ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆನೆಗಳ ಮೇಲೆ ಕುಳಿತು ಯೋಗ ಮಾಡಿದ ಅರಣ್ಯ ರಕ್ಷಕರು; ಮನುಷ್ಯ- ಪ್ರಾಣಿಗಳ ಬಾಂಧವ್ಯಕ್ಕೆ ಜನರ ಮೆಚ್ಚುಗೆ, ವಿಡಿಯೋ ನೋಡಿ

Viral News: ಅಂತರರಾಷ್ಟ್ರೀಯ ಯೋಗ ದಿನದಂದು ಪಶ್ಚಿಮ ಬಂಗಾಳದ ಜಲದಪಾರ ರಾಷ್ಟ್ರೀಯ ಉದ್ಯಾನವನದಿಂದ ಗಮನ ಸೆಳೆಯುವಂತಹ ವಿಡಿಯೊವೊಂದು ವೈರಲ್ ಆಗಿದೆ. ಅರಣ್ಯ ರಕ್ಷಕರು ಕಾಡಿನ ಆಳದಲ್ಲಿ ಆನೆಗಳ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿದ್ದು ಪರಿಸರ ಮತ್ತು ಪ್ರಾಣಿಗಳ ಮೇಲೆ ಹೊಂದಿರುವ ಇವರ ಭಾಂದವ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ...

ಆನೆಗಳ ಮೇಲೆ ಯೋಗ ಪ್ರದರ್ಶನ: ಪರಿಸರ ಕಾಳಜಿಗೆ ಮನಸೋತ ನೆಟ್ಟಿಗರು!

ಆನೆಗಳ ಮೇಲೆ ಯೋಗ ಪ್ರದರ್ಶನ -

Profile
Pushpa Kumari Jun 22, 2026 3:11 PM

ಪಶ್ಚಿಮ ಬಂಗಾಳ, ಜೂ.22: ಯೋಗ ದಿನಚರಣೆ ಪ್ರಯುಕ್ತ ಎಲ್ಲೆಡೆ ಆಚರಣೆ ಜೋರಾಗಿತ್ತು.. ಸಂಘ, ಶೈಕ್ಷಣಿಕ ಸಂಸ್ಥೆಗಳು, ರಾಜಕೀಯ ಗಣ್ಯರು ಹೀಗೆ ವಿವಿಧೆಡೆ ಯೋಗ ದಿನವನ್ನು ಆಚರಣೆ ಮಾಡಿದ್ದಾರೆ. ಇದೀಗ ಅಂತರರಾಷ್ಟ್ರೀಯ ಯೋಗ ದಿನದಂದು ಪಶ್ಚಿಮ ಬಂಗಾಳದ ಜಲದಪಾರ ರಾಷ್ಟ್ರೀಯ ಉದ್ಯಾನವನದಿಂದ ಗಮನ ಸೆಳೆಯುವಂತಹ ದೃಶ್ಯವೊಂದು ವೈರಲ್ ಆಗಿದೆ. ಅರಣ್ಯ ರಕ್ಷಕರು ಕಾಡಿನ ಆಳದಲ್ಲಿ ಆನೆಗಳ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿರುವ ವಿಡಿಯೊ ವೊಂದು ವೈರಲ್ (Viral News) ಆಗಿದ್ದು ಪರಿಸರ ಮತ್ತು ಪ್ರಾಣಿಗಳ ಮೇಲೆ ಹೊಂದಿರುವ ಇವರ ಭಾಂದವ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಜಲದಪರ ರಾಷ್ಟ್ರೀಯ ಉದ್ಯಾನವನದ ವೀಡಿಯೊ ಅಂತಾರಾಷ್ಟ್ರೀಯ ಯೋಗ ದಿನದಂದು ವ್ಯಾಪಕ ಗಮನ ಸೆಳೆದಿದೆ. ಅರಣ್ಯ ರಕ್ಷಕರು ಕಾಡಿನ ಮಧ್ಯೆ ಆನೆಗಳ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿರುವುದನ್ನು ಇದು ತೋರಿಸುತ್ತದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡ ಈ ಕ್ಲಿಪ್ ಶೇರ್ ಮಾಡಿದ್ದು ಅರಣ್ಯ ರಕ್ಷಕರು ಯೋಗಾಸನಗಳನ್ನು ಮಾಡುತ್ತಿರುವುದು ಕಂಡು ಬಂದಿದೆ.

ವಿಡಿಯೋ ನೋಡಿ:



ದಟ್ಟವಾದ ಹಸಿರಿನಿಂದ ಸುತ್ತುವರೆದಿರುವ ಅರಣ್ಯ ಸಿಬ್ಬಂದಿಗಳು ಆನೆಗಳು ಅರಣ್ಯದ ಮೂಲಕ ಚಲಿಸುತ್ತಿರುವಾಗ ಶಾಂತವಾಗಿ ಯೋಗ ಭಂಗಿಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು. ಅರಣ್ಯ ಸೇವಾ ಅಧಿಕಾರಿ ವನ್ಯಜೀವಿಗಳ ನಡುವಿನ ಶಾಂತಿಯುತ ಸಹಬಾಳ್ವೆಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೊವನ್ನು ದೇಶದ ಎಲ್ಲೋ ದೂರದ ಮೂಲೆಗಳಲ್ಲಿ ಪ್ರಕೃತಿ ಮತ್ತು ತಲೆಮಾರುಗಳ ಪರಂಪರೆ ಯೊಂದಿಗೆ ಸಾಮರಸ್ಯ ಎಂದು ಬರೆದು ವಿಡಿಯೊ ಶೇರ್ ಮಾಡಲಾಗಿದೆ. ದಿನವಿಡೀ ಕಾಡಿನ ರಕ್ಷಣೆಯಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿಯ ಶಿಸ್ತು ಮತ್ತು ವನ್ಯಜೀವಿಗಳೊಂದಿಗಿನ ಬಾಂಧವ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಜಲ್ದಾಪರ ರಾಷ್ಟ್ರೀಯ ಉದ್ಯಾನವನವು ಭಾರತೀಯ ಒಂಟಿ ಕೊಂಬಿನ ಖಡ್ಗಮೃಗಗಳ ಜನಸಂಖ್ಯೆಗೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಆನೆಗಳು, ಚಿರತೆಗಳು, ಗೌರ್‌ಗಳು, ಜಿಂಕೆ ಪ್ರಭೇದಗಳು ಮತ್ತು ನೂರಾರು ಪಕ್ಷಿ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ.