"ದೇಶ ಬದಲಾಗುತ್ತಿದೆ": ಹಿಂಸಾಚಾರ ತೊರೆದು ಕೈಮಗ್ಗ ಸೀರೆ ತೊಟ್ಟು ರ‍್ಯಾಂಪ್ ವಾಕ್ ಮಾಡಿದ ಮಾಜಿ ಮಾವೋವಾದಿಗಳು
Viral Video: ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸುತ್ತಿದ್ದ ಮಾಜಿ ನಕ್ಸಲ್ ಮಹಿಳೆಯರು ಇಂದು ಸಮಾಜದ ಮುಖ್ಯ ಭಾಗವಾಗಿದ್ದಾರೆ. ರಾಯ್ ಪುರದಲ್ಲಿ ಆಯೋಜನೆ ಮಾಡಲಾಗಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಕೈಮಗ್ಗ ಉಡುಪುಗಳನ್ನು ಧರಿಸಿ ಈ ಮಹಿಳೆಯರು ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಬಸ್ತಾರ್‌ನಲ್ಲಿ ಸಶಸ್ತ್ರ ದಂಗೆಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಫ್ಯಾಷನ್ ಶೋನಲ್ಲಿ ರ‍್ಯಾಂಪ್ ವಾಕ್ ಮಾಡಿ ಗಮನ ಸೆಳೆದ ಮಾಜಿ ನಕ್ಸಲರು -
ನವದೆಹಲಿ, ಆ. 13: ಈ ಹಿಂದೆ ಛತ್ತೀಸ್‌ಗಢದ ದಟ್ಟ ಕಾಡುಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸುತ್ತಿದ್ದ ನಕ್ಸಲ್ ಮಹಿಳೆಯರು ಇಂದು ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಅದರ ಭಾಗವಾಗಿ ರಾಯ್‌ಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಕೈಮಗ್ಗ ಉಡುಪುಗಳನ್ನು ಧರಿಸಿ ಈ ಮಹಿಳೆಯರು ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಬಸ್ತಾರ್‌ನಲ್ಲಿ ಸಶಸ್ತ್ರ ದಂಗೆಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. (Viral News). ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಒಂದು ಕಾಲದಲ್ಲಿ ನಕ್ಸಲರ ಕೇಂದ್ರ ಸ್ಥಾನವಾಗಿದ್ದ ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತಾರ್ ಪ್ರದೇಶಗಳನ್ನು ನಕ್ಸಲ್ ಹಿಂಸಾಚಾರದಿಂದ ಮುಕ್ತ ಎಂದು ಘೋಷಿಸಲಾಗಿದೆ. ಈಗ ಹಿಂಸೆಯ ದಾರಿ ತೊರೆದು ಈ ಮಹಿಳೆಯರು ಸಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ನಕ್ಸಲ್ ಮಹಿಳೆಯರು ಕೈಮಗ್ಗ ಸೀರೆಗಳನ್ನು ಉಟ್ಟು ಆತ್ಮವಿಶ್ವಸದಿಂದ ರ‍್ಯಾಂಪ್ ವಾಕ್ ಮಾಡಿದ್ದಾರೆ.
ವಿಡಿಯೊ ನೋಡಿ:
𝐅𝐫𝐨𝐦 𝐁𝐚𝐬𝐭𝐚𝐫’𝐬 𝐝𝐞𝐧𝐬𝐞 𝐟𝐨𝐫𝐞𝐬𝐭𝐬, 𝐰𝐡𝐞𝐫𝐞 𝐭𝐡𝐞𝐲 𝐨𝐧𝐜𝐞 𝐜𝐚𝐫𝐫𝐢𝐞𝐝 𝐰𝐞𝐚𝐩𝐨𝐧𝐬… 𝐭𝐨 𝐑𝐚𝐢𝐩𝐮𝐫’𝐬 𝐫𝐚𝐦𝐩, 𝐰𝐡𝐞𝐫𝐞 𝐭𝐡𝐞𝐲 𝐧𝐨𝐰 𝐰𝐚𝐥𝐤 𝐰𝐢𝐭𝐡 𝐩𝐫𝐢𝐝𝐞.
— BJP (@BJP4India) August 13, 2026
These former Naxals have left violence behind and embraced a life of dignity,… pic.twitter.com/n3Z4JmYdWU
ಬಿಜೆಪಿಯ ಎಕ್ಸ್ ಹ್ಯಾಂಡಲ್ ಮತ್ತು ಎಎನ್‌ಐ ಈ ಕಾರ್ಯಕ್ರಮದ ವಿಡಿಯೊ ಹಂಚಿಕೊಂಡಿದೆ. ಅವರ ಹಿಂದಿನ ನಡವಳಿಕೆ ಮತ್ತು ಪ್ರಸ್ತುತ ಬದಲಾವಣೆಗಳು ಆನ್‌ಲೈನ್‌ನಲ್ಲಿ ತ್ವರಿತವಾಗಿ ಗಮನ ಸೆಳೆದಿದೆ. ಸಮಾಜದ ಮುಖ್ಯವಾಹಿನಿಗೆ ಬಂದ ಈ ಮಹಿಳೆಯರು, ಸೀರೆ ಉಟ್ಟು ವೃತ್ತಿಪರರಂತೆ ಹೆಜ್ಜೆ ಹಾಕಿದರು. ಇವರ ನಗು ಮತ್ತು ಆತ್ಮವಿಶ್ವಾಸದ ನಡಿಗೆಗೆ ಕಾರ್ಯಕ್ರಮದಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಮನೆ ಬಾಗಿಲಿನ ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ
ವೈರಲ್ ವಿಡಿಯೊದಲ್ಲಿ ನಕ್ಸಲ್ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ರ‍್ಯಾಂಪ್ ವಾಕ್ ಮಾಡುತ್ತ ಭಾರತೀಯ ಕೈಮಗ್ಗದ ಸಾರ್ವಜನಿಕ ಆಚರಣೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರೊಬ್ಬರು, ʼʼಈ ಮಹಿಳೆಯರಲ್ಲಿ ಕೆಲವರು ಬಸ್ತಾರ್ ಕಾಡುಗಳ ಮೂಲಕ ಬಂದೂಕು ಹಿಡಿದುಕೊಂಡು ಹೋಗುತ್ತಿದ್ದರು ಎಂದು ಊಹಿಸಲೂ ಕಷ್ಟ. ನಕ್ಸಲಿಸಂ ಬಿಟ್ಟು ಸಮಾಜದ ಬದಲಾವಣೆಗೆ ಕಾರಣವಾದರುʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼನನ್ನ ದೇಶ ಬದಲಾಗುತ್ತಿದೆ. ಒಂದು ಕಾಲದಲ್ಲಿ ಕಾಡಿನಲ್ಲಿ ಬಂದೂಕು ಹಿಡಿಯುತ್ತಿದ್ದ ಮಹಿಳೆಯರು ಇಂದು ರ‍್ಯಾಂಪ್ ವಾಕ್ ಮಾಡುತ್ತಿದ್ದಾರೆ. ನಿಜಕ್ಕೂ ಹೆಮ್ಮೆ ಎನಿಸುತ್ತಿದೆʼʼ ಎಂದಿದ್ದಾರೆ.