ಮದುವೆಯಲ್ಲಿ ಸ್ಟಂಟ್ ಮಾಡಲು ಹೋಗಿ ವರನ ಕೈಯಲ್ಲೇ ಸಿಡಿದ ಫೈರ್ ಗನ್ ; ಅಪಾಯಕಾರಿ ವಿಡಿಯೋ ವೈರಲ್
Viral Video: ಅತಿಯಾದ ಪ್ರದರ್ಶನವು ಕೆಲವೊಮ್ಮೆ ಅಪಾಯಕಾರಿ ಉಂಟು ಮಾಡಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ವಧು - ವರರು ಇಬ್ಬರು ಮದುವೆ ಸಂಭ್ರಮಕ್ಕೆ ಫೈರ್ ಗನ್ ಬಳಸಿದ್ದು ಅದರ ಕಿಡಿ ಅಪ್ಪಳಿಸಿ ವರನು ಗಾಯಗೊಂಡ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಂತಹ ಅಪಾಯಕಾರಿ ಪ್ರದರ್ಶನ ಬೇಕೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಫೈರ್ ಗನ್ ಸಿಡಿಸಿದ ವರನಿಗೆ ಗಾಯ -
ನವದೆಹಲಿ,ಏ.25: ಇತ್ತೀಚಿನ ದಿನಗಳಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಅದ್ದೂರಿ ಸೆಟ್ ಅಪ್, ಮರವಣೆಗೆ, ಮನರಂಜನಾ ಕಾರ್ಯಕ್ರಮ ಹೀಗೆ ವಿವಿಧ ಇವೆಂಟ್ ಗಳ ಮೂಲಕ ಅನೇಕರು ಅದ್ದೂರಿ ಮದುವೆಯಾಗುತ್ತಿದ್ದಾರೆ. ಆದರೆ, ಅತಿಯಾದ ಪ್ರದರ್ಶನವು ಕೆಲವೊಮ್ಮೆ ಅಪಾಯಕಾರಿ ಉಂಟು ಮಾಡಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ವಧು - ವರರು ಇಬ್ಬರು ಮದುವೆ ಸಂಭ್ರಮಕ್ಕೆ ಫೈರ್ ಗನ್ ಬಳಸಿದ್ದು ಅದರ ಕಿಡಿ ಅಪ್ಪಳಿಸಿ ವರನು ಗಾಯ ಗೊಂಡ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ಇಂತಹ ಅಪಾಯಕಾರಿ ಪ್ರದರ್ಶನ ಬೇಕೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಕೇವಲ ಒಂದು ಫೈರ್ ಗನ್‌ನಿಂದಾಗಿ ವರ ಆತಂಕಕ್ಕೆ ಒಳಗಾಗಿದ್ದಾನೆ. ವಧು ವರರು ಇಬ್ಬರೂ ಗನ್ ಹಿಡಿದು ಹೆಜ್ಜೆ ಹಾಕುತ್ತಿದ್ದರು. ಆದರೆ, ವರನ ಫೈರ್ ಗನ್ ನಿಂದ ಕಿಡಿ ಹೊರ ಬರುತ್ತಿದ್ದಂತೆ ಗನ್‌ನಲ್ಲಿ ತಾಂತ್ರಿಕ ದೋಷದಿಂದ ಕಿಡಿ ಅಪ್ಪಳಿಸಿ ವರನ ಕೈಗೆ ಗಾಯವಾಗಿದೆ.
ವಿಡಿಯೋ ನೋಡಿ:
Twlling u guys again: Should ban these Stupidity in Marriages pic.twitter.com/zzfSg2zVI7
— Ghar Ke Kalesh (@gharkekalesh) April 23, 2026
ವರ ಮತ್ತು ವಧು ಅಕ್ಕಪಕ್ಕದಲ್ಲಿ ನಿಂತಿರುವ ದೃಶ್ಯದೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಇಬ್ಬರೂ ಸಾಂಪ್ರದಾಯಿಕ ವಿವಾಹದ ಉಡುಪುಗಳನ್ನು ಧರಿಸಿ ಕೈಯಲ್ಲಿ ಫೈರ್ ಗನ್‌ಗಳನ್ನು ಹಿಡಿದಿದ್ದಾರೆ. ಅವರು ಮುಂದೆ ಹೆಜ್ಜೆ ಹಾಕುತ್ತಿದ್ದಂತೆ, ಇಬ್ಬರು ಫೈರ್ ಗನ್ ಒಟ್ಟಿಗೆ ಹಾರಿಸುತ್ತಾರೆ. ಆದರೆ ವರನ ಕೈಯಲ್ಲಿದ್ದ ಗನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಿಡಿ ಅಪ್ಪಳಿಸಿ ವರನಿಗೆ ತಕ್ಷಣವೇ ಗಾಯವಾಗಿದೆ.
Viral Video: ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ; ವಿಡಿಯೋ ವೈರಲ್
ಫೈರ್ ಅನ್ನು ನೆಲಕ್ಕೆ ಎಸೆಯುವ ಮೂಲಕ ತ್ವರಿತವಾಗಿ ಆತ ಪ್ರತಿಕ್ರಿಯಿಸುತ್ತಾನೆ. ನಂತರ ಅವನು ಗಾಯಗೊಂಡಿದ್ದಾನೆಯೇ ಎಂದು ಪರಿಶೀಲಿಸುತ್ತಾನೆ. ತಲೆ ಮತ್ತು ಮುಖವನ್ನು ಸವರಿಕೊಳ್ಳುತ್ತಾ ಆತಂಕಕ್ಕೆ ಒಳಗಾಗಿದ್ದಾನೆ. ಆದರೆ, ಪಕ್ಕದಲ್ಲೇ ಇದ್ದ ವಧು ವರನಿಗೆ ಗಾಯವಾಗಿದ್ದನ್ನು ಗಮನಿಸದೆಯೇ ತನ್ನ ಕೈಲಿದ್ದ ಗನ್ ಸಿಡಿಸುತ್ತಾ ನಿಂತಿದ್ದಾಳೆ.
ಕ್ಲಿಪ್‌ನೊಂದಿಗೆ ನಿಮ್ಮ ಹುಡುಗರಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ.. ಮದುವೆಗಳಲ್ಲಿ ಈ ಮೂರ್ಖತನ ವನ್ನು ನಿಷೇಧಿಸಬೇಕು ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಲಾಗಿದೆ. ಒಬ್ಬ ಬಳಕೆದಾರರು, "ಅವರ ಭವಿಷ್ಯದ ಪತ್ನಿ ಅವರಿಗೆ ಕಾಳಜಿ ನೀಡುವುದಿಲ್ಲ ಎಂದಿದ್ದಾರೆ"..ಕೆಲವರು ಮದುವೆಗಳು ಹೇಗೆ ಬದಲಾಗುತ್ತಿವೆ ಎಂಬುದರ ಬಗ್ಗೆಯೂ ಚರ್ಚೆ ಮಾಡಿದ್ದಾರೆ.