ಸತ್ತು ಹೋದ ಮರಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಕೋತಿ; ದೃಶ್ಯ ನೋಡಿದ್ರೆ ಕರುಳು ಹಿಂಡುತ್ತೆ
Viral News: ಯಾವತ್ತಿದ್ದರೂ ತಾಯಿ ತನ್ನ ಮಕ್ಕಳ ಖುಷಿಯಲ್ಲೆ ಪಾಲು ಪಡೆಯುತ್ತಿರುತ್ತಾಳೆ..ಇದೀಗ ತಾಯಿಯ ಪ್ರೀತಿಗೆ ಯಾರು ಸರಿಸಾಟಿ ಇಲ್ಲ ಎಂಬಂತ ದೃಶ್ಯ ವೊಂದು ಭಾರೀ ವೈರಲ್ ಆಗುತ್ತಿದೆ. ಹೌದು ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಸತ್ತ ಮರಿ ಕೋತಿಯನ್ನು ಎದೆಗಪ್ಪಿಕೊಂಡು ತಾಯಿ ಕೋತಿ ಕಣ್ಣೀರು ಹಾಕಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ...
ಇಂಟರ್ ನೆಟ್ ಚಿತ್ರ -
ಔರೈಯಾ,ಜೂ.16: ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವು ಜಗತ್ತಿನ ಅತ್ಯಂತ ಪವಿತ್ರವಾದ ಬಂಧಗಳಲ್ಲಿ ಒಂದಾಗಿದೆ. ಯಾವತ್ತಿದ್ದರೂ ತಾಯಿ ತನ್ನ ಮಕ್ಕಳ ಖುಷಿಯಲ್ಲೆ ಪಾಲು ಪಡೆಯುತ್ತಿರುತ್ತಾಳೆ. ಇದೀಗ ತಾಯಿಯ ಪ್ರೀತಿಗೆ ಯಾರು ಸರಿಸಾಟಿ ಇಲ್ಲ ಎಂಬಂತ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ. ಹೌದು ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಸತ್ತ ಮರಿ ಕೋತಿ ಯನ್ನು ಎದೆಗಪ್ಪಿಕೊಂಡು ತಾಯಿ ಕೋತಿ ಕಣ್ಣೀರು ಹಾಕಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ತಾಯಿ ಮಂಗವೊಂದು ತನ್ನ ಸತ್ತ ಮಗುವಿನ ದೇಹವನ್ನು ಹೊತ್ತುಕೊಂಡು ಹೋಗುತ್ತಿದ್ದು ಅದನ್ನು ಬಿಟ್ಟು ಹೋಗಲು ನಿರಾಕರಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಕರುಣ ಜನಕ ದೃಶ್ಯ ಕಂಡು ಬಂದಿದೆ. ತಾಯಿ ಕೋತಿಯೂ ಸತ್ತ ತನ್ನ ಪುಟ್ಟ ಮರಿಯನ್ನು ಎದೆಯಲ್ಲಿ ಅಪ್ಪಿಕೊಂಡು ಕಣ್ಣೀರು ಹಾಕುತ್ತಿದೆ. ಮಗುವನ್ನು ಬಿಟ್ಟು ಕೊಡಲು ಒಪ್ಪದ ತಾಯಿ ಕೋತಿಯ ಆಕ್ರಂದನ ಎಲ್ಲರಿಗೂ ಕಣ್ಣೀರು ತರಿಸುವಂತಿದೆ.
ವಿಡಿಯೋ ನೋಡಿ:
#औरैया
— Umesh Avasthi (@UmeshAwasthi79) June 15, 2026
मां की ममता की कोई सीमा नहीं होती...
औरैया में एक बंदरिया अपने मृत बच्चे को सीने से लगाए घूमती रही। वह बार-बार उसे चाटकर जिंदा करने की कोशिश करती दिखी। यह मार्मिक दृश्य देखकर लोगों की आंखें नम हो गईं।
इंसान हो या जानवर, मां का प्यार हर रूप में अमूल्य है। pic.twitter.com/Hl4LhvbQ1X
ಕೋತಿಯೂ ಮಗುವನ್ನು ತನ್ನ ಎದೆಗೆ ಬಿಗಿಯಾಗಿ ಹಿಡಿದುಕೊಂಡು ಪದೇ ಪದೇ ಮುತ್ತಿಡುತ್ತಾ ಮತ್ತು ನೆಕ್ಕುತ್ತಿರುವ ದೃಶ್ಯಗಳು ತೋರಿಸುತ್ತವೆ. ಮರಿಗೆ ಮತ್ತೆ ಜೀವ ಬರಬಹುದು ಎಂಬ ಆಸೆ ಯಿಂದಲೋ ಅದನ್ನು ಪದೇ ಪದೇ ನೋಡುತ್ತಾ ಕಾಳಜಿ ವಹಿಸುತ್ತಿದೆ. ಪ್ರಾಣಿಗಳಲ್ಲೂ ತಾಯ್ತನದ ಭಾವನೆ ಎಷ್ಟು ಹತ್ತಿರವಾಗಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
Viral News: ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್
ಈ ವೀಡಿಯೊವನ್ನು ಬಳಕೆದಾರ ಉಮೇಶ್ ಅವಸ್ಥಿ ಅವರು ಹಂಚಿಕೊಂಡಿದ್ದು ಅವರು ತಾಯಿಯ ಪ್ರೀತಿಗೆ ಯಾವುದೇ ಮಿತಿಗಳಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ದೃಶ್ಯವು ಅನೇಕ ವೀಕ್ಷಕರನ್ನು ಆಳವಾಗಿ ಸ್ಪರ್ಶಿಸಿದ್ದು ತಾಯಿಯ ಪ್ರೀತಿ ಎಂತಹುವುದು ಎಂಬುದನ್ನು ತೋರಿಸಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ತಾಯಿಯ ಪ್ರೀತಿಯನ್ನು ಬಣ್ಣಿಸಲಾಗದ್ದು ಎಂದು ಬರೆದಿದ್ದಾರೆ. ಮತ್ತೊಬ್ಬರು ಕರುಳ್ ಚುರ್ ಎನ್ನುವ ದೃಶ್ಯ ಎಂದು ಬರೆದುಕೊಂಡಿದ್ದಾರೆ.