ ಸಿನಿಮಾದ ಹಾಡುಗಳು ಕೂಡ ಟ್ರೆಂಡಿಂಗ್‌ನಲ್ಲಿದ್ದು, ಹಲವರು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಕ್ರೇಝ್ ಆಸ್ಪತ್ರೆಯ ಮೆಟ್ಟಿಲು ಕೂಡ ಏರಿದೆ. ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿ ವ್ಯಕ್ತಿಯೊಬ್ಬರು ʼಧುರಂಧರ್ʼ ಚಿತ್ರದ 'FA9LA' ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೊ ವೈರಲ್ ಆಗಿದೆ.
ಮಗಳು ಜನಿಸಿದ ಸುದ್ದಿ ತಿಳಿಯುತ್ತಿದ್ದಂತೆ ತಂದೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ತನಗೆ ಹೆಣ್ಣು ಮಗು ಜನಿಸಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಆ ತಂದೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗುವನ್ನು ಮೊದಲ ಬಾರಿಗೆ ನೋಡಿದ ಅವರು 'ಧುರಂಧರ್' ಚಿತ್ರದ FA9LA ಹಾಡಿನ ಸ್ಟೆಪ್‌ಗಳನ್ನು ಹಾಕುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ಹಿಡಿದು ಕೊಂಡಿದ್ದಾರೆ. ಮಗಳನ್ನು ಕಂಡ ತಕ್ಷಣ ತಂದೆಯೂ ಅಕ್ಷಯ್ ಖನ್ನಾ ಅವರ ಐಕಾನಿಕ್ 'FA9LA' ಡ್ಯಾನ್ಸ್ ಸ್ಟೆಪ್ ಹಾಕುತ್ತಾ ಖುಷಿ ಪಟ್ಟಿದ್ದಾರೆ. ಈ ವಿಡಿಯೊವನ್ನು ʼಧುರಂಧರ್ʼ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ನಟಿ ಯಾಮಿ ಗೌತಮ್ ಶೇರ್ ಮಾಡಿ ಕೊಂಡಿದ್ದಾರೆ. ʼʼಈ ಟ್ರೆಂಡ್‌ನಲ್ಲಿ ಇವರೇ ವಿಜೇತರುʼʼ ಎಂದು ಅವರು ಬರೆದುಕೊಂಡಿದ್ದಾರೆ.
ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ರೀಲ್ಸ್‌ಗಳ ಮೂಲಕ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಬಳಕೆದಾರರೊಬ್ಬರು ಹಾಡಿನ ಹಿನ್ನೆಲೆ ಸಂಗೀತಗಿಂತಲೂ ತಂದೆಯ ಸಂಭ್ರಮದಲ್ಲಿರುವ ಭಾವನೆ ವಿಭಿನ್ನ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಗಳ ಆಗಮನದ ಖುಷಿಯನ್ನು ಹೆಚ್ಚಿಸಿದ ತಂದೆ ಎಂದು ಬರೆದುಕೊಂಡಿದ್ದಾರೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರು ಇರುವ ಈ ಚಿತ್ರ ಡಿಸೆಂಬರ್ 5ರಂದು ಬಿಡುಗಡೆಯಾಗಿದೆ. ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.