ಭಾರತದ ಧ್ವಜ ಹಿಡಿದು ಮೈದಾನಕ್ಕೆ ನುಗ್ಗಿದ ಅಭಿಮಾನಿ; ವಿರಾಟ್ ಕೊಹ್ಲಿಯ ತಮಾಷೆಯ ಪ್ರತಿಕ್ರಿಯೆ ವೈರಲ್
Virat Kohli's hilarious reaction; ತ್ರಿವರ್ಣ ಧ್ವಜವನ್ನು ಹಿಡಿದಿದ್ದ ಆ ಅಭಿಮಾನಿ, ಕೊಹ್ಲಿ ಅವರ ಹತ್ತಿರ ಹೋಗಿ ಅವರ ಪಾದಗಳನ್ನು ಸ್ಪರ್ಶಿಸುವ ಆಶಯ ಹೊಂದಿದ್ದನೆಂದು ಹೇಳಲಾಗಿದೆ. ಆದರೆ, ಅಭಿಮಾನಿ ಕೊಹ್ಲಿಯ ಬಳಿ ತಲುಪುವ ಮೊದಲೇ, ಹಿಂದಿನಿಂದ ವೇಗವಾಗಿ ಬಂದ ಭದ್ರತಾ ಸಿಬ್ಬಂದಿಯೊಬ್ಬರು ಆತನನ್ನು ಬಲವಾಗಿ ಹಿಡಿದು ನೆಲಕ್ಕೆ ಕೆಡವಿ ಮೈದಾನದಿಂದ ಹೊರ ಕರೆತಂದರು.
Virat Kohli's hilarious reaction -
ಮೌಂಟ್ ಮೌಂಗನುಯಿ, ನ.16: 'ಬೇ ಓವಲ್'ನಲ್ಲಿ ಭಾನುವಾರ ನಡೆದಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ, ಭಾರತದ ರಾಷ್ಟ್ರಧ್ವಜವನ್ನು ಹಿಡಿದಿದ್ದ ಅಭಿಮಾನಿಯೊಬ್ಬ ಬೌಂಡರಿ ಹಗ್ಗವನ್ನು ದಾಟಿ ಆಟದ ಮೈದಾನದೊಳಗೆ ಓಡಿಬಂದ ವೇಳೆ ವಿರಾಟ್ ಕೊಹ್ಲಿ ನೀಡಿದ ತಮಾಷೆಯ ಪ್ರತಿಕ್ರಿಯೆಯ ವಿಡಿಯೊವೊಂದು ವೈರಲ್ ಆಗಿದೆ.
ಭಾರತದ ಫೀಲ್ಡಿಂಗ್ ವಿನ್ಯಾಸದ ಭಾಗವಾಗಿ ಕೊಹ್ಲಿ ಬೌಂಡರಿ ಗೆರೆಯ ಬಳಿ ನಿಂತಿದ್ದಾಗ ಈ ಘಟನೆ ನಡೆಯಿತು. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ನೆಟ್ಟಿಗರ ಮತ್ತು ಕೊಹ್ಲಿ ಅಭಿಮಾನಿಗಳ ಗಮನ ಸೆಳೆಯಿತು. ಈ ದೃಶ್ಯಗಳಲ್ಲಿ, ಅಭಿಮಾನಿಯೊಬ್ಬ ತನ್ನತ್ತ ಓಡಿಬರುವುದನ್ನು ಗಮನಿಸಿದ ವಿರಾಟ್ ಕೊಹ್ಲಿ, ಆ ವ್ಯಕ್ತಿಯ ದಿಕ್ಕಿಗೆ ಕೈ ತೋರಿಸಿ 'ಓಯ್ ಯಾರ್' (Oye yaar) ಎಂದು ಹೇಳಿದಂತೆ ಕಂಡುಬಂದರು. ಬಳಿಕ, ಹತ್ತಿರ ಬರುತ್ತಿದ್ದ ಆ ಅಭಿಮಾನಿಯಿಂದ ಅಂತರ ಕಾಯ್ದುಕೊಳ್ಳಲು ಕೊಹ್ಲಿ ದೂರಕ್ಕೆ ಓಡಿದರು.
The reaction of Virat Kohli when a fan entered into the stadium to meet him at Mount Maunganui yesterday. ❤️😀 https://t.co/0jTpgBgTEK
— Tanuj (@ImTanujSingh) November 16, 2026
ತ್ರಿವರ್ಣ ಧ್ವಜವನ್ನು ಹಿಡಿದಿದ್ದ ಆ ಅಭಿಮಾನಿ, ಕೊಹ್ಲಿ ಅವರ ಹತ್ತಿರ ಹೋಗಿ ಅವರ ಪಾದಗಳನ್ನು ಸ್ಪರ್ಶಿಸುವ ಆಶಯ ಹೊಂದಿದ್ದನೆಂದು ಹೇಳಲಾಗಿದೆ. ಆದರೆ, ಅಭಿಮಾನಿ ಕೊಹ್ಲಿಯ ಬಳಿ ತಲುಪುವ ಮೊದಲೇ, ಹಿಂದಿನಿಂದ ವೇಗವಾಗಿ ಬಂದ ಭದ್ರತಾ ಸಿಬ್ಬಂದಿಯೊಬ್ಬರು ಆತನನ್ನು ಬಲವಾಗಿ ಹಿಡಿದು ನೆಲಕ್ಕೆ ಕೆಡವಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡಲು ಇತರ ಅಧಿಕಾರಿಗಳು ಕೂಡ ತಕ್ಷಣವೇ ಅಲ್ಲಿಗೆ ಧಾವಿಸಿ ಆತನನ್ನು ಮೈದಾನದಿಂದ ಹೊರ ಕರೆತಂದರು.
