ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಗನ ಮದುವೆಯಲ್ಲಿ ‘ಧುರಂಧರ್ ರೀತಿ ಎಂಟ್ರಿ ಕೊಟ್ಟ ಅಪ್ಪ; ಬುಲೆಟ್ ಏರಿ ಬಂದ ವಿಡಿಯೊ ಇಲ್ಲಿದೆ!

Viral Video: ಮದುವೆವೊಂದರಲ್ಲಿ ವರನ ತಂದೆಯ ಎಂಟ್ರಿ ಎಲ್ಲರನ್ನು ದಂಗಾಗಿಸಿದೆ.‌ ಧುರಂಧರ್‌ನ ಹಾಡಿನೊಂದಿಗೆ ಅವರು ಬೈಕ್‌ನಲ್ಲಿ ಎಂಟ್ರಿ ನೀಡಿದ್ದು ಅತ್ಯಂತ ಆತ್ಮವಿಶ್ವಾಸದಿಂದ ಬುಲೆಟ್ ಚಲಾಯಿ ಸುತ್ತಾ ಮಂಟಪಕ್ಕೆ ಬರುತ್ತಾರೆ. ಈ ವೇಳೆ ‌‘ಧುರಂಧರ್’ ಚಿತ್ರದ ಹಾಡು ‘ತೂ ನಾ ದೇ ದಿಲ್ ಪರದೇಸಿ ನು’ ಬ್ಯಾಕ್ ಗ್ರೌಂಡ್ ಮ್ಯುಸಿಕ್ ಬಂದಿದೆ. ಈ ಸಂದರ್ಭದಲ್ಲಿ ಅತಿಥಿಗಳ ಹರ್ಷೋದ್ಗಾರ ಉಕ್ಕಿ ಹರಿದಿದೆ.

ರಣವೀರ್ ಸಿಂಗ್ ಶೈಲಿಯಲ್ಲಿ ಮದುವೆಗೆ ಎಂಟ್ರಿ ಕೊಟ್ಟ ತಂದೆ

ನವದೆಹಲಿ,ಫೆ.13: ಮದುವೆಯಲ್ಲಿ ಸಾಮಾನ್ಯವಾಗಿ ವಧು ಅಥವಾ ವರ ಪಲ್ಲಕ್ಕಿಯಲ್ಲಿ ಎಂಟ್ರಿ ಕೊಡುವುದು, ಅಥವಾ ಅದ್ದೂರಿ ಮೆರವಣಿಗೆ ಮೂಲಕ ಬರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಮದುವೆಯಲ್ಲಿ ಇದು ಭಿನ್ನವಾಗಿದ್ದು ಮದುವೆಯಲ್ಲಿ ಗಮನ ಸೆಳೆದವರು ವಧು ಅಥವಾ ವರನಲ್ಲ. ಬದಲಾಗಿ ವರನ ತಂದೆ‌. ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಗತ್ತು ಮತ್ತು ಸ್ಟೈಲ್ ಅನುಕರಣೆ ಮಾಡಿದಂತೆ ವರನ ತಂದೆ ಬುಲೆಟ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ನೀಡಿದ್ದಾರೆ. ಸದ್ಯ ಈ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.

ವಿಡಿಯೋ ನೋಡಿ:



ಮದುವೆವೊಂದರಲ್ಲಿ ವರನ ತಂದೆಯ ಎಂಟ್ರಿ ಎಲ್ಲರನ್ನು ದಂಗಾಗಿಸಿದೆ.‌ ಧುರಂಧರ್‌ನ ಹಾಡಿ ನೊಂದಿಗೆ ಅವರು ಬೈಕ್‌ನಲ್ಲಿ ಎಂಟ್ರಿ ನೀಡಿದ್ದು ಅತ್ಯಂತ ಆತ್ಮವಿಶ್ವಾಸದಿಂದ ಬುಲೆಟ್ ಚಲಾಯಿಸುತ್ತಾ ಮಂಟಪಕ್ಕೆ ಬರುತ್ತಾರೆ. ಈ ವೇಳೆ ‌ ‘ಧುರಂಧರ್’ ಚಿತ್ರದ ಹಾಡು ‘ತೂ ನಾ ದೇ ದಿಲ್ ಪರದೇಸಿ ನು’ ಬ್ಯಾಕ್ ಗ್ರೌಂಡ್ ಮ್ಯುಸಿಕ್ ಬಂದಿದೆ. ಈ ಸಂದರ್ಭದಲ್ಲಿ ಅತಿಥಿಗಳ ಹರ್ಷೋದ್ಗಾರ ಉಕ್ಕಿ ಹರಿದಿದೆ.

Viral Video: ಇಂಡಿಗೋ ಪ್ರಯಾಣ ರದ್ದು; ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾದ ವಿಡಿಯೋ ವೈರಲ್

ವಧು-ವರರು ದಿಗ್ಭ್ರಮೆಗೊಂಡಿದ್ದು ಅವರು ಎದ್ದುನಿಂತು, ಕಿರುಚುತ್ತಾ ತಂದೆಯನ್ನು ಪ್ರೋತ್ಸಾಹಿಸಿದ್ದಾರೆ. ತಂದೆ ಸ್ಟೇಜ್ ಹತ್ತಿರ ಬರುತ್ತಿದ್ದಂತೆ, ವರ ಓಡಿ ಹೋಗಿ ಬುಲೆಟ್‌ನ ಹಿಂಬದಿಯಲ್ಲಿ ಕುಳಿತು ಕೊಳ್ಳುತ್ತಾನೆ. ಸದ್ಯ ಈ ದೃಶ್ಯವು ಮದುವೆಯ ಸಂಭ್ರಮ ವನ್ನು ಇನ್ನಷ್ಟು ಹೆಚ್ಚಿಸಿದೆ. ತಂದೆಯ ಆತ್ಮವಿಶ್ವಾಸದ ಸವಾರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೈರಲ್ ವಿಡಿಯೋಗೆ ಜನರು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ:

ಬಳಕೆದಾರರೊಬ್ಬರು ಇವರಪ್ಪ ಕೂಡ ಸಂತೂರ್ ಸೋಪ್ ಬಳಸುತ್ತಿರಬೇಕು..ಭಾರಿ ಯಂಗ್ ಇದ್ದಾರೆ ಎಂದು ‌ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬಹುಶಃ ಮಗನ ಮದುವೆಗೆ ತಂದೆಯೇ ಹಣ ವ್ಯಯಿಸರಬೇಕು ಎಂದು ತಮಾಷೆ ಮಾಡಿದ್ದಾರೆ.