ತಾಯಿ ಇಲ್ಲದ ಮಗಳಿಗಾಗಿ ಆಟೋವನ್ನೇ ಮನೆಯನ್ನಾಗಿ ಬದಲಾಯಿಸಿದ ತಂದೆ: ದೃಶ್ಯ ಕಂಡು ನೆಟ್ಟಿಗರು ಭಾವುಕ!
ತನ್ನ ಹೆಂಡತಿಯನ್ನುಕಳೆದುಕೊಂಡ ಚಿಕ್ಕ ಮಗಳನ್ನು ಒಂಟಿಯಾಗಿ ಬೆಳೆಸುತ್ತಿರುವ ಆಟೋ-ರಿಕ್ಷಾ ಚಾಲಕನ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯ ಅಗಲಿಕೆಯ ನಂತರ ತನ್ನ ಪುಟ್ಟ ಮಗಳನ್ನು ಬೆಳೆಸಲು ತಂದೆ ಮಾಡುತ್ತಿರುವ ಜವಾಬ್ದಾರಿಯ ಕೆಲಸ ನೆಟ್ಟಿಗರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದೆ.ಸದ್ಯ ಇದರ ವಿಡಿಯೊ ವೈರಲ್ ಆಗಿದೆ.
ಮಗಳಿಗಾಗಿ ಆಟೋವನ್ನೇ 'ಮಿನಿ ಮನೆ'ಯನ್ನಾಗಿ ಬದಲಾಯಿಸಿದ ತಂದೆ -
ಮುಂಬೈ,ಫೆ.10: ತಾಯಿಯ ಪ್ರೀತಿಯನ್ನು ಹೆಚ್ಚಿನ ಮಕ್ಕಳು ಅರಿತರೂ ತಂದೆಯ ಪ್ರೀತಿಯನ್ನು ಮೌನ, ತ್ಯಾಗ, ಜವಾಬ್ದಾರಿಯ ಮೂಲಕವೆ ವ್ಯಕ್ತಪಡಿಸಲಾಗುತ್ತದೆ..ಇದಕ್ಕೆ ಸಾಕ್ಷಿಯೆಂಬಂತೆ ತನ್ನ ಹೆಂಡತಿಯನ್ನು ಕಳೆದುಕೊಂಡ ಚಿಕ್ಕ ಮಗಳನ್ನು ಒಂಟಿಯಾಗಿ ಬೆಳೆಸುತ್ತಿರುವ ಆಟೋ-ರಿಕ್ಷಾ ಚಾಲಕನ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯ ಅಗಲಿಕೆಯ ನಂತರ ತನ್ನ ಪುಟ್ಟ ಮಗಳನ್ನು ಬೆಳೆಸಲು ತಂದೆ ಮಾಡುತ್ತಿರುವ ಜವಾಬ್ದಾರಿಯ ಕೆಲಸ ನೆಟ್ಟಿಗರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದೆ. ಸದ್ಯ ಇದರ ವಿಡಿಯೊ ವೈರಲ್ (Viral Video) ಆಗಿದೆ.
ಆಟೋ ಚಾಲಕ ಪುಟ್ಟ ಮಗಳು ಆಯುಷಿಗೆ ತಾಯಿ ಮತ್ತು ತಂದೆ ಇಬ್ಬರೂ ಆಗಿದ್ದಾರೆ. ಕೆಲಸ ಮಾಡುವಾಗ ಅವಳನ್ನು ನೋಡಿ ಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಪ್ರತಿದಿನ ಮುಂಬೈನ ಜನನಿಬಿಡ ಬೀದಿಗಳಲ್ಲಿ ಓಡಾಡುವಾಗ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾರೆ. ಇತ್ತೀಚೆಗೆ ಇವರ ಆಟೋ ಹತ್ತಿದ ಪ್ರಯಾಣಿಕರೊಬ್ಬರು, ಚಾಲಕನ ಸೀಟಿನ ಹಿಂಭಾಗದಲ್ಲಿ ಮಗು ನಿದ್ದೆ ಮಾಡುವುದನ್ನು ಕಂಡು ಆಶ್ಚರ್ಯ ಪಟ್ಟಿದ್ದಾರೆ.
ವಿಡಿಯೋ ನೋಡಿ:
Meet this auto driver, a single parent. His wife passed away and since then he carries his little daughter everywhere, earning a living and raising her alone.
— Saffron Chargers (@SaffronChargers) February 9, 2026
Being a man is not easy 💔 pic.twitter.com/JKVlNmtlg0
ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ಕ್ಲಿಪ್‌ನಲ್ಲಿ, ಪ್ರಯಾಣಿಕನೊಬ್ಬ ಆಟೋರಿಕ್ಷಾದ ಹಿಂದಿನ ಸೀಟಿನಲ್ಲಿ ಶಾಂತವಾಗಿ ಮಲಗಿರುವ ಪುಟ್ಟ ಹುಡುಗಿಯನ್ನು ಗಮನಿಸುತ್ತಾನೆ. ಕುತೂಹಲದಿಂದ ಅವನು ಚಾಲಕನಲ್ಲಿ ಅವಳ ಬಗ್ಗೆ ಕೇಳುತ್ತಾನೆ. ಮೃದುವಾಗಿ ನಗುತ್ತಾ, ಆ ವ್ಯಕ್ತಿ ಮಗು ತನ್ನ ಮಗಳು ಎಂದು ವಿವರಿಸುತ್ತಾನೆ.
Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ
ಆಯುಷಿಯ ತಾಯಿ ನಿಧನರಾಗಿದ್ದಾರೆ ಎಂದು ಆ ವ್ಯಕ್ತಿ ಹೇಳುತ್ತಾರೆ. ಮಗಳನ್ನು ಒಬ್ಬಂಟಿಯಾಗಿ ಬಿಡಲು ಇಷ್ಟಪಡದ ತಂದೆ, ಅವಳನ್ನು ಸದಾ ತನ್ನ ಕಣ್ಣೆದುರೇ ಇಟ್ಟುಕೊಳ್ಳಲು ಈ ನಿರ್ಧಾರ ಮಾಡಿದ್ದಾರೆ. ಅವಳ ತಂದೆ ಚಾಲನೆ ಮಾಡುವಾಗ ಆಕೆ ಚೆನ್ನಾಗಿ ನಿದ್ರಿಸುತ್ತಾಳೆ. ಸದ್ಯ ಈ ವಿಡಿಯೊ ಮಗಳ ಆರೈಕೆ ಮತ್ತು ಜೀವನೋಪಾಯವನ್ನು ಮಾಡುವ ಪೋಷಕರ ವಾಸ್ತವದ ಬಗ್ಗೆ ತೆರೆದಿ ಡುತ್ತದೆ. ವಿಡಿಯೋ ಚಿತ್ರೀಕರಿಸಿದ ಪ್ರಯಾಣಿಕರು ಆ ಮಗುವಿಗೆ ಮತ್ತು ತಂದೆಗೆ ತಿಂಡಿ ಕೊಡಿಸಿ ಸಹಾಯ ಮಾಡಿದ್ದಾರೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಚಾಲಕನ ಶ್ರಮವನ್ನು ಶ್ಲಾಘಿಸಿದ್ದಾರೆ. ಬಳಕೆದಾರರೊಬ್ಬರು ಈ ಕಥೆ ಹೃದಯಸ್ಪರ್ಶಿಯಾಗಿದೆ. ಕೆಲಸ ಮಾಡುತ್ತಾ ಒಬ್ಬಂಟಿಯಾಗಿ ಮಗಳನ್ನು ಬೆಳೆಸುವುದು ಯಾರಿಗೂ ಸುಲಭವಲ್ಲ ಎಂದಿದ್ದಾರೆ.