ಬೆಂಗಳೂರು ಹವಾಮಾನಕ್ಕೆ ಫಿದಾ: ಸ್ವಂತ ಊರಿಗೆ ಹೋದರೂ ಕಾಡುತ್ತಿದೆ ಎಂದು ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ಯುವತಿ!
Viral News: ಸಿಲಿಕಾನ್ ಸಿಟಿ ಎಂದಾಗ ಟ್ರಾಫಿಕ್ ಹಾಗೂ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದರೂ ಇಲ್ಲಿನ ಹವಾಮಾನಕ್ಕೆ ಮಾನಸೋತವರು ಅನೇಕರು ಇದ್ದಾರೆ. ಇದೀಗ ಸುಮಾರು 3 ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದು ,ಇತ್ತೀಚೆಗೆ ತಮ್ಮ ಸ್ವಂತ ಊರಿಗೆ ಹೋಗಿರುವ ಯುವತಿಯೊಬ್ಬರು ಇಲ್ಲಿನ ತಂಪಾದ ವಾತಾವರಣವನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಸೋಷಿ ಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ
ಸ್ವಂತ ಊರಿಗೆ ಹೋದರೂ ಕಾಡುತ್ತಿದೆ ಎಂದು ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ಯುವತಿ -
ಬೆಂಗಳೂರು,ಸೆ.20 :ಸಿಲಿಕಾನ್ ಸಿಟಿ ಎಂದಾಗ ಟ್ರಾಫಿಕ್ ಹಾಗೂ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆ ಯುತ್ತಲೇ ಇದ್ದರೂ ಇಲ್ಲಿನ ಹವಾಮಾನಕ್ಕೆ ಮಾನಸೋತವರು ಅನೇಕರು ಇದ್ದಾರೆ. ಇದೀಗ ಸುಮಾರು 3 ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದು , ಇತ್ತೀಚೆಗೆ ತಮ್ಮ ಸ್ವಂತ ಊರಿಗೆ ಹೋಗಿರುವ ಯುವತಿಯೊಬ್ಬರು ಇಲ್ಲಿನ ತಂಪಾದ ವಾತಾವರಣವನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಸೋಷಿ ಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ಅದೇ ರೀತಿ ಇಲ್ಲಿನ ಸಾಧಕ- ಭಾದಕಗಳ ಬಗ್ಗೆಯೂ ಚರ್ಚೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನುಭವಗಳನ್ನು ಆರ್ಯಾ ಎನ್ನುವ ಯುವತಿ ಬರೆದುಕೊಂಡಿದ್ದಾರೆ. ಮೊದಲು ಅವರು ಬೆಂಗಳೂರಿ ನಲ್ಲಿ ಬಹಳಷ್ಟು ತೊಂದರೆ ಅನುಭವಿಸಿದ್ದು ಟ್ರಾಫಿಕ್ ಕಿರಿಕಿರಿ ನಗರದ ಪ್ರಮುಖ ರಸ್ತೆಗಳಲ್ಲಿ ದಿನನಿತ್ಯ ಗಂಟೆಗಟ್ಟಲೆ ವಾಹನ ದಟ್ಟಣೆ, ಬಹಳಷ್ಟು ಸಮಯ ವ್ಯರ್ಥ ಮಾಡಿದೆ ಅಂದಿದ್ದಾರೆ.
ವಿಡಿಯೋ ನೋಡಿ:
ಆದರೆ ಬೆಂಗಳೂರಿನಲ್ಲಿ ಬಹಳಷ್ಟು ಮಿಸ್ ಮಾಡಿಕೊಳ್ಳುವುದು ಇಲ್ಲಿನ ವೆದರ್, ಸ್ವಂತ ಊರಿಗೆ ಹೋದರೂ ತನಗೆ ಹೆಚ್ಚು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರಿನ ಹವಾಮಾನ ತಮಗೆ ಅತ್ಯಂತ ಇಷ್ಟವಾಗಿತ್ತು ಎಂದು ಆರ್ಯಾ ತಿಳಿಸಿದ್ದಾರೆ. "ಬೆಂಗಳೂರಿನ ಹವಾಮಾನ ನನ್ನನ್ನು ಎಷ್ಟರಮಟ್ಟಿಗೆ ಹೊಂದಿಕೊಂಡಿದ್ದೆ ಎಂದರೆ, ಈಗ ನನ್ನ ಸ್ವಂತ ಊರಿನ ವಾತಾವರಣ ಅಥವಾ ತಾಪಮಾನವನ್ನು ತಡೆದುಕೊಳ್ಳಲು ನನಗಾಗುತ್ತಿಲ್ಲ. ಅಲ್ಲಿನ ಹವಾಮಾನವೇ ಅದ್ಭುತ" ಎಂದು ಬಣ್ಣಿಸಿದ್ದಾರೆ.
Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
ಇವರ ಈ ಪೋಸ್ಟ್‌ಗೆ ನೆಟ್ಟಿಗರಿಂದಲೂ ಬಹು ಬೆಂಬಲ ವ್ಯಕ್ತವಾಗಿದ್ದು, "ಬೆಂಗಳೂರಿನ ರಸ್ತೆಗಳು ಮತ್ತು ಟ್ರಾಫಿಕ್ ಕಿರಿಕಿರಿ ಆದರೂ ಇಲ್ಲಿನ ಹವಾಮಾನವನ್ನು ಯಾರೂ ಮಿಸ್ ಮಾಡಿಕೊಳ್ಳಲು ಬಯಸಲ್ಲ ಎಂದು ಹಲವರು ಕಾಮೆಂಟ್ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ. ಬಳಕೆದಾರ ರೊಬ್ಬರೂ ತಾನು ಅತೀ ಹೆಚ್ಚು ಸಿಲಿಕಾನ್ ಸಿಟಿಯಲ್ಲಿ ಇಷ್ಟ ಪಡುವುದೇ ಇಲ್ಲಿನ ವೇದರ್ ಎಂದು ಬರೆದಿದ್ದಾರೆ.