Viral Video: ವಿಮಾನದಲ್ಲಿ ಲೈಫ್ ಜಾಕೆಟ್ ಕದ್ದ ಪ್ರಯಾಣಿಕ; ಆಮೇಲೆ ನಡೆದಿದ್ದೇನು? ವೈರಲ್ ವಿಡಿಯೊ ಇಲ್ಲಿದೆ
ಇಂಡಿಗೋ ವಿಮಾನದಿಂದ ವ್ಯಕ್ತಿಯೊಬ್ಬ ಲೈಫ್ ಜಾಕೆಟ್ ಕದ್ದಿದ್ದು, ಈ ದೃಶ್ಯವನ್ನು ಸಹಪ್ರಯಾಣಿಕನೊಬ್ಬ ನೋಡಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಮಾನದಲ್ಲಿ ವ್ಯಕ್ತಿಯೊಬ್ಬ ಲೈಫ್ ಜಾಕೆಟ್ ಕದ್ದಿದ್ದು, ಈ ಕಳ್ಳತನವನ್ನು ಮತ್ತೊಬ್ಬ ಪ್ರಯಾಣಿಕ ಕಂಡುಹಿಡಿದು ಅದನ್ನು ಬಯಲು ಮಾಡಿದ್ದಾನೆ. ಆತ ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದು, ಇದು ಈಗ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಘಟನೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತನ್ನ ಬ್ಯಾಗ್ ತೆರೆಯಲು ಹೇಳುತ್ತಿರುವುದನ್ನು ಮತ್ತು ಅವನ ಬ್ಯಾಗ್ ಒಳಗೆ ಲೈಫ್ ಜಾಕೆಟ್ ಇರುವುದನ್ನು ಕಂಡು ಬಂದಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಿನಿಂದ 2 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಈ ಆಘಾತಕಾರಿ ಘಟನೆಯ ಬಗ್ಗೆ ನೆಟ್ಟಿಗರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವನ ವಿಮಾನ ಪ್ರಯಾಣವನ್ನು ನಿಷೇಧಿಸುವಂತೆ ಒತ್ತಾಯಿಸಿದರೆ, ಕೆಲವರು ಈ ಕೃತ್ಯವನ್ನು ಟೀಕಿಸಿದ್ದಾರೆ.
ಒಬ್ಬರು, "ನೀವು ಲೈಫ್ ಜಾಕೆಟ್ ಅನ್ನು ಏಕೆ ಕದಿಯುತ್ತೀರಿ? ವಿಮಾನ ಪ್ರಯಾಣವು ತುಂಬಾ ಅಗ್ಗವಾಗಿದೆ. ನಾಗರಿಕ ಪ್ರಜ್ಞೆ ಇಲ್ಲದ ಜನರು ಈಗ ವಿಮಾನ ಪ್ರಯಾಣ ಮಾಡುತ್ತಾರೆʼʼ ಎಂದು ಬರೆದಿದ್ದಾರೆ. "ದಯವಿಟ್ಟು ಅವನು ವಿಮಾನದಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಿ" ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ.
ಒಬ್ಬರು ಆರೋಪಿಯ ಪರವಾಗಿ ನಿಂತು, "ಆ ಜಾಕೆಟ್ ವಿಮಾನ ಶುಲ್ಕದೊಂದಿಗೆ ಬರುವ ಉಚಿತ ವಸ್ತುಗಳು ಎಂದು ಅವನು ಭಾವಿಸಿರಬಹುದು. ಹಾಗಾಗಿ ಅವನನ್ನು ಮುಜುಗರಕ್ಕೀಡು ಮಾಡದೆ, ಅದನ್ನು ದರೋಡೆ ಎಂದು ಕರೆಯದೆ ವಿಮಾನ ಸಿಬ್ಬಂದಿಗೆ ವರದಿ ಮಾಡಿ" ಎಂದು ಬರೆದಿದ್ದಾರೆ. ಅದಕ್ಕೆ ಇನ್ನೊಬ್ಬರು "ನಾನ್‍ಸೆನ್ಸ್. ನೀವು ಹಗಲು ದರೋಡೆಯನ್ನು ಸಮರ್ಥಿಸುತ್ತಿದ್ದೀರಾ” ಎಂದು ಕೇಳಿದ್ದಾರೆ.
ಈ ಘಟನೆಯ ಕುರಿತು ಇಂಡಿಗೋ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಜತೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಯಿಂದ ಯಾವುದೇ ದೃಢೀಕರಣ ಬಂದಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ವಿಮಾನ ದುರಂತದ ನೋವಿನ್ನೂ ಮಾಸಿಲ್ಲ; ಡಿಜೆ ಪಾರ್ಟಿ ಮಾಡಿ ಕುಣಿದ ಸಿಬ್ಬಂದಿ: ಏನಿದು ವೈರಲ್ ಸ್ಟೋರಿ?
ಇತ್ತೀಚೆಗೆ ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದ ಎಂಟ್ರೆನ್ಸ್ ಹಾಲ್‌ನಲ್ಲಿ ಪ್ರವಾಸಿಗನೊಬ್ಬ ಒಂದೂವರೆ ವರ್ಷದ ಮಗುವನ್ನು ಎತ್ತಿ ನೆಲಕ್ಕೆ ಬಿಸಾಡಿದ್ದ ಘಟನೆ ಬೆಚ್ಚಿ ಬೀಳಿಸಿತ್ತು. ಇದರಿಂದ ಮಗುವಿನ ತಲೆಬುರುಡೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿವೆ. ಈ ಭಯಾನಕ ಘಟನೆಯು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮಗುವಿನ ಮೇಲೆ ದಾಳಿ ಮಾಡುವ ಮೊದಲು ಈತ ಯಾರು ಇಲ್ಲದಿರುವುದನ್ನು ಗಮನಿಸಿ ಮಗುವನ್ನು ಬಲವಂತವಾಗಿ ಎತ್ತಿ ನೆಲಕ್ಕೆ ಹೊಡೆದಿದ್ದಾನೆ. ನಂತರ ಮಗು ಬಿದ್ದಿದೆ ಎಂದು ಎಲ್ಲರಿಗೂ ಹೇಳುವುದು ವಿಡಿಯೊದಲ್ಲಿ ಸೆರೆಯಾಗಿದೆ. ಮಗುವಿನ ಹಲ್ಲೆ ನಡೆದಾಗ ಮಗುವಿನ ತಾಯಿ ತಳ್ಳುವ ಕುರ್ಚಿಯನ್ನು ತರಲು ಹೋಗಿದ್ದಳು. ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.