ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರವಾಹಕ್ಕೆ ಸಿಲುಕಿದ ಈ ಬಡ ಜೀವ ಬದುಕುಳಿದಿದ್ದೇ ಒಂದು ಪವಾಡ! ವಿಡಿಯೊ ಇದೆ

Dog’s Desperate Fight for Survival: ವೇಗವಾಗಿ ಹರಿಯುತ್ತಿರುವ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ನಾಯಿಯೊಂದು ಸಿಲುಕಿದೆ. ಉಕ್ಕಿ ಹರಿಯುತ್ತಿರುವ ನದಿಯ ಮಧ್ಯೆ ನಾಯಿಯೊಂದು ದಡ ತಲುಪಲು ಹರಸಾಹಸ ಪಟ್ಟಿದೆ. ಅದರ ಧೈರ್ಯ, ಆತ್ಮವಿಶ್ವಾಸದಿಂದ ತನ್ನ ಪ್ರಾಣವನ್ನು ಕಾಪಾಡಿಕೊಂಡಿದೆ.

ಪ್ರವಾಹಕ್ಕೆ ಸಿಲುಕಿದ ಈ ಬಡ ಜೀವ ಬದುಕುಳಿದಿದ್ದೇ ಒಂದು ಪವಾಡ!

-

Priyanka P Priyanka P Sep 3, 2025 4:36 PM

ಮನಾಲಿ: ಉತ್ತರ ಭಾರತದ ಹಲವೆಡೆ ಮಹಾಮಳೆಗೆ ತತ್ತರಿಸಿ ಹೋಗಿದೆ. ಹಲವೆಡೆ ಪ್ರವಾಹ ಉಂಟಾಗಿದ್ದು, ಲಕ್ಷಾಂತರ ಮಂದಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಜನರನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಈ ನಡುವೆ ಮನಕಲುಕುವ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಹಿಮಾಚಲ ಪ್ರದೇಶದ ಮನಾಲಿ (Manali)ಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ವೈರಲ್ ವಿಡಿಯೊದಲ್ಲಿ, ವೇಗವಾಗಿ ಹರಿಯುತ್ತಿರುವ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ನಾಯಿಯೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ ನಾಯಿಗೆ ತಾನಾಗಿಯೇ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಪಾಯದ ಹೊರತಾಗಿಯೂ, ಧೈರ್ಯಶಾಲಿ ಪ್ರಾಣಿಯು ಹೇಗಾದರೂ ನದಿ ದಾಟುವ ಉತ್ಸಾಹದಲ್ಲಿತ್ತು. ಕಠಿಣ ಪರಿಸ್ಥಿತಿಯಲ್ಲೂ ಉಕ್ಕಿ ಹರಿಯುತ್ತಿರುವ ನದಿಯನ್ನು ಧೈರ್ಯದಿಂದ ದಾಟಿ, ಎಲ್ಲರನ್ನೂ ಬೆರಗುಗೊಳಿಸಿತು.

ಬಲವಾದ ಪ್ರವಾಹದಲ್ಲಿ ಸಿಲುಕಿರುವ ನಾಯಿ ಸುರಕ್ಷಿತ ಸ್ಥಳಕ್ಕೆ ಹೋಗಲು ಹತಾಶವಾಗಿ ಪ್ರಯತ್ನಿಸಿದೆ. ಸುರಕ್ಷಿತ ಸ್ಥಳದ ಕಡೆಗೆ ಚಲಿಸಲು ಪ್ರಯತ್ನಿಸುವಾಗ ಅದು ಬೆಂಬಲಕ್ಕಾಗಿ ಕಲ್ಲುಗಳ ಮೇಲೆ ಹೆಜ್ಜೆಯಿಡುತ್ತಾ ಎಚ್ಚರಿಕೆಯಿಂದ ದಾಟುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ನದಿ ದಾಟುವ ತನ್ನ ಪ್ರಯತ್ನದಲ್ಲಿ, ನಾಯಿ ಒಂದು ಹಂತದಲ್ಲಿ ಇನ್ನೇನು ದಡ ತಲುಪಬೇಕು ಎಂದಾದಾಗ ತನ್ನ ಸಮತೋಲನವನ್ನು ಕಳೆದುಕೊಂಡು ನೀರಿನಲ್ಲಿ ಕೊಚ್ಚಿಹೋಗಿದೆ. ಇದನ್ನು ವೀಕ್ಷಿಸುತ್ತಿದ್ದ ಪ್ರತ್ಯಕ್ಷದರ್ಶಿಗಳು ಆಘಾತಕ್ಕೊಳಗಾಗಿದ್ದಾರೆ.

ವಿಡಿಯೊ ವೀಕ್ಷಿಸಿ:



ಕೆಲವು ಸೆಕೆಂಡುಗಳ ಕಾಲ ನಾಯಿ ಎಲ್ಲಿದೆ ಎಂದು ಗೋಚರವಾಗುವುದಿಲ್ಲ. ಬಹುಶಃ ಉಕ್ಕಿಹರಿಯುತ್ತಿದ್ದ ಹೊಳೆಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಬಹುತೇಕರು ಭಾವಿಸಿದ್ದರು. ಆದರೆ, ಕ್ಯಾಮರಾ ನಾಯಿ ಎಲ್ಲಿದೆ ಎಂದು ಹುಡುಕುತ್ತಿದ್ದಂತೆ, ನದಿಯ ದಡದಲ್ಲಿ ಸುರಕ್ಷಿತವಾಗಿರುವುದು ಕಂಡುಬಂದಿದೆ. ಇದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳಿಗೆ ಅಪಾರ ಸಮಾಧಾನವನ್ನುಂಟುಮಾಡಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ನಾಯಿಯ ಧೈರ್ಯಕ್ಕೆ ಸಲಾಂ ಎಂದಿದ್ದರೆ, ಕೆಲವರು ಮರುಕ ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶವು ಕಳೆದ ಕೆಲವು ದಿನಗಳಿಂದ ನಿರಂತರ ಮಳೆ, ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹಕ್ಕೆ ಸಾಕ್ಷಿಯಾಗುತ್ತಿದ್ದು, ರಾಜ್ಯದಲ್ಲಿ ಭಾರಿ ಹಾನಿಯಾಗಿದೆ. ರಾಜ್ಯದಲ್ಲಿ ರಸ್ತೆ ಸಂಪರ್ಕವೂ ಅಸ್ತವ್ಯಸ್ತಗೊಂಡಿದೆ. ಪರಿಹಾರ ಕಾರ್ಯಾಚರಣೆ ಚುರುಕುಗೊಂಡಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಪಂಜಾಬ್ ರಾಜ್ಯದಲ್ಲೂ 40 ವರ್ಷಗಳಲ್ಲಿ ಕಂಡೂಕೇಳರಿಯದ ಭೀಕರ ಮಳೆಯಾಗುತ್ತಿದ್ದು, ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಪ್ರವಾಹದ ನಡುವೆಯೂ ವ್ಯಕ್ತಿಯೊಬ್ಬರು ಸ್ವಯಂಸೇವಕರಿಗೆ ಚಹಾ ವಿತರಣೆ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೊವೊಂದು ವೈರಲ್ ಆಗಿತ್ತು.

ಇದನ್ನೂ ಓದಿ: Viral Video: ಶ್ವಾನದ ಮೈಮೇಲಿನ ರೋಮ ತೆಗೆದು ಟ್ಯಾಟೂ ಹಾಕಿಸಿ ವಿಕೃತಿ ಮೆರೆದ ಮಾಲೀಕ; ಕಠಿಣ ಕ್ರಮಕ್ಕೆ ಆಗ್ರಹ