ದಶಕದಲ್ಲೇ ಮೊದಲ ಬಾರಿ; ಶೂಟಿಂಗ್‌ನಲ್ಲಿ ಮೂರು ಒಲಿಂಪಿಕ್ ಕೋಟಾ ಗಳಿಸಿದ ಭಾರತ
ಭದ್ರತಾ ಉಲ್ಲಂಘನೆಯ ಘಟನೆಗಿಂತ ಹೆಚ್ಚಾಗಿ, ಅದಕ್ಕೆ ಕೊಹ್ಲಿ ನೀಡಿದ ಪ್ರತಿಕ್ರಿಯೆ ಆನ್‌ಲೈನ್‌ನಲ್ಲಿ ತಮಾಷೆಯ ಚರ್ಚೆಗಳಾಗಿ ರೂಪುಗೊಂಡವು. ಇನ್ನೊಂದೆಡೆ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಬಂಧಿಸುವ ವೇಳೆ ಆತನ ಕೈಯಲ್ಲಿದ್ದ ತ್ರಿವರ್ಣ ಧ್ವಜ ನೆಲಕ್ಕೆ ಬಿತ್ತು. ಇದನ್ನು ಗಮನಿಸಿದ ವೇಗಿ ಮೊಹಮ್ಮದ್ ಸಿರಾಜ್ ಧ್ವಜವನ್ನು ಎತ್ತಿಕೊಂಡರು. ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಂದ್ಯ ಗೆದ್ದ ಭಾರತ
ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡ 22 ರನ್ ಅಂತರದ ರೋಚಕ ಗೆಲುವು ಸಾಧಿಸಿ 3-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 209 ರನ್‌ಗಳನ್ನು ಬಾರಿಸಿದರೂ ಸಂಘಟಿತ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ತಂಡವನ್ನು 187 ರನ್‌ಗೆ ಆಲೌಟ್ ಮಾಡಿ ಮೇಲುಗೈ ಸಾಧಿಸಿತು. ವೇಗಿ ಅರ್ಶ್‌ದೀಪ್ ಸಿಂಗ್(30 ಕ್ಕೆ 3), ಅಕ್ಷರ್ ಪಟೇಲ್(28ಕ್ಕೆ 2) ಮತ್ತು ಮೊಹಮ್ಮದ್ ಸಿರಾಜ್ (50ಕ್ಕೆ 2) ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸಂಕ್ಷಿಪ್ತ ಸ್ಕೋರು
ಭಾರತ: 42.1 ಓವರ್‌ಗಳಲ್ಲಿ 209 (ಋತುರಾಜ್ ಗಾಯಕವಾಡ 18, ಶ್ರೇಯಸ್ ಅಯ್ಯರ್ 22, ಅಕ್ಷರ್ ಪಟೆಲ್ 46, ಇಶಾನ್ ಕಿಶನ್ 46, ನಮನ್ ಧೀರ್ 22, ಮೊಹಮ್ಮದ್ ಸಿರಾಜ್ ಔಟಾಗದೇ 14, ಅರ್ಷದೀಪ್ ಸಿಂಗ್ 14, ಜೇಕಬ್ ಡಫಿ 60ಕ್ಕೆ3, ಮ್ಯಾಥ್ಯೂ ಫೀಷರ್ 28ಕ್ಕೆ2, ಮಿಚೆಲ್ ಸ್ಯಾಂಟನರ್ 47ಕ್ಕೆ3).
ನ್ಯೂಜಿಲೆಂಡ್: 48.1 ಓವರ್‌ಗಳಲ್ಲಿ 187 (ವಿಲ್ ಯಂಗ್ 22, ನಿಕ್ ಕೆಲಿ 24, ಮಿಚೆಲ್ ಸ್ಯಾಂಟನರ್ 24, ಮಿಚೆಲ್ ಬ್ರೇಸ್‌ವೆಲ್ 19, ಟಿಮ್ ಸೀಫರ್ಟ್ 14, ಬ್ಲೇರ್ ಟಿಕ್ನರ್ 14, ಅರ್ಷದೀಪ್ ಸಿಂಗ್ 30ಕ್ಕೆ3, ಮೊಹಮ್ಮದ್ ಸಿರಾಜ್ 50ಕ್ಕೆ 2, ಅಕ್ಷರ್ ಪಟೇಲ್ 28ಕ್ಕೆ 2.