Viral Video: ಡಿಜೆ ಹಾಡಿನ ವಿಚಾರಕ್ಕೆ ಜಗಳ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ-ವಿಡಿಯೊ ವೈರಲ್!
ಉತ್ತರ ಪ್ರದೇಶದ ಇಟಾವಾದಲ್ಲಿ ಮದುವೆಗೆ ಬಂದ ಅತಿಥಿಗಳ ನಡುವೆ ಡಿಜೆ ಹಾಡಿಗಾಗಿ ಹೊಡೆದಾಟ ನಡೆದಿದೆ. ಇದರಿಂದ ಮದುವೆ ರಣರಂಗವಾಗಿ ಬದಲಾಗಿದೆ. ಈ ಜಗಳದಿಂದಾಗಿ ಡಿಜೆಯನ್ನು ಸಹ ರದ್ದುಗೊಳಿಸಲಾಯಿತು. ಇವರ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ನವದೆಹಲಿ: ಮದುವೆ ಎನ್ನುವುದು ಒಂದು ಸಂಭ್ರಮದ ಆಚರಣೆ. ಹಾಡು, ಕುಣಿತ,ಸಂಬಂಧಿಕರ ಸಮ್ಮಿಲನದಿಂದ ಸಂಭ್ರಮ ತುಂಬಿರುತ್ತದೆ. ಆದರೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದ ಮದುವೆ ಅವಿಸ್ಮರಣೀಯ ಘಟನೆಯಾಗುವ ಬದಲು ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮದುವೆಗೆ ಬಂದ ಅತಿಥಿಗಳ ನಡುವೆ ಡಿಜೆಯ ಹಾಡು ನುಡಿಸುವ ವಿಚಾರಕ್ಕೆ ವಾಗ್ವಾದ ನಡೆದು ಕೊನೆಗೆ ಹೊಡೆದಾಟಕ್ಕೆ ಕಾರಣವಾಗಿದೆಯಂತೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವರದಿ ಪ್ರಕಾರ, ಒಂದು ಕಡೆಯವರು ಡಿಜೆಯಲ್ಲಿ ತಮ್ಮಿಷ್ಟದ ಹಾಡನ್ನು ನುಡಿಸಬೇಕೆಂದು ಒತ್ತಾಯಿಸಿದಾಗ ಜಗಳ ಶುರುವಾಗಿದೆಯಂತೆ. ಕೊನೆಗೆ ಎರಡೂ ಕಡೆಯವರು ಪರಸ್ಪರರ ಮೇಲೆ ಕುರ್ಚಿಗಳನ್ನು ಎಸೆದು ಹೊಡೆದಾಡಿಕೊಂಡಿದ್ದಾರೆ. ಇದರಿಂದ ಆ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ.ಈ ಜಗಳದಿಂದಾಗಿ ಡಿಜೆಯನ್ನು ಸಹ ರದ್ದುಗೊಳಿಸಲಾಯಿತು. ಇವರ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
🔴 इटावा: शादी में डीजे गाने को लेकर बवाल 🔴
— भारत समाचार | Bharat Samachar (@bstvlive) May 15, 2025
➡️ गाना बदलने को लेकर दो पक्षों में विवाद
➡️ जमकर हुई मारपीट, कुर्सियां भी चलीं
➡️ मारपीट का वीडियो सोशल मीडिया पर वायरल
➡️ मामला औरैया रोड स्थित निजी गेस्ट हाउस का#EtawahNews #WeddingFight #DJDispute #ViralVideo @etawahpolice… pic.twitter.com/97t2AtO0US
ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಶುರುಮಾಡಿದ್ದು, ವೈರಲ್ ಆಗಿರುವ ವಿಡಿಯೊವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ವೀಡಿಯೊ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಮದುವೆಯಲ್ಲಿ ಕ್ಷುಲಕ ಕಾರಣಕ್ಕೆ ಜಗಳ ನಡೆದು ಹೊಡೆದಾಡಿಕೊಂಡ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಮಿರ್ಜಾಪುರದ ಭಿಖಾರಿಪುರ ಗ್ರಾಮದಲ್ಲಿ ಮದುವೆಗೆ ಅಡ್ಡಿಪಡಿಸಿದ್ದಕ್ಕೆ ವಧು ಮತ್ತು ವರನ ಕಡೆಯವರು ಮದುವೆಯ ಮಂಟಪದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಇದರಿಂದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿತ್ತು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಪಾಕೆಟ್ ಮನಿಯನ್ನು ಭಾರತೀಯ ಸೇನೆಗೆ ನೀಡಿದ ಪುಟ್ಟ ಪೋರ; ಈ ಬಾಲಕನ ದೇಶಪ್ರೇಮಕ್ಕೆ ಸಾಟಿಯೇ ಇಲ್ಲ!
ಜಗಳದ ಹಿಂದಿನ ಕಾರಣವೆಂದರೆ ಒಂದು ಕಡೆಯವರು ಮದುವೆಯಲ್ಲಿ ಗೊಂದಲವನ್ನು ಸೃಷ್ಟಿಸಿದ್ದಂತೆ. ಇದರಿಂದ ಕೋಪಗೊಂಡು ಇನ್ನೊಂದು ಕಡೆಯವರು ಅವರಿಗೆ ಹೊಡೆದಿದ್ದಾರೆ. ಇದು ಅವರ ನಡುಗೆ ದೊಡ್ಡ ಹೊಡೆದಾಟಕ್ಕೆ ಕಾರಣವಾಗಿತ್ತು. ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯದಿದ್ದರು. ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.