ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಟ್ಲರ್ ಹೆಸರನ್ನು ಹಾರ್ದಿಕ್ ಎಂದು ಬದಲಾಯಿಸಿದ ಯುವಕ: ಸೋಶಿಯಲ್ ಮೀಡಿಯಾದಲ್ಲಿ ನಗೆ ಚಟಾಕಿ

Viral News: ಹರಿಯಾಣದ ಗುರುಗ್ರಾಮದ ಯುವಕನೊಬ್ಬ ತಮ್ಮ ವೈಯಕ್ತಿಕ ಕಾರಣದಿಂದ ಹೆಸರು ಬದಲಾಯಿಸಿಕೊಂಡಿರುವುದು ಈಗ ಭಾರಿ ಸುದ್ದಿಯಲ್ಲಿದೆ. ಈ ಯುವಕನ ಹೆಸರು ಹಿಟ್ಲರ್ ಆಗಿದ್ದು ಅದನ್ನು ಹಾರ್ದಿಕ್ ಎಂದು ಬದಲಾವಣೆ ಮಾಡಿಕೊಂಡಿದ್ದಾನೆ.‌ ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.

ಹಿಟ್ಲರ್ ಹೆಸರನ್ನು ಬದಲಾಯಿಸಿಕೊಂಡ ಯುವಕ: ಕಾಲೆಳೆದ ನೆಟ್ಟಿಗರು

ಹಿಟ್ಲರ್ ಎಂಬ ಹೆಸರನ್ನು ಬದಲಾಯಿಸಿಕೊಂಡ ಯುವಕ -

Profile
Pushpa Kumari Jan 14, 2026 5:33 PM

ಚಂಡೀಗಢ, ಜ. 14: ಇಂದು ಮಗು ಹುಟ್ಟಿದ ತಕ್ಷಣ ಪಾಲಕರು ಟ್ರೆಂಡಿ ಹೆಸರನ್ನೇ ಆಯ್ಕೆ ಮಾಡುತ್ತಾರೆ. ಕರೆಯೋದಕ್ಕೆ ಸುಲಭ ಇರಬೇಕು, ಅಲ್ಲದೇ ಸ್ಟೈಲಿಶ್ ಜಮಾನಕ್ಕೆ ತಕ್ಕಂತೆ ಇರಬೇಕು ಎಂದು ಆಲೋಚಿಸುತ್ತಾರೆ. ಆದರೆ ಕೆಲವರು ತಮಗೆ ಇಷ್ಟವಿಲ್ಲದ ಹೆಸರು ಇಟ್ಟಿದ್ರೂ ಅಧಿಕೃತವಾಗಿ ಅದೇ ಹೆಸರಿನಿಂದ ಮುಂದುವರಿಯಲು ನಿರ್ಧರಿಸುತ್ತಾರೆ. ಆದರೆ ಹರಿಯಾಣದ ಗುರುಗ್ರಾಮದ ಯುವಕನೊಬ್ಬ ತಮ್ಮ ವೈಯಕ್ತಿಕ ಕಾರಣದಿಂದ ಹೆಸರು ಬದಲಾಯಿಸಿಕೊಂಡಿರುವುದು ಈಗ ಭಾರಿ ಸುದ್ದಿಯಲ್ಲಿದೆ. ಈ ಯುವಕನ ಹೆಸರು ಹಿಟ್ಲರ್ ಆಗಿದ್ದು ಅದನ್ನು ಹಾರ್ದಿಕ್ ಎಂದು ಬದಲಾವಣೆ ಮಾಡಿಕೊಂಡಿದ್ದಾನೆ.‌ ಸದ್ಯ ಈ ಸುದ್ದಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಮೆಂಟ್‌ ಮಾಡ ತೊಡಗಿದ್ದಾರೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಸಾರ್ವಜನಿಕ ನೋಟಿಸ್‌ನ ಜಾಹೀರಾತು ಪ್ರಕಟವಾಗಿತ್ತು. ಇದು ಹೆಸರು ಬದಲಾವಣೆಯ ಪ್ರಕಟಣೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಯುವಕನೊಬ್ಬ ತನ್ನ ಹೆಸರನ್ನು ಹಿಟ್ಲರ್‌ನಿಂದ ಹಾರ್ದಿಕ್ ಎಂದು ಬದಲಾಯಿಸಿಕೊಳ್ಳುತ್ತಿರುವುದಾಗಿ ಪ್ರಕಟಿಸಿದ್ದಾನೆ. ವೈಯಕ್ತಿಕ ಕಾರಣಗಳಿಂದಾಗಿ ಹೆಸರು ಬದಲಾಯಿಸಿಕೊಂಡಿದ್ದೇನೆ ಎಂದು ಆತ ಜಾಹೀರಾತು ನೀಡಿದ್ದಾನೆ.

ರೆಡ್ಡಿಟ್‌ ಪೋಸ್ಟ್‌:

ಸೊಸೆಯ ಹೆರಿಗೆ ಸಂದರ್ಭ ಅಮಾನವೀಯವಾಗಿ ವರ್ತಿಸಿದ ಅತ್ತೆ

ಈ ಫೋಟೊವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಬೆನ್ನಲ್ಲೇ ಸಾವಿರಾರು ಜನರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಕ್ಲಿಪಿಂಗ್ ಅನ್ನು ಜೂಮ್ ಮಾಡಿ, ಅದನ್ನು ಕೆಂಪು ಬಣ್ಣದಲ್ಲಿ ಮಾರ್ಕ್ ಮಾಡಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. "25 ವರ್ಷಗಳ ಬಳಿಕ ಭೀಕರ ಯುದ್ಧಆರೋಪಗಳಿಂದ ಮುಕ್ತಿ ಪಡೆದು ಹಾರ್ದಿಕ್ ಆಗಿದ್ದಾರೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಕೊನೆಗೂ ಆ ವ್ಯಕ್ತಿಗೆ ಜ್ಞಾನೋದಯವಾಯಿತಲ್ಲ. ಈಗಿನ ಹೆಸರೇ ಚೆನ್ನಾಗಿದೆʼʼ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ''ಹಿಟ್ಲರ್ ಎನ್ನುವ ಹೆಸರಿಗಿಂತ ಹಾರ್ದಿಕ್ ಎನ್ನುವ ಹೆಸರು ಎಷ್ಟೋ ಉತ್ತಮ" ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು ಈತನ ಪೋಷಕರು ಇತಿಹಾಸದ ಶಿಕ್ಷಕರಾಗಿರಬೇಕು ಎಂದು ತಮಾಷೆ ಮಾಡಿದ್ದಾರೆ. ಅದೇ ಜಾಹೀರಾತಿನ ಪಕ್ಕದಲ್ಲಿ 'ರಾಮ್ ಕಲಾ' ಎಂಬುವವರು ತಮ್ಮ ಹೆಸರನ್ನು 'ರಾಮ್ ಕಲಿ' ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಒಬ್ಬ ವ್ಯಕ್ತಿ ಹೆಸರನ್ನು ಬದಲಾಯಿಸ ಬೇಕಾದರೆ ಪತ್ರಿಕೆಯಲ್ಲಿ ಜಾಹೀರಾತು ನೀಡುವುದು ಕಡ್ಡಾಯವಾಗಿದ್ದು ಗುರುತಿನ ಚೀಟಿ ತಿದ್ದುಪಡಿಗಾಗಿ ನಿಯಮ ಜಾರಿಯಲ್ಲಿದೆ.