Viral Video: ಡ್ರೋನ್ ಮಾಡಿದ ಎಡವಟ್ಟಿಗೆ ವಧು-ವರರು ಸುಸ್ತೋ ಸುಸ್ತು! ವಿಡಿಯೊ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಿ!
ಮದುವೆಯ ವಿಡಿಯೊವೊಂದರಲ್ಲಿ ಡ್ರೋನ್ ಮೂಲಕ ವರನಿಗೆ ಹೂಮಾಲೆ ಹಾಕಲು ಮುಂದಾಗಿದ್ದಾರೆ. ಆದರೆ ಹೂಮಾಲೆ ಹಿಡಿದು ವರನ ಬಳಿ ಬಂದ ಡ್ರೋನ್ ಅಚಾನಕ್ ಆಗಿ ಅಪಘಾತಕ್ಕೀಡಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಮದುವೆ ಅನ್ನುವ ವಿಶೇಷ ಪದ್ಧತಿಯ ಮೂಲಕ ಗಂಡ-ಹೆಣ್ಣು ಸಂಸಾರದ ಜವಾಬ್ದಾರಿಗೆ ಬದ್ಧರಾಗುತ್ತಾರೆ. ಮದುವೆಯ ಆಚರಣೆಗಳು ಆ ಸಮುದಾಯದ ಆಚಾರ ವಿಚಾರದ ಪ್ರಕಾರ ನಡೆಯುತ್ತವೆ. ಆದರೆ ಇತ್ತೀಚೆಗೆ ಮದುವೆ ಸಮಾರಂಭಗಳು ಸಂಸ್ಕೃತಿ, ಆಚಾರ,ವಿಚಾರಗಳನ್ನೆಲ್ಲಾ ಗಾಳಿಗೆ ತೂರಿ ಅದ್ಧೂರಿಯತ್ತ ಮುಖ ಮಾಡಿ ನಿಂತಿವೆ.ಅದೇರೀತಿ ಇಲ್ಲೊಂದು ಮದುವೆ ನಡೆದಿದೆ. ಮದುವೆಯನ್ನು ಅದ್ಧೂರಿಯಾಗಿ ಮಾಡುವ ಪ್ರಯತ್ನದಲ್ಲಿ ವಧು ಹಾಕಬೇಕಾಗಿರುವ ವರಮಾಲೆಯನ್ನು ಡ್ರೋನ್ ಮೂಲಕ ವರನಿಗೆ ಹಾಕಲು ಮುಂದಾಗಿದ್ದಾರೆ. ಆದರೆ ಆ ವೇಳೆ ಅಚಾನಕ್ ಆಗಿ ಒಂದು ಘಟನೆ ನಡೆದಿದೆ. ಅದನ್ನು ಕಂಡು ವರನು ಕೂಡ ದಂಗಾಗಿದ್ದಾನೆ. ಅದೇನೆಂದರೆ ವರನಿಗೆ ಮಾಲೆ ಹಾಕುವಾಗ ಡ್ರೋನ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವೀಡಿಯೊದಲ್ಲಿ, ವರನು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದಾನೆ. ಸಾಮಾನ್ಯವಾಗಿ ಮದುವೆಯಲ್ಲಿ ವಧು ಮತ್ತು ವರರು ಪರಸ್ಪರರ ಕುತ್ತಿಗೆಗೆ ಹೂಮಾಲೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಇಲ್ಲಿ ವರನಿಗೆ ವಧು ಹೂ ಮಾಲೆ ಹಾಕುವ ಬದಲು ಅದನ್ನು ಡ್ರೋನ್ ಮೂಲಕ ಹಾಕಲು ಹೋಗಿದ್ದಾರೆ. ವರನು ಉತ್ಸಾಹದಿಂದ ಹಾರವನ್ನು ಹಾಕಿಕೊಳ್ಳಲು ಮುಂದಾಗುತ್ತಿದ್ದಂತೆ ಡ್ರೋನ್ ಅನಿರೀಕ್ಷಿತವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ವರನು ಡ್ರೋನ್ ಆಪರೇಟರ್ ಅನ್ನು ಗುರಾಯಿಸುತ್ತಾ ಅದನ್ನು ಎತ್ತಿ ಆತನಿಗೆ ನೀಡಿದ್ದಾನೆ. ಇಡೀ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ವರಮಾಲೆ ಹಾಕಲು ಹೋಗಿ ಡ್ರೋನ್ ಕೆಳಗೆ ಬಿದ್ದ ತಮಾಷೆಯ ದೃಶ್ಯ ಇಲ್ಲಿದೆ ನೋಡಿ
ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಸುಮಾರು ಮೂರು ಮಿಲಿಯನ್ ವ್ಯೂವ್ಸ್ ಗಳಿಸಿದೆ. ಸಾವಿರಾರು ಮಂದಿ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ತಮಾಷೆಯಾಗಿ, “ಮದುವೆಯ ವ್ಯವಸ್ಥೆ ತುಂಬಾ ಅದ್ಭುತವಾಗಿತ್ತು, ಆದರೆ ಡ್ರೋನ್ ಆ ಕ್ಷಣವನ್ನು ಹಾಳುಮಾಡಿತು” ಎಂದು ಬರೆದಿದ್ದಾರೆ. ಇನ್ನೊಬ್ಬರು "ಇದನ್ನು ನಿಮ್ಮ ಮೊಮ್ಮಕ್ಕಳಿಗೆ ವಿವರಿಸಿ ಹೇಳಬಹುದು. ಮಗನೇ, ನಮ್ಮ ಮದುವೆಯ ದಿನ ಡ್ರೋನ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿತ್ತು ಎಂದು”. ಮೂರನೇಯವರು, "ಇದಕ್ಕಾಗಿಯೇ ಸಂಪ್ರದಾಯ, ಶಾಸ್ತ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಬಾರದು ಎಂಬುದು” ಎಂದು ತಿಳಿಸಿದ್ದಾರೆ. ಮತ್ತೊಬ್ಬರು, “ಡ್ರೋನ್ ಹಾರವನ್ನು ಹಾಕಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಈ ಸಂತನಿಗೆ ವಯಸ್ಸು 60... ಕೈಗೊಂಡಿದ್ದು ಬರೋಬ್ಬರಿ 321 ಕಿ.ಮೀ ಯಾತ್ರೆ; ಸಾಲದ್ದಕ್ಕೆ ದಂಡಾವತ್ ಪ್ರಣಾಮ ಬೇರೆ!
ಮದುವೆ ಮಂಟಪದಲ್ಲಿಯೇ ಜಗಳವಾಡಿದ ವಧು-ವರ
ಮದುವೆಯ ವೇಳೆ ಈ ರೀತಿಯ ವಿಲಕ್ಷಣ ಘಟನೆ ನಡೆದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. 2022 ರಲ್ಲಿ ವೈರಲ್ ಆದ ವಿಡಿಯೊವೊಂದರಲ್ಲಿ, ವರಮಾಲಾ ಸಮಾರಂಭದ ಸಮಯದಲ್ಲಿ ವಧು ಮತ್ತು ವರರು ಮದುವೆಯ ವೇದಿಕೆಯಲ್ಲಿಯೇ ಜಗಳವಾಡಿಕೊಂಡಿದ್ದರು. ಇವರಿಬ್ಬರ ನಡುವಿನ ಜಟಾಪಟಿಗೆ ನಿಖರವಾದ ಕಾರಣ ತಿಳಿದಿಲ್ಲವಾಗಿದ್ದರೂ, ಸೋಶಿಯಲ್ ಮೀಡಿಯಾ ನೆಟ್ಟಿಗರ ಊಹಾಪೋಹಗಳ ಪ್ರಕಾರ ಇದು ವರದಕ್ಷಿಣೆಯ ಬಗೆಗಿನ ಭಿನ್ನಾಭಿಪ್ರಾಯದಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ. ಕೆಲವು ಹೇಳಿಕೆಗಳ ಪ್ರಕಾರ, ವರನ ಕುಟುಂಬವು ವರದಕ್ಷಿಣೆಯನ್ನು ಕೇಳಿದೆ. ಇದು ವಧುವಿನ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕೋಪಗೊಂಡ ವಧು ಕೈ ಬೆರಳು ತೋರಿಸಿ ವರನಿಗೆ ಎಚ್ಚರಿಕೆ ನೀಡಿದ್ದಳು. ಇದರಿಂದ ಕೋಪಗೊಂಡ ವರ ನಂತರ ವಧುವನ್ನು ಬಿಟ್ಟು ಇದ್ದಕ್ಕಿದ್ದಂತೆ ವೇದಿಕೆಯಿಂದ ಹೊರಗೆ ಹೋಗಿದ್ದಾನೆ. ನಂತರ ಹಿರಿಯರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರಿಂದ ವರ ವೇದಿಕೆಗೆ ಮರಳಿ ಬಂದು ಮದುವೆಯ ಆಚರಣೆಗಳನ್ನು ಪೂರ್ಣಗೊಳಿಸಿದ್ದನಂತೆ.