ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ಪರೀಕ್ಷೆ ವೇಳೆ ವಿದ್ಯಾರ್ಥಿಗೆ ಐಎಎಸ್ ಅಧಿಕಾರಿಯಿಂದ ಕಪಾಳ ಮೋಕ್ಷ

ವಂಚನೆ ದೂರು ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ (Deendayal Dangraulia Mahavidyalaya) ನಡೆದ ಪರೀಕ್ಷೆ ವೀಕ್ಷಣೆಗೆ ತೆರಳಿದ್ದ ಐಎಎಸ್ ಅಧಿಕಾರಿ ಭಿಂಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜೀವ್ ಶ್ರೀವಾಸ್ತವ (IAS Officer Sanjeev Srivastava) ಅವರು ವಿದ್ಯಾರ್ಥಿಯೊಬ್ಬನ ಬಳಿ ಪ್ರಶ್ನೆ ಪತ್ರಿಕೆ ಎಲ್ಲಿ ಎಂದು ಕೇಳಿ ಪದೇ ಪದೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಐಎಎಸ್ ಅಧಿಕಾರಿಯಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ

ಭೋಪಾಲ್: ಐಎಎಸ್ ಅಧಿಕಾರಿಯೊಬ್ಬರು ( IAS Officer) ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗೆ ಪದೇ ಪದೇ ಕಪಾಳ ಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ(Madhyapradesh) ನಡೆದಿದೆ. ಇದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದೆ. ವಂಚನೆ ದೂರು ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ (Deendayal Dangraulia Mahavidyalaya) ನಡೆದ ಪರೀಕ್ಷೆ ವೀಕ್ಷಣೆಗೆ ತೆರಳಿದ್ದ ಐಎಎಸ್ ಅಧಿಕಾರಿ, ಭಿಂಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜೀವ್ ಶ್ರೀವಾಸ್ತವ (IAS Officer Sanjeev Srivastava) ಅವರು ವಿದ್ಯಾರ್ಥಿಯೊಬ್ಬನ ಬಳಿ ಪ್ರಶ್ನೆ ಪತ್ರಿಕೆ ಎಲ್ಲಿ ಎಂದು ಕೇಳಿ ಆ ಬಳಿಕ ಕಪಾಳಮೋಕ್ಷ ಮಾಡಿದ್ದಾರೆ.

ಏಪ್ರಿಲ್ 1 ರಂದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ನಡೆದ ಬಿಎಸ್ಸಿ 2 ನೇ ವರ್ಷದ ಗಣಿತ ಪರೀಕ್ಷೆಯ ಸಮಯದಲ್ಲಿಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಶ್ರೀವಾಸ್ತವ ಅವರು ರೋಹಿತ್ ರಾಥೋಡ್ ಎಂಬ ಹೆಸರಿನ ವಿದ್ಯಾರ್ಥಿಯೊಬ್ಬನನ್ನು ಕುಳಿತಲ್ಲಿಂದ ಎಬ್ಬಿಸಿ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದು ಕಾಣಬಹುದು. ಬಳಿಕ ಅವರು ವಿದ್ಯಾರ್ಥಿಯನ್ನು ಮತ್ತೊಂದು ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಶ್ರೀವಾಸ್ತವ ಅವರು ರೋಹಿತ್ ರಾಥೋಡ್ ಕೈಯಲ್ಲಿದ್ದ ಪತ್ರಿಕೆಯನ್ನು ವ್ಯಕ್ತಿಯೊಬ್ಬನಿಗೆ ಹಸ್ತಾಂತರಿಸಿದರು. ಬಳಿಕ ಶ್ರೀವಾಸ್ತವ ಅವರು ರಾಥೋಡ್ ಕಡೆಗೆ ತಿರುಗಿ "ನಿಮ್ಮ ಪತ್ರಿಕೆ ಎಲ್ಲಿದೆ?" ಎಂದು ಪ್ರಶ್ನಿಸಿ ಕಪಾಳಮೋಕ್ಷ ಮಾಡಿದ್ದಾರೆ.



ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ರಾಥೋಡ್, ಅವರು ಐಎಎಸ್ ಅಧಿಕಾರಿಯಾಗಿರುವುದರಿಂದ, ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ನನ್ನ ಕಿವಿಗೆ ಬಲವಾದ ಏಟು ಬಿದ್ದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: POCSO case: ಮಂಗಳೂರು ಮತ್ತು ಮಂಡ್ಯದಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

ಈ ಕುರಿತು ಸ್ಪಷ್ಟನೆ ನೀಡಿರುವ ಶ್ರೀವಾಸ್ತವ್, ಕಾಲೇಜಿನಲ್ಲಿ ಸಾಮೂಹಿಕ ವಂಚನೆಯ ದೂರುಗಳು ಬಂದಿವೆ. ಕೆಲವು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಹೊರಗೆ ಕಳ್ಳಸಾಗಣೆ ಮಾಡಿದ್ದಾರೆ. ಅವುಗಳಿಗೆ ಉತ್ತರ ಬರೆದು ಅದನ್ನೇ ಕಾಲೇಜಿಗೆ ತರುತ್ತಿದ್ದಾರೆ. ಸಂಘಟಿತ ವಂಚನೆ ಜಾಲವನ್ನು ತನಿಖೆ ಮಾಡಲು ನಾನು ಅಲ್ಲಿಗೆ ಹೋಗಿದ್ದೆ. ಮುಂದಿನ ದಿನಗಳಲ್ಲಿ ಈ ಕಾಲೇಜನ್ನು ಪರೀಕ್ಷಾ ಕೇಂದ್ರವಾಗಿ ಬಳಸಬಾರದು ಎಂದು ಶಿಫಾರಸು ಮಾಡಿ ನಾನು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯವು ಮಧ್ಯಪ್ರದೇಶದ ವಿರೋಧ ಪಕ್ಷದ ಉಪ ನಾಯಕ ಹೇಮಂತ್ ಕಟಾರೆ ಅವರ ಮಾವ ನಾರಾಯಣ್ ಡಂಗ್ರೌಲಿಯಾ ಅವರಿಗೆ ಸೇರಿದೆ ಎನ್ನಲಾಗಿದೆ.