ರೈತರ ಕಷ್ಟಕ್ಕೆ ಮಿಡಿದ ಪುಟ್ಟ ಜೀವಗಳು; ಕೂಡಿಟ್ಟ 3,575 ರೂಪಾಯಿ ಮಹಾರಾಷ್ಟ್ರ ಸಿಎಂಗೆ ದೇಣಿಗೆ ನೀಡಿದ ಅಕ್ಕ-ತಮ್ಮ!
Viral News: ಮಹಾರಾಷ್ಟ್ರದ ಪುಟ್ಟ ಬಾಲಕಿ ಮತ್ತು ಆಕೆಯ ತಮ್ಮ ಬರಪೀಡಿತ ರೈತರಿಗೆ ಕೈಲಾದಷ್ಟು ನೆರವು ನೀಡುವ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಬಾಲಕಿ ಮತ್ತು ಆಕೆಯ ಸಹೋದರ ರೈತರಿಗೆ ಸಹಾಯ ಮಾಡಲು ತಮ್ಮ 'ಪಿಗ್ಗಿ ಬ್ಯಾಂಕ್' ಉಳಿತಾಯದ 3,575 ರೂಪಾಯಿ ದೇಣಿಗೆ ನೀಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಕೊಟ್ಟ ಪುಟ್ಟ ಮಕ್ಕಳು -
ಮುಂಬೈ, ಅ. 27: ಕಷ್ಟದಲ್ಲಿದ್ದವರಿಗೆ ನೆರವು ನೀಡಲು ದೊಡ್ಡ ಮೊತ್ತದ ಹಣಕ್ಕಿಂತಲೂ ಸಹಾಯ ಮಾಡಬೇಕು ಎನ್ನುವ ಮನಸ್ಸು ನಮ್ಮಲ್ಲಿರಬೇಕು. ಇದಕ್ಕೆ ಸಾಕ್ಷಿಯಾಗಿ (Viral News) ಮಹಾ ರಾಷ್ಟ್ರದ ಬಾಲಕಿ ಮತ್ತು ಆಕೆಯ ತಮ್ಮ ಬರಪೀಡಿತ ರೈತರಿಗೆ ಕೈಲಾದಷ್ಟು ನೆರವು ನೀಡುವ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಮಹಾರಾಷ್ಟ್ರದ ಪುಟ್ಟ ಬಾಲಕಿ ಮತ್ತು ಆಕೆಯ ಸಹೋದರ ರೈತರಿಗೆ ಸಹಾಯ ಮಾಡಲು ತಮ್ಮ ಪಿಗ್ಗಿ ಬ್ಯಾಂಕ್‌ನಲ್ಲಿದ್ದ ಉಳಿತಾಯದ 3,575 ರೂಪಾಯಿ ದೇಣಿಗೆ ನೀಡಿದ್ದಾರೆ.
ಮಕ್ಕಳ ಈ ಪ್ರೀತಿಯ ನಡೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವರ್ದಾ ತಿಮಂಡೆ ಮತ್ತು ಆಕೆಯ ಸಹೋದರ ಇಬ್ಬರು ಸೇರಿ ಉಳಿತಾಯದ ಹಣ 3,575 ರೂಪಾಯಿ ಬರಪೀಡಿತ ರೈತರ ಸಹಾಯಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟಿದ್ದಾರೆ.
ದೇಣಿಗೆ ನೀಡಿದ ಅಕ್ಕ-ತಮ್ಮ:
ತಮ್ಮ ಬಳಿ ಎಷ್ಟು ಹಣವಿದೆ ಎಂಬುದು ಮುಖ್ಯವಾಗುವುದಲ್ಲ. ಸಹಾಯ ಮಾಡುವ ನಿರ್ಧಾರ ಮುಖ್ಯವಾಗುತ್ತದೆ ಎಂಬುದನ್ನು ಮಹಾರಾಷ್ಟ್ರದ ಪುಟ್ಟ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳೊಂದಿಗಿನ ಸಂವಾದದ ವಿಡಿಯೊವನ್ನು ಶೇರ್ ಮಾಡಿದ ಮುಖ್ಯಮಂತ್ರಿ ಫಡ್ನವೀಸ್, "ಸಣ್ಣ ಕೈಗಳು ಮಾಡಿದ ಸಹಾಯ ಇದು, ಮಕ್ಕಳದು ನಿಜಕ್ಕೂ ಹೃದಯವಂತ ಮನಸ್ಸುʼʼ ಎಂದು ಬಣ್ಣಿಸಿದ್ದಾರೆ.
ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ
ಮಕ್ಕಳು ದೀರ್ಘ ಕಾಲದವರೆಗೆ ಕೂಡಿಟ್ಟಿದ್ದ ಈ ಹಣವನ್ನು, ಬರಪೀಡಿತ ರೈತರಿಗೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ತಾವು ಹಣವನ್ನು ಏಕೆ ದೇಣಿಗೆ ನೀಡಲು ಮುಂದಾಗಿದ್ದು ಎಂಬುದನ್ನು ವಿವರಿಸಿದ ಬಾಲಕಿ, "ನಮ್ಮ ಈ ಪುಟ್ಟ ಸಹಾಯವು ರೈತ ಅಂಕಲ್‌ಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ" ಎಂದು ಪ್ರೀತಿಯಿಂದ ಹೇಳಿದ್ದಾರೆ
ರೈತರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಯೋಚನೆ ಮಾಡಿದ್ದಕ್ಕಾಗಿ ಬಾಲಕಿಯನ್ನು ನೆಟ್ಟಿಗರು ಹೊಗಳಿದ್ದಾರೆ. ಮಕ್ಕಳ ಈ ಮನೋಭಾವಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.