ಅನಾರೋಗ್ಯದಿಂದ ರಜೆಯಲ್ಲಿದ್ದರೂ ವರ್ಕ್ ಫ್ರಮ್ ಹೋಮ್ ಮಾಡಿ ಎಂದ ಮ್ಯಾನೇಜರ್‌ಗೆ ಮುಟ್ಟಿ ನೋಡುವಂತ ರಿಪ್ಲೈ ಕೊಟ್ಟ ಜೆನ್ ಝೀ ಉದ್ಯೋಗಿ
Viral News: ಇಲ್ಲೊಬ್ಬ ಜೆನ್ ಝೀ ಉದ್ಯೋಗಿ ರಜೆ ನಿರಾಕರಿಸಿದ ಮ್ಯಾನೇಜರ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಅನಾರೋಗ್ಯದ ಕಾರಣ ರಜೆ ಕೇಳಿದ ಉದ್ಯೋಗಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಮಾನ್ಯೇಜರ್ ಸೂಚಿಸಿದ್ದರು. ಆದರೆ ಈ ನಡೆಗೆ ಬೇಸತ್ತ ಉದ್ಯೋಗಿ, ತಕ್ಷಣವೇ ಬೇರೆ ಕಂಪನಿಯಲ್ಲಿ ಸಂದರ್ಶನ ಕೊಟ್ಟು ಕೆಲಸ ಗಿಟ್ಟಿಸಿಕೊಂಡು ರಾಜೀನಾಮೆ ನೀಡಿದ್ದಾರೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನೇಜರ್‌ಗಳಿಗೆ ತಕ್ಕ ಪಾಠ ಕಲಿಸಲು ಜೆನ್ ಝೀಗಳೇ ಸರಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 7: ಸಾಮಾನ್ಯವಾಗಿ ಉದ್ಯೋಗಿಗಳು ಕೆಲಸದ ಒತ್ತಡ, ವೇತನದ ವಿಚಾರವಾಗಿ ರಾಜೀನಾಮೆ ನೀಡಿರುವುದನ್ನು ನೀವು ಗಮನಿಸಿರಬಹುದು. ಆದರೆ ಇಲ್ಲೊಬ್ಬ ಜೆನ್ ಝೀ ಉದ್ಯೋಗಿ ರಜೆ ನಿರಾಕರಿಸಿದ ಮ್ಯಾನೇಜರ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಅನಾರೋಗ್ಯದ ಕಾರಣ ರಜೆ ಕೇಳಿದ ಉದ್ಯೋಗಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಮಾನ್ಯೇಜರ್ ಒತ್ತಾಯಿಸಿದ್ದರು. ಆದರೆ ಈ ನಡೆಗೆ ಬೇಸತ್ತ ಉದ್ಯೋಗಿ, ತಕ್ಷಣವೇ ಬೇರೆ ಕಂಪನಿಯಲ್ಲಿ ಸಂದರ್ಶನ ಕೊಟ್ಟು ಕೆಲಸ ಗಿಟ್ಟಿಸಿಕೊಂಡು ರಾಜೀನಾಮೆ ನೀಡಿದ್ದಾರೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಮ್ಯಾನೇಜರ್‌ಗಳಿಗೆ ತಕ್ಕ ಪಾಠ ಕಲಿಸಲು ಜೆನ್ ಝೀಗಳೇ ಸರಿ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ಶೀತಲ್ ಎಂಬುವವರು ಈ ಕುರಿತು ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರೊಬ್ಬರು ಕಾರ್ಪೊರೇಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ತಂಡದಲ್ಲಿದ್ದ ಜೆನ್ ಝೀ ತಲೆಮಾರಿನ ಯುವ ಉದ್ಯೋಗಿಯೋಬ್ಬರು ಅನಾರೋಗ್ಯದ ಕಾರಣದಿಂದ ರಜೆ ಕೋರಿದ್ದರು. ಆದರೆ ಮ್ಯಾನೇಜರ್ ರಜೆ ನೀಡುವ ಬದಲು ಸ್ವಲ್ಪ ಸಮಯ ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚಿಸಿದ್ದರು.
ಆದಾಗ್ಯೂ, ಮ್ಯಾನೇಜರ್ ವರ್ತನೆಯಿಂದ ಕೋಪಗೊಂಡ ಉದ್ಯೋಗಿ ತನ್ನ ರಜೆಯನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಿದ್ದು, ಆ ಅವಧಿಯಲ್ಲೇ ಬೇರೊಂದು ಕಂಪನಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದು ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮರುದಿನವೇ ಕಂಪನಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ವೈರಲ್ ಪೋಸ್ಟ್:
My friend, who’s a manager in a corporate, is so stressed because of the Gen Z attitude.
— Sheetal (@sheetalbytheway) September 5, 2026
One of his Gen Z team members took sick leave. He asked her to WFH for a while, she got pissed, took another 2 days off, gave an interview somewhere else, got selected, put in her notice the…
ಈ ಸಮಸ್ಯೆ ಇಲ್ಲಿಗೆ ಮುಗಿಯಲಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದ ಮತ್ತೊಬ್ಬ ಜೆನ್ ಝೀ ಉದ್ಯೋಗಿ ಕೂಡ ಇದೇ ರೀತಿಯ ಮಾರ್ಗವನ್ನು ಅನುಸರಿಸಿದ್ದಾರೆ. ಅವರೂ ಬೇರೆ ಕೆಲಸ ಗಿಟ್ಟಿಸಿಕೊಂಡು ತಕ್ಷಣವೇ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಬಳಿ ಗಳಿಕೆ ರಜೆ (Paid leaves) ಬಾಕಿ ಇದೆ. ಅದನ್ನು ನೋಟಿಸ್ ಪೀರಿಯಡ್‌ಗೆ ಅಡ್ಜಸ್ಟ್ ಮಾಡಿ. ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲ ಎಂದು ಮ್ಯಾನೇಜರ್‌ಗೆ ಹೇಳಿದ್ದಾರೆ.
ರಸ್ತೆಗೆ ಮದ್ಯದ ಬಾಟಲ್ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ
ಸದ್ಯ ಈ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್‌ನ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬರು, ʼʼನಾನು Gen Z ಮನೋಭಾವದ ಅಭಿಮಾನಿಯಲ್ಲ. ಆದರೆ ರಜೆ ಎಂದರೆ ಮನೆಯಲ್ಲಿ ಕೆಲಸ ಮಾಡಲು ಹೇಳುವುದು ಸರಿಯಲ್ಲʼʼ ಎಂದರು. ಇನ್ನೊಬ್ಬರು, ʼʼಆರೋಗ್ಯಕ್ಕಿಂತ ಜಗತ್ತಿನಲ್ಲಿ ಅಷ್ಟೊಂದು ತುರ್ತು ಕೆಲಸ ಯಾವುದೂ ಇಲ್ಲʼʼ ಎಂದು ಉದ್ಯೋಗಿಯ ಪರವಾಗಿ ಕಾಮೆಂಟ್ ಮಾಡಿದ್ದಾರೆ.