ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುಂಭಮೇಳದ ಬೆಡಗಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್; ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲು

ನಟಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು. ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದಳು. ಆಕೆಗೆ 18 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಪೊಲೀಸರು ಮದುವೆಗೆ ಭದ್ರತೆ ಒದಗಿಸಿದ್ದರು. ಈ ನಡುವೆ ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲಾಗಿದೆ.

ಮೊನಾಲಿಸಾ ಪತಿ ವಿರುದ್ಧ ಫೋಕ್ಸೊ ಕೇಸ್ ದಾಖಲು: ಕಾರಣವೇನು?

ಮೊನಾಲಿಸಾ ಪತಿ ವಿರುದ್ಧ ಫೋಕ್ಸೊ ಕೇಸ್ ದಾಖಲು -

Profile
Pushpa Kumari Apr 10, 2026 5:21 PM

ನವದೆಹಲಿ,ಎ.10: ಕುಂಭಮೇಳದ ಹುಡುಗಿ ಮೊನಾಲಿಸಾ (Monalisha) ತನ್ನ ಕಣ್ಣಿನ ಆಕರ್ಷಣೆ ಮೂಲಕ ಭಾರೀ ವೈರಲ್ ಆಗಿದ್ದರು. ಸದ್ಯ ಇವರ ಮದುವೆ ವಿಚಾರ ಭಾರೀ ಚರ್ಚೆಯಲ್ಲಿದೆ. ನಟಿ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು. ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದಳು. ಆಕೆಗೆ 18 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಪೊಲೀಸರು ಮದುವೆಗೆ ಭದ್ರತೆ ಒದಗಿಸಿದ್ದರು. ಈ ನಡುವೆ ಪತಿ ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕೇಸ್ ದಾಖಲಾಗಿದೆ.

ಮಾರ್ಚ್ 11ರಂದು ಕೇರಳದ ತಿರುವನಂತಪುರಂನಲ್ಲಿರುವ ಅರುಮನೂರ್ ಶ್ರೀ ನೈನಾರ್ ದೇವಸ್ಥಾನದಲ್ಲಿ ಪೋಷಕರ ವಿರೋಧದ ನಡುವೆಯೂ ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಅವರ ಮದುವೆ ನಡೆದಿತ್ತು.. ಈ ಹಿಂದೆಯೂ ಮೊನಾಲಿಸಾ ಇನ್ನು ಅಪ್ರಾಪ್ತೆ 16 ವರ್ಷ ಎನ್ನುವ ಆರೋಪಗಳು ಕೇಳಿಬಂದಿತ್ತು. ಆದರೆ ಪೊಲೀಸರು ಆಕೆಗೆ 18 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಮದುವೆಗೆ ಭದ್ರತೆ ನೀಡಿದ್ದರು.

Viral News: ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ಮೊನಲಿಸಾ ತಂದೆ ಮದುವೆ ಆಗದಂತೆ ವಿರೋಧ ವ್ಯಕ್ತಪಡಿಸಿದರೂ ತಂದೆಯನ್ನು ಠಾಣೆಗೆ ಕರೆಸಿ ಆಕೆಗೆ 18 ವರ್ಷ ವಯಸ್ಸಾಗಿದೆ. ಹಾಗಾಗಿ ಆಕೆ ಯಾರ ಜೊತೆ ಇರಬೇಕು ಎಂದು ನಿರ್ಧರಿಸುವ ಕಾನೂನುಬದ್ಧ ಹಕ್ಕು ಹೊಂದಿದ್ದಾರೆ ಎಂದಿದ್ದರು. ಆದರೆ ಆಕೆಗೆ ಇನ್ನು 18 ವರ್ಷ ವಯಸ್ಸಾಗಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ.

ಸದ್ಯ ಮೊನಾಲಿಸಾ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ... ಆಕೆಗೆ ಮದುವೆ ವಯಸ್ಸು ಆಗಿಲ್ಲ.‌ ಹಾಗಾಗಿ ಅಪಹರಣ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಫರ್ಮಾನ್ ವಿರುದ್ಧ ಮೊನಾಲಿಸಾಳ ಹುಟ್ಟೂರು ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕಾಯ್ದೆ ಜಾರಿ ಯಾಗಿರುವುದರಿಂದ ಜೈಲು ಫಿಕ್ಸ್ ಎನ್ನಲಾಗಿದೆ.

ತನ್ನ ಕಣ್ಣಿನ ಆಕರ್ಷಣೆ ಮೂಲಕ ವೈರಲ್ ಆದ ಮೊನಾಲಿಸಾಗೆ ಹಲವು ಸಿನಿಮಾ ಆಫರ್ ಗಳು ಬಂದಿವೆ..ಮಲಯಾಳಂ ಚಿತ್ರದಲ್ಲಿ ನಟಿಸಲು ಕೂಡ ಮೊನಾಲಿಸಾ ಆಯ್ಕೆ ಆಗಿದ್ದಳು. ಆ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಫರ್ಮಾನ್ ಜೊತೆ ಆಕೆಗೆ ಲವ್ ಆಗಿದೆ. ಸದ್ಯ ಪೋಷಕರ ವಿರೋಧದ ನಡುವೆ ಆಕೆ ಫರ್ಮಾನ್ ಖಾನ್ ಜೊತೆ ಮದುವೆಯಾಗಿದ್ದಾರೆ..