ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

13 ದಿನಗಳಲ್ಲಿ 3 ಬಾರಿ ಎವರೆಸ್ಟ್ ಏರಿ ಸಾಧನೆಗೈದ ಯುವತಿ: ವಿಶ್ವದಾಖಲೆಯ ದಿನ ನೆನೆದು ಭಾವುಕ!

Viral News: ಶ್ರಮ ಪಟ್ಟರೇ ಅಸಾಧ್ಯ ಎನಿಸುವುದನ್ನು ಸಾಧ್ಯವಾಗಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಯುವತಿಯೊಬ್ಬರು ಕೇವಲ 13 ದಿನಗಳ ಸಮಯದಲ್ಲಿ ಮೂರು ಬಾರಿ ಎವರೆಸ್ಟ್ ಶಿಖರ ವನ್ನು ಏರಿ ವಿಶ್ವ ದಾಖಲೆ ಮಾಡಿದ್ದಾರೆ. ಪೂರ್ಣಿಮಾ ಶ್ರೇಷ್ಠ ಎನ್ನುವ ಯುವತಿ ಈ ಸಾಧನೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ...

13 ದಿನಗಳಲ್ಲಿ ಮೂರು ಬಾರಿ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ

13 ದಿನಗಳಲ್ಲಿ ಮೂರು ಬಾರಿ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ -

Profile
Pushpa Kumari May 26, 2026 12:07 PM

ನವದೆಹಲಿ, ಮೇ 26: ಕನಸುಗಳನ್ನು ಈಡೇರಿಸಲು ಪ್ರಯತ್ನ ಪಡಬೇಕು ಎನ್ನುವ ಮಾತು ನೀವು ಕೇಳಿರಬಹುದು..ಶ್ರಮ ಪಟ್ಟರೇ ಅಸಾಧ್ಯ ಎನಿಸುವುದನ್ನು ಸಾಧ್ಯವಾಗಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಯುವತಿಯೊಬ್ಬರು ಕೇವಲ 13 ದಿನಗಳ ಸಮಯದಲ್ಲಿ ಮೂರು ಬಾರಿ ಎವರೆಸ್ಟ್ ಶಿಖರವನ್ನು ಏರಿ ವಿಶ್ವ ದಾಖಲೆ ಮಾಡಿದ್ದಾರೆ. ಪೂರ್ಣಿಮಾ ಶ್ರೇಷ್ಠ ಎನ್ನುವ ಯುವತಿ ಈ ಸಾಧನೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ (Viral News) ಈ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಮೌಂಟ್ ಎವರೆಸ್ಟ್ ಶಿಖರವನ್ನು ತಲುಪುವುದು ವಿಶ್ವದ ಅತ್ಯಂತ ಕಠಿಣ ಸಾಧನೆಗಳಲ್ಲಿ ಒಂದಾಗಿದೆ. ಅದರಲ್ಲೂ ಈ ಶಿಖರವನ್ನು ಏರಬೇಕು ಎನ್ನುವುದು ಹೆಚ್ಚಿನ ಯುವಕ- ಯುವತಿಯರ ಆಸೆ ಆಗಿರುತ್ತದೆ. ಅದೇ ರೀತಿ ನೇಪಾಳದ ಫೋಟೋ ಜರ್ನಲಿಸ್ಟ್ ಪೂರ್ಣಿಮಾ ಶ್ರೇಷ್ಠ ಅವರು ಈ ಸಾಧನೆ ಮಾಡಿ ಹೆಸರು ಗಳಿಸಿದ್ದಾರೆ.



