ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ಯಾಂಟ್ ಮೇಲೆ ಕುಳಿತ ನೂರಾರು ಜೇನುನೊಣಗಳ ಹಿಂಡು: 30 ನಿಮಿಷ ಕದಲದೆ ನಿಂತ ಯುವಕನ ಧೈರ್ಯಕ್ಕೆ ನೆಟ್ಟಿಗರು ಫಿದಾ!

Viral News: ಇದೀಗ ಯುವಕನ ಪ್ಯಾಂಟ್ ನ ಹಿಂಭಾಗ ದಲ್ಲಿ ಸಾವಿರಾರು ಜೇನು ನೋಣಗಳು ಮುತ್ತಿಗೆ ಹಾಕಿದ ಘಟನೆಯೊಂದು ಕಂಡುಬಂದಿದೆ. ಆತನು ಈ ಸನ್ನಿವೇಶವನ್ನು ಬಹಳ ತಾಳ್ಮೆಯಿಂದ ಪರಿಹರಿಸಿ ಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವಕನು ಬರೋಬ್ಬರಿ 30 ನಿಮಿಷವರೆಗೆ ಒಂದು ಚೂರು ಕದಲದೆ ಪಾರಾಗಿದ್ದಾನೆ. ಸದ್ಯ ಈ ವಿಚಿತ್ರ ಘಟನೆಯ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ...

ಜೇನು ನೋಣಗಳು ಮುತ್ತಿಗೆ: ತಾಳ್ಮೆಯಿಂದ ಗೆದ್ದು ಅಪಾಯದಿಂದ ಪಾರಾದ ಯುವಕ

ಪ್ಯಾಂಟ್ ಮೇಲೆ ಕುಳಿತ ನೂರಾರು ಜೇನುನೊಣಗಳ ಹಿಂಡು -

Profile
Pushpa Kumari Jun 2, 2026 12:40 PM

ನವದೆಹಲಿ,ಜೂ.1: ಜಗತ್ತಿನಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ..ಇದೀಗ ಯುವಕನ ಪ್ಯಾಂಟ್ ನ ಹಿಂಭಾಗದಲ್ಲಿ ಸಾವಿರಾರು ಜೇನು ನೋಣಗಳು ಮುತ್ತಿಗೆ ಹಾಕಿದ ಘಟನೆಯೊಂದು ಕಂಡುಬಂದಿದೆ. ಆತನು ಈ ಸನ್ನಿವೇಶವನ್ನು ಬಹಳ ತಾಳ್ಮೆಯಿಂದ ಪರಿಹರಿಸಿ ಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವಕನು ಬರೋಬ್ಬರಿ 30ನಿಮಿಷವರೆಗೆ ಒಂದು ಚೂರು ಕದಲದೆ ಪಾರಾಗಿದ್ದಾನೆ. ಸದ್ಯ ಈ ವಿಚಿತ್ರ ಘಟನೆಯ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್ (Viral News) ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಒಬ್ಬ ವ್ಯಕ್ತಿಯ ಸುತ್ತಲೂ ಸಾವಿರಾರು ಜೇನುನೊಣಗಳು ಇದ್ದಕ್ಕಿದ್ದಂತೆ ಒಟ್ಟುಗೂಡಿದ್ದು ಯುವಕನು ಸುಮಾರು 30 ನಿಮಿಷಗಳ ಕಾಲ ಹೆಪ್ಪುಗಟ್ಟಿ ನಿಂತಿದ್ದ..ಕೆಲವೇ ಕ್ಷಣಗಳಲ್ಲಿ ಇಡೀ ಜೇನುನೊಣಗಳ ದಂಡೇ ಯುವಕನ ಪ್ಯಾಂಟ್ ಅನ್ನು ಆವರಿಸಿಕೊಂಡಿತ್ತು. ಆದರೆ ಯುವಕ ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿ ನಿಂತಿದ್ದ.



ವರದಿಗಳ ಪ್ರಕಾರ, 25 ವರ್ಷದ ವೆರೆಲ್ ಎಂಬ ಯುವಕ ಗ್ಯಾರೇಜ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದನು. ಈ ಸಂದರ್ಭ ದಲ್ಲಿ ಜೇನು ನೊಣಗಳ ರಾಣಿ ಬಂದು ಪ್ಯಾಂಟ್ ನ ಹಿಂಭಾಗದಲ್ಲಿ ಕುಳಿತುಕೊಂಡಿದೆ. ಇದರ ಪರಿಣಾಮ ಸಾವಿರಾರು ಜೇನು ನೊಣಗಳು ಅವನ ಸುತ್ತಲೂ ಒಟ್ಟು ಗೂಡಿದವು. ಜೇನು ನೊಣಗಳ ಸ್ವಭಾವದಂತೆ, ರಾಣಿ ಜೇನು ಎಲ್ಲಿದೆಯೋ ಅಲ್ಲಿಗೆ ಉಳಿದ ಸಾವಿರಾರು ಜೇನುನೊಣಗಳು ಧಾವಿಸಿ ಬರುತ್ತವೆ. ಕೆಲವೇ ಕ್ಷಣಗಳಲ್ಲಿ ಇಡೀ ಜೇಣು ನೋಣದ ದಂಡೇ ಯುವಕನ ಪ್ಯಾಂಟ್ ಅನ್ನು ಸುತ್ತು ವರಿದುಕೊಂಡಿದೆ. ಸಾವಿರಾರು ಜೇನು ನೊಣಗಳು ಸುತ್ತುವರಿದರೂ ಪರಿಸ್ಥಿತಿ ನಿಭಾಯಿಸಲು ಆತ ​ಗಾಬರಿಯಾಗಿ ಓಡುವ ಬದಲು ಸ್ತಬ್ಧವಾಗಿ ನಿಂತಿದ್ದ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಕೊನೆಗೆ ಜಾಣ್ಮೆಯಿಂದ ರಾಣಿ ಜೇನುನೊಣವನ್ನು ಒಂದು ಡಬ್ಬಿ ಅಥವಾ ಪಾತ್ರೆಯೊಳಗೆ ಸೆರೆ ಹಿಡಿಯುವಲ್ಲಿ ಯುವಕ ಯಶಸ್ವಿ ಯಾದನು. ರಾಣಿ ಜೇನು ಬೇರ್ಪಡುತ್ತಿದ್ದಂತೆ, ಉಳಿದ ಜೇನು ನೊಣಗಳೂ ಅಲ್ಲಿಂದ ಹೋಗಿವೆ‌. ​ಅಷ್ಟೊಂದು ಜೇನುನೊಣಗಳು ಮುತ್ತಿಕೊಂಡಾಗ 30 ನಿಮಿಷ ಕದಲದೆ ನಿಲ್ಲುವುದು ಸಾಮಾನ್ಯ ವಿಷಯವಲ್ಲ,ಆದರೆ ಈ ಯುವಕನ ಧೈರ್ಯಕ್ಕೆ ಮಾತ್ರ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.