ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಲೂನ್‌ಗೆ ಬಂದು ಮಸಾಜ್ ಮಾಡಿಸಿಕೊಂಡ ಮಂಗ! ಕ್ಯೂಟ್ ವಿಡಿಯೊ ನೋಡಿ

Viral Video: ​ಸಲೂನ್‌ಗೆ ಗ್ರಾಹಕರು ಬಂದು ಹೇರ್ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಬಾರಿ ಸಲೂನ್‌ಗೆ ವಿಶೇಷ ಗೆಸ್ಟ್ ಬಂದಿದ್ದಾರೆ. ಮಂಗವೊಂದು ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ಮಸಾಜ್ ಮಾಡಿಸಿಕೊಂಡಿದೆ.

ಸಲೂನ್‌ಗೆ ಬಂದ ವಿಶೇಷ ಅತಿಥಿ ನೋಡಿ ಫಿದಾ ಆದ ನೆಟ್ಟಿಗರು

ಸಲೂನ್‌ಗೆ ಬಂದು ಮಸಾಜ್ ಮಾಡಿಸಿಕೊಂಡ ಮಂಗ -

Profile
Pushpa Kumari Sep 20, 2026 9:51 PM

ನವದೆಹಲಿ, ಸೆ. 20: ​ಸಲೂನ್‌ಗೆ ಗ್ರಾಹಕರು ಬಂದು ಹೇರ್ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಭಾರಿ ಸಲೂನ್‌ಗೆ ವಿಶೇಷ ಗೆಸ್ಟ್ ಬಂದಿದ್ದಾರೆ. ಮಂಗವೊಂದು ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ಮಸಾಜ್ ಮಾಡಿಸಿ ಕೊಂಡಿದೆ. ಈ  ವಿಚಿತ್ರ ಹಾಗೂ ತಮಾಷೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ವಿಡಿಯೊದಲ್ಲಿ, ಕ್ಷೌರಿಕನು ಕೋತಿಯ ತಲೆಗೆ ಮೃದುವಾಗಿ ಮಸಾಜ್ ಮಾಡುತ್ತಿರುವಾಗ ಅದು ಸಲೂನ್ ಕುರ್ಚಿಯಲ್ಲಿ ಶಾಂತವಾಗಿ ಕುಳಿತಿದೆ. ಅದು ಕಿಕಿರಿಗೊಳ್ಳದೆ ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಬದಲು, ಸಂಪೂರ್ಣವಾಗಿ ಆರಾಮದಾಯಕ ಸ್ಥಿತಿಯಲ್ಲಿ ಕುಳಿತಿದೆ.

ವಿಡಿಯೊ ನೋಡಿ:

ಒಂದು ಹಂತದಲ್ಲಿ, ಕೋತಿಯು ಕಣ್ಣು ಮುಚ್ಚಿ ಮಸಾಜ್ ಆನಂದಿಸುತ್ತಿರುವಂತೆ ತೋರುತ್ತದೆ. ಈ ದೃಶ್ಯವು ಸಲೂನ್‌ಗೆ ಭೇಟಿ ನೀಡಿ ಮಸಾಜ್‌ ಸೇವೆಯಿಂದ ಖುಷಿಪಡುವ ಮನುಷ್ಯನೊಬ್ಬನ ರೀತಿಯೇ ಹೋಲುವಂತಿದೆ. ಈ ಅನಿರೀಕ್ಷಿತ ಅತಿಥಿಯ ದೃಶ್ಯ ಎಲ್ಲರ ಗಮನ ಸೆಳೆದಿದ್ದು, ಕೋತಿಯ ಈ ತಾಳ್ಮೆಯ ವರ್ತನೆಗೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ

ವಿಡಿಯೊದಲ್ಲಿ, ಕೋತಿ ನೇರವಾಗ ಸಲೂನ್‌ಗೆ ಬಂದು ಅಲ್ಲಿನ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತದೆ. ಆ ಕ್ಷಣಕ್ಕೆ  ಮಾಲಕ ಕೋತಿಯನ್ನು ಬೆದರಿಸದೇ ಅದರ ತಲೆಗೆ ಪ್ರೀತಿಯಿಂದ ಮಸಾಜ್ ಮಾಡಲು ಪ್ರಾರಂಭಿಸುತ್ತಾರೆ. ಸಾಧಾರಣವಾಗಿ ಮನುಷ್ಯರನ್ನು ಕಂಡರೆ ತಂಟೆ ಮಾಡುವ ಕೋತಿ, ಇಲ್ಲಿ ಮಾತ್ರ ಯಾವುದೇ ಗಲಾಟೆ ಮಾಡದೆ ತನಗೂ ಮಸಾಜ್ ಬೇಕು ಎಂಬಂತೆ ಶಾಂತವಾಗಿ ಕುಳಿತಿದೆ.

ಇದನ್ನು ನೋಡಿದ ನೆಟ್ಟಿಗರು, ಇದು ನಿಜವಾದ ಗ್ರಾಹಕ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ʼʼಇವತ್ತಿನ ದಿನವನ್ನು ಕಳೆಯಲು ಪ್ಲ್ಯಾನ್‌ ಮಾಡಿಕೊಂಡು ಬಂದಂತಿದೆ. ಮಸಾಜ್ ನಿಲ್ಲಿಸಬೇಡಿʼʼ ಎಂದು ಪ್ರತಿಕ್ರಿಯಿಸಿದ್ದಾರೆ.​ ಈ ಅಪರೂಪದ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.