ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಟೋ ಪ್ರಯಾಣದ ವೇಳೆ ಕ್ಲಿಪ್‌ನಂತೆ ಪತ್ನಿಯ ಕೂದಲನ್ನು ಹಿಡಿದಿಟ್ಟುಕೊಂಡ ಪತಿ; ಪ್ರಿನ್ಸೆಸ್ ಟ್ರೀಟ್‌ಮೆಂಟ್ ಎಂದ ನೆಟ್ಟಿಗರು

Viral Video: ಆಟೋ ರಿಕ್ಷಾದಲ್ಲಿ ಕುಳಿತಿರುವ ದಂಪತಿಯ ವಿಡಿಯೊವೊಂದು ಇಂಟರ್‌ನೆಟ್ನ ಗಮನ ಸೆಳೆದಿದೆ. ಈ ಕ್ಲಿಪ್ ಸರಳ ಕ್ಷಣ ಎಂದು ಭಾವಿಸಿದರೂ ಅನೇಕ ವೀಕ್ಷಕರಿಗೆ ಇದು ಪ್ರೀತಿಯ ಕಾಳಜಿ ಎಂದು ಮನದಟ್ಟಾಗಿದೆ. ಮಹೇಕ್ ಜವೇರಿ ಎಂಬ ವ್ಯಕ್ತಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಆಟೋ ಪ್ರಯಾಣದ ವೇಳೆ ಪತ್ನಿಯ ಕೂದಲು  ಹಿಡಿದಿಟ್ಟ ಪತಿ

ಆಟೋದಲ್ಲಿ ಹೆಂಡತಿಯ ಕೂದಲನ್ನು ಹಿಡಿದಿಟ್ಟ ಪತಿ -

Profile
Pushpa Kumari Feb 17, 2026 5:20 PM

ನವದೆಹಲಿ, ಫೆ. 17: ಪ್ರೀತಿ ಎಂದರೆ ಕೇವಲ ಆಕರ್ಷಣೆಯಲ್ಲ. ಒಂದು ಆಳವಾದ ಭಾವನಾತ್ಮಕ ಸಂಬಂಧ. ಇದು ಅದ್ದೂರಿ ಆಚರಣೆಗೆ ಸೀಮಿತವಾಗಿರದೆ ಸಣ್ಣ ಪುಟ್ಟ ಕಾಳಜಿಯಲ್ಲೂ ಹೊರ ಹೊಮ್ಮುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ದಂಪತಿಯ ವಿಡಿಯೊವೊಂದು (Viral Video) ನೆಟ್ಟಿಗರ ಮನ ಗೆದ್ದಿದೆ. ವ್ಯಾಲೆಂಟೈನ್ಸ್ ಡೇಯ ಸಂಭ್ರಮ ಮುಗಿದಿದ್ದರೂ ಇಂಟರ್‌ನೆಟ್‌ನಲ್ಲಿ ಈ ಜೋಡಿಯ ಪ್ರೀತಿಯ ಅನುಬಂಧ ಈಗ ಭಾರಿ ಸದ್ದು ಮಾಡುತ್ತಿದೆ.

ಆಟೋ ರಿಕ್ಷಾದಲ್ಲಿ ಕುಳಿತಿರುವ ದಂಪತಿಯ ಈ ವಿಡಿಯೊ ಗಮನ ಸೆಳೆದಿದೆ. ಈ ಕ್ಲಿಪ್ ಸರಳ ಕ್ಷಣ ಎಂದು ಭಾವಿಸಿದರೂ ಅನೇಕ ವೀಕ್ಷಕರಿಗೆ ಇದು ಪ್ರೀತಿಯ ಕಾಳಜಿ ಎಂದು ಮನದಟ್ಟಾಗಿದೆ. ಮಹೇಕ್ ಜವೇರಿ ಎಂಬ ವ್ಯಕ್ತಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ವಿಡಿಯೊ ನೋಡಿ:

ನೈಶಲ್ ಎನ್ನುವ ವ್ಯಕ್ತಿ ಪತ್ನಿ ಜತೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ದೆಹಲಿಯ ರಸ್ತೆಯಲ್ಲಿ ಆಟೋ ವೇಗವಾಗಿ ಹೋಗುತ್ತಿರುವಾಗ ಗಾಳಿಗೆ ಪತ್ನಿ ಮಹೇಕ್ ಅವರ ಕೂದಲು ಮುಖಕ್ಕೆ ಅಡ್ಡ ಬರುತ್ತಿತ್ತು. ಆಕೆ ಕ್ಲಿಪ್ ಹಾಕಲು ಮರೆತಿದ್ದ ಕಾರಣ ಗಾಳಿಗೆ ಕೂದಲು ಹಾರುತ್ತಿತ್ತು. ಇದನ್ನು ಗಮನಿಸಿದ ಪತಿ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೂದಲನ್ನು ಕ್ಲಿಪ್‌ನಂತೆ ಹಿಡಿದಿಟ್ಟುಕೊಂಡ ದೃಶ್ಯ ಸೆರೆಯಾಗಿದೆ. ಈ ಪುಟ್ಟ ಕಾಳಜಿ ಈಗ ನೆಟ್ಟಿಗರ ಮನ ಗೆದ್ದಿದ್ದು ಇದನ್ನು ಮಹೇಕ್ ಅವರ ಪ್ರಿನ್ಸೆಸ್ ಟ್ರೀಟ್‌ಮೆಂಟ್ ಎಂದಿದ್ದಾರೆ.

Viral Video: ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ; ನೆಟ್ಟಿಗರಿಂದ ಆಕ್ರೋಶ

ಅನೇಕರು ಹೃದಯದ ಎಮೋಜಿ ಮತ್ತು ಕಮೆಂಟ್‌ ಮಾಡಿದ್ದಾರೆ. ಆ ಕ್ಷಣವನ್ನು ಹೆಚ್ಚಿನವರು "ಶುದ್ಧ ಪ್ರೀತಿ" ಎಂದು ಕರೆದಿದ್ದಾರೆ. ಇವರಿಬ್ಬರ ಪ್ರೀತಿ ಕೋವಿಡ್ ಸಮಯದಲ್ಲಿ ಹುಟ್ಟಿತ್ತು. ತಮ್ಮ ಪ್ರೀತಿಯ ಪಯಣ ಹೇಗೆ ಪ್ರಾರಂಭವಾಯಿತು ಎಂಬುದನ್ನು ಅವರು ಬಹಿರಂಗ ಪಡಿಸಿದ್ದಾರೆ. ಲಾಕ್‌ ಡೌನ್ ಸಮಯದಲ್ಲ ಹೌಸ್‌ಪಾರ್ಟಿ ಅಪ್ಲಿಕೇಶನ್‌ನಲ್ಲಿ ಪರಿಚಯ ಆಯಿತು. ಕೇವಲ ಫೋನ್ ಸಂಭಾಷಣೆಯ ಮೂಲಕ ಆತ್ಮೀಯ ಸ್ನೇಹಿತರಾದ ಇವರು, ನಂತರ ಪರಸ್ಪರ ಪ್ರೀತಿಸಿ ಸಪ್ತಪತಿ ತುಳಿದಿದ್ದಾರೆ.