ಪೂರ್ಣಿಮಾ ಶ್ರೇಷ್ಠಾ ಅವರು ಅಪರೂಪದ ಸಾಧನೆಯನ್ನು ಪೂರ್ಣಗೊಳಿಸಿದ ದಿನವನ್ನು ನೆನಪಿಸಿಕೊಳ್ಳುತ್ತಾ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ."ಎರಡು ವರ್ಷಗಳ ಹಿಂದೆ ಈ ದಿನ, ನಾನು ಒಂದೇ ಕ್ಲೈಂಬಿಂಗ್ ಋತುವಿನಲ್ಲಿ ಮೌಂಟ್ ಎವರೆಸ್ಟ್ ಅನ್ನು ಮೂರು ಬಾರಿ ಏರಿದೆ" ಇತಿಹಾಸ ದಲ್ಲಿ ಈ ಸಾಧನೆಯನ್ನು ಸಾಧಿ ಸಿದ ಏಕೈಕ ಮಹಿಳೆ"ಎಂದು ಅವರು ಬರೆದಿದ್ದಾರೆ.

8,848.86 ಮೀಟರ್ ಎತ್ತರವಿರುವ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ್ದು ಕೇವಲ 13 ದಿನಗಳಲ್ಲಿ ಮೂರು ಬಾರಿ ಏರಿ ಈ ಐತಿಹಾಸಿಕ ಸಾಹಸವನ್ನು ಪೂರ್ಣಗೊಳಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ, ಪರ್ವತಾರೋಹಿ ಪ್ರಯಾಣ ಎಷ್ಟು ಕಷ್ಟಕರ ವಾಗಿತ್ತು ಎಂದು ಬರೆದಿದ್ದಾರೆ. ನೇಪಾಳದ ಗೂರ್ಖಾ ದಲ್ಲಿರುವ ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ತನಗೆ ವಿಶ್ವದ ಅತಿ ಎತ್ತರದ ಪರ್ವತವನ್ನು ತಲುಪುವುದು ಎಂದಿಗೂ ಸುಲಭವಲ್ಲ ಎಂದರು.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಪ್ರತಿಯೊಂದು ಹಂತದಲ್ಲೂ ನೋವು, ತ್ಯಾಗದ ಕ್ಷಣಗಳಿತ್ತು.ಅವರ ಪ್ರಕಾರ, ಪರ್ವತಗಳು ಅವರಿಗೆ ಒಂದು ಪ್ರಮುಖ ಪಾಠವನ್ನು ಕಲಿಸಿದವು. ಕನಸುಗಳನ್ನು ಬೆನ್ನಟ್ಟುತ್ತಿರುವ ಪ್ರತಿಯೊಬ್ಬ ಯುವತಿಯರಿಗೂ ನಾನು ಹೇಳುವುದಿಷ್ಟೇ, ನಿಮ್ಮ ಹಿನ್ನೆಲೆ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ನೀವು ಹಳ್ಳಿಯವರು,ಬಡವರು ನಮ್ಮ ಕನಸು ಎಷ್ಟು ಅಸಾಧ್ಯವೆಂದು ತೋರುತ್ತದೆ ಎನ್ನುವುದು ಮುಖ್ಯವಲ್ಲ ಎಂದು ಇತರರಿಗೆ ಭರವಸೆ ನೀಡಿದ್ದಾರೆ.

ಪೋಸ್ಟ್ ಆನ್‌ಲೈನ್‌ನಲ್ಲಿ ಗಮನ ಸೆಳೆಯುತ್ತಿದ್ದಂತೆ, ಹಲವಾರು ಬಳಕೆದಾರರು ಪೂರ್ಣಿಮಾ ಅವರ ಸಾಧನೆಯನ್ನು ಹೊಗಳಿದ್ದಾರೆ. ಒಬ್ಬ ಬಳಕೆದಾರರು ಅಭಿನಂದನೆಗಳು ಪೂರ್ಣಿಮಾ! ಏರುತ್ತಲೇ ಇರಿ ಮತ್ತು ಸ್ಪೂರ್ತಿದಾಯಕವಾಗಿರಲಿ ಎಂದರು. ಮತ್ತೊಬ್ಬರು ಎಂತಹ ಸಾಧನೆ! ನೀವು ಪ್ರಶಂಸೆಗೆ ಅರ್ಹರು ಎಂದಿದ್ದಾರೆ.