ಮೈದಾನದಲ್ಲಿ ಗುರುನೂರ್ ಬ್ರಾರ್, ಟಿಮ್ ಸೀಫರ್ಟ್ ನಡುವಿನ ಸಂಘರ್ಷ ತಡೆದ ವಿರಾಟ್ ಕೊಹ್ಲಿ
New Zealand vs India 4th ODI: ಮೈದಾನದಲ್ಲಿ ಬ್ರಾರ್ ಮತ್ತು ಸೀಫರ್ಟ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಕೊಹ್ಲಿ ಪ್ರಯತ್ನಿಸಿದರಾದರೂ, ಈ ಘಟನೆಯು ಅಭಿಮಾನಿಗಳಿಗೆ ಹಿಂದಿನ ದಿನಗಳನ್ನು ನೆನಪಿಸಿತು. ಆಗ ಸ್ವತಃ ಕೊಹ್ಲಿಯೇ ಮೈದಾನದಲ್ಲಿ ಇಂತಹ ಜಗಳಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
Virat Kohli -
ಮೌಂಟ್ ಮೌಂಗನುಯಿ, ನ.13: ಶುಕ್ರವಾರ 'ಬೇ ಓವಲ್' ಮೈದಾನದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದ ಆರಂಭಿಕ ಹಂತದಲ್ಲಿ, ಭಾರತದ ಯುವ ವೇಗದ ಬೌಲರ್ ಗುರ್ನೂರ್ ಬ್ರಾರ್ ಮತ್ತು ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್ ನಡುವೆ ಮೈದಾನದಲ್ಲೇ ಎರಡು ಬಾರಿ ಮಾತಿನ ಚಕಮಕಿ ನಡೆಯಿತು. ಈ ವೇಳೆ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದು ಅಚ್ಚರಿಗೆ ಕಾರಣವಾಯಿತು.
ಸೀಫರ್ಟ್ ಯುವ ವೇಗದ ಬೌಲರ್ ಬ್ರಾರ್ ಅವರ ಎಸೆತವೊಂದನ್ನು ಬೌಂಡರಿಗೆ ಅಟ್ಟಿದಾಗ ಮೊದಲ ಬಾರಿಗೆ ಮಾತಿನ ಚಕಮಕಿ ಸಂಭವಿಸಿತು. ಆದಾಗ್ಯೂ, ಈ ಘಟನೆಯ ನಡುವೆಯೂ ಸೀಫರ್ಟ್ ಕೇವಲ 39 ಎಸೆತಗಳಲ್ಲಿ 50 ರನ್‌ಗಳ ಗಡಿಯನ್ನು ದಾಟುವಲ್ಲಿ ಯಶಸ್ವಿಯಾದರು. ಅರ್ಧಶತಕ ಪೂರೈಸಿದ ಕೆಲವೇ ಕ್ಷಣಗಳಲ್ಲಿ, ಬ್ರಾರ್ ಅವರ ಬೌಲಿಂಗ್‌ನಲ್ಲಿ ಸೀಫರ್ಟ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
ಔಟ್ ಮಾಡಿದ ನಂತರ ಆ ಬ್ರಾರ್, ಸೀಫರ್ಟ್ ಕಡೆಗೆ ನಡೆದು ಹೋದರು. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಮೊದಲೇ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ, ಬ್ರಾರ್‌ರನ್ನು ಸಮಾಧಾನಪಡಿಸಿದರು.
ಬ್ರಾರ್ ಮತ್ತು ಸೀಫರ್ಟ್ ನಡುವಿನ ಮೊದಲ ಮುಖಾಮುಖಿಯ ವಿಡಿಯೋ ಇಲ್ಲಿದೆ
🚨 Tim seifert humilates Gurnoor Brar with a savage reply! 😭 - Seifert smashed 14 runs off Brar in a single over. - Gurnoor said “you’re lucky today” Seifert fired back: “Go and bowl, i always bat like this!” https://t.co/vzqqtFtdTP
— Yash MSdian ™️ 🦁 (@itzyash07) November 13, 2026
ಮೈದಾನದಲ್ಲಿ ಬ್ರಾರ್ ಮತ್ತು ಸೀಫರ್ಟ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಕೊಹ್ಲಿ ಪ್ರಯತ್ನಿಸಿದರಾದರೂ, ಈ ಘಟನೆಯು ಅಭಿಮಾನಿಗಳಿಗೆ ಹಿಂದಿನ ದಿನಗಳನ್ನು ನೆನಪಿಸಿತು. ಆಗ ಸ್ವತಃ ಕೊಹ್ಲಿಯೇ ಮೈದಾನದಲ್ಲಿ ಇಂತಹ ಜಗಳಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ, ಕೊಹ್ಲಿ ಹಲವು ಬಾರಿ ಎದುರಾಳಿ ಆಟಗಾರರೊಂದಿಗೆ ವಾಗ್ವಾದಕ್ಕಿಳಿದಿದ್ದರು, ಆಗ ಅವರ ತಂಡದ ಸಹ ಆಟಗಾರರು ಮಧ್ಯಪ್ರವೇಶಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಯೂತ್ ಒಲಿಂಪಿಕ್ಸ್ 2026: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಬಂಗಾರ ಗೆದ್ದ ಅಂಬೇಕರ್ ಮೀತೈ
ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವ ಅನುಭವಿ ಆಟಗಾರನಾಗಿ, ಯುವ ಆಟಗಾರರು ಮಿತಿಮೀರಿ ವರ್ತಿಸದಂತೆ ತಡೆಯುವ ಜವಾಬ್ದಾರಿ ಈಗ ಕೊಹ್ಲಿ ಮೇಲಿದೆ. ಇನ್ನು ಬ್ರಾರ್ ವಿಷಯಕ್ಕೆ ಬಂದರೆ, ಅವರು ಈ ಸರಣಿಯಲ್ಲಿ ಭಾರತ ಕಂಡುಕೊಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದು, ವಿಕೆಟ್ ಕಬಳಿಸುವ ಭರವಸೆಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ.