ಟೆಕ್ನಾಲಜಿ ಬಳಸುವಲ್ಲಿ ಬೆಂಗಳೂರಿನ ಆಟೋ ಚಾಲಕರು ಯಾರಿಗೂ ಕಡಿಮೆ ಇಲ್ಲ: ಸ್ಮಾರ್ಟ್ ವಾಚ್‌ನಲ್ಲೇ ಕ್ಯೂಆರ್ ಕೋಡ್ ತೋರಿಸಿ ಹಣ ಪಡೆದ ಡ್ರೈವರ್!
Viral News: ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗಮನ ಸೆಳೆದ ಬೆಂಗಳೂರು ಐಟಿ ಕಂಪನಿ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೂ ಜನಪ್ರಿಯ. ಐಟಿ ಉದ್ಯೋಗಿಗಳಿಂದ ಹಿಡಿದು ಜನ ಸಾಮಾನ್ಯರೂ ಇಲ್ಲಿ ಆಧುನಿಕ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಟೋ ಚಾಲಕನೊಬ್ಬ ಡಿಜಿಟಲ್ ಪೇಮೆಂಟ್‌ಗೆ ಸೂಪರ್ ಐಡಿಯಾ ಬಳಸಿದ್ದಾರೆ. ಸದ್ಯ ಅವರ ಟ್ರಿಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸ್ಮಾರ್ಟ್ ವಾಚ್‌ನಲ್ಲೇ ಕ್ಯೂಆರ್ ಕೋಡ್ ತೋರಿಸಿದ ಆಟೋ ಚಾಲಕ -
ಬೆಂಗಳೂರು,ಜೂ. 16: ಆಧುನಿಕ ಜೀವನಶೈಲಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಸರಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಐಟಿ ಕಂಪನಿ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೂ ಜನಪ್ರಿಯ. ಇದೇ ಕಾರಣಕ್ಕೆ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎನಿಕೊಂಡಿದೆ. ಇಷ್ಟೇ ಅಲ್ಲ ತಂತ್ರಜ್ಞಾನ ಬಳಸುವಲ್ಲಿ ಕೂಡ ಇಲ್ಲಿನ ಜನರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಟೋ ಚಾಲಕನೊಬ್ಬ ಡಿಜಿಟಲ್ ಪೇಮೆಂಟ್‌ಗೆ ಸೂಪರ್ ಐಡಿಯಾ ಬಳಸಿದ್ದಾರೆ. ಅವರ ಈ ಸ್ಮಾರ್ಟ್ ಟ್ರಿಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಪ್ರಯಾಣಿಕರೊಬ್ಬರು ಇಂದಿರಾನಗರದಿಂದ ಕೋರಮಂಗಲಕ್ಕೆ ಪ್ರಯಾಣಿಸುತ್ತಿದ್ದರು...ಆದರೆ ಪ್ರಯಾಣ ಮುಗಿದ ಬಳಿಕ ಚಾಲಕ ಕ್ಯೂ ಅರ್ ಕೋಡ್ ನೀಡುವ ಬದಲು ತನ್ನ ಕೈ ಮುಂದಕ್ಕೆ ಚಾಚಿದ್ದಾನೆ. ಚಾಲಕ ಕೈಯಲ್ಲಿ ಧರಿಸಿದ್ದ ಸ್ಮಾರ್ಟ್‌ವಾಚ್‌ನ ಸ್ಕ್ರೀನ್ ಮೇಲೆ ಕ್ಯೂಆರ್ ಕೋಡ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಪ್ರಯಾಣಿಕ ತಕ್ಷಣವೇ ಅದನ್ನು ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
Took an auto today from Indiranagar to Koramangala and asked the driver for the QR code to pay
— Hemant (@nothemantsharma) June 14, 2026
Bro lifted his wrist, the QR code was on his smartwatch pic.twitter.com/bzDkXe1UBZ
ಸಾಮಾನ್ಯವಾಗಿ ಆಟೋಗಳಲ್ಲಿ ಹಣ ಪಾವತಿ ಮಾಡಲು ಕ್ಯೂಆರ್ ಕೋಡ್ ಸ್ಟಿಕ್ಕರ್ ಸೀಟಿನ ಹಿಂದೆ ಅಳವಡಿಸಿರುವುದನ್ನು ನೀವು ಗಮನಿಸಿರಬಹುದು. ಕೆಲವೊಮ್ಮೆ ಚಾಲಕರು ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ತೋರಿಸುತ್ತಾರೆ. ದೊಡ್ಡ ವ್ಯವಹಾರ ಗಳಿಂದ ಹಿಡಿದು ಸಣ್ಣ ಕೆಲಸಗಾರರವರೆಗೆ, ವಹಿವಾಟುಗಳನ್ನು ಸುಲಭಗೊಳಿಸಲು ತಂತ್ರಜ್ಞಾನವನ್ನು ಹೊಸ ರೀತಿಯಲ್ಲಿ ಬಳಸಲಾಗುತ್ತಿದೆ.
ಈ ಅಪರೂಪದ ವಿಚಾರವನ್ನು ಹೇಮಂತ್ ಎಂಬವರು ಶೇರ್ ಮಾಡಿಕೊಂಡಿದ್ದಾರೆ. ʼʼಇಂದು ಇಂದಿರಾ ನಗರದಿಂದ ಕೋರಮಂಗಲಕ್ಕೆ ಆಟೋದಲ್ಲಿ ಬಂದೆ. ಪ್ರಯಾಣದ ಕೊನೆಯಲ್ಲಿ ಕ್ಯೂಆರ್ ಕೋಡ್ ಕೇಳಿದಾಗ, ಆತ ತನ್ನ ಕೈಯನ್ನು ಎತ್ತಿ ಹಿಡಿದ. ಕ್ಯೂಆರ್ ಕೋಡ್ ಆತನ ಸ್ಮಾರ್ಟ್‌ವಾಚ್‌ನಲ್ಲಿತ್ತು. ಇದು ಅನಿರೀಕ್ಷಿತವಾಗಿತ್ತು. ಚಾಲಕನ ಸ್ಮಾರ್ಟ್ ಐಡಿಯಾಕ್ಕೆ ಫಿದಾ ಆದೆʼʼ ಎಂದು ಬರೆದುಕೊಂಡಿದ್ದಾರೆ.
ಆಟೋ ಚಾಲಕನ ಈ ಕ್ರಿಯೇಟಿವಿಟಿಗೆ ನೆಟ್ಟಿಗರು ಮನ ಸೋತಿದ್ದಾರೆ. ʼʼಬೆಂಗಳೂರಿನಲ್ಲಿ ಜನರು ಬಹಳಷ್ಟು ಸ್ಮಾರ್ಟ್ ಆಗಿದ್ದಾರೆʼʼ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ʼʼಜನರು ಹೊಸ ತಂತ್ರಜ್ಞಾನಕ್ಕೆ ಇಷ್ಟೊಂದು ಆಸಕ್ತಿ ವಹಿಸಿರುವುದು ನಿಜಕ್ಕೂ ಖುಷಿಯಾಗುತ್ತದೆʼʼ ಎಂದು ಕಾಮೆಂಟ್ ಮಾಡಿದ್ದಾರೆ. ʼʼಐಟಿ ಉದ್ಯೋಗಿಗಳು ಮಾತ್ರವಲ್ಲ ಬೆಂಗಳೂರಿನಲ್ಲಿ ಆಟೋ ಚಾಲಕರೂ ʼಸ್ಮಾರ್ಟ್ʼ ಆಗಿದ್ದಾರೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.