ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಮ್ಮದೇ ಅತ್ಯಂತ ಕೊಳಕು ದೇಶ: ಶ್ರೀಲಂಕಾದ ಶುಚಿತ್ವದೊಂದಿಗೆ ಭಾರತದ ಸ್ಥಿತಿ ಹೋಲಿಸಿದ ಪ್ರವಾಸಿ ವ್ಲಾಗರ್

Viral Video: ಇತ್ತೀಚೆಗೆ ಭಾರತೀಯರು ನಾಗರಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ತಾಜ್ಯವನ್ನು ಎಸೆದು ಸುಂದರ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಪ್ರಸಿದ್ಧ ಪ್ರವಾಸಿ ವ್ಲಾಗರ್ ಹಾಗೂ ನಟಿ ಶೆನಾಜ್ ಟ್ರೆಜರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಯೊಂದು ಶೇರ್ ಮಾಡಿದ್ದು, ಭಾರತವೇ ಅತ್ಯಂತ ಕೊಳಕು ದೇಶ ಎಂದು ಹೇಳಿಕೊಂಡಿದ್ದಾರೆ.

ಭಾರತವೇ ಕೊಳಕು ದೇಶ: ಶ್ರೀಲಂಕಾದ ಶಿಸ್ತಿನ ಬಗ್ಗೆ ವ್ಲಾಗರ್ ಹೇಳಿದ್ದೇನು?

ಶ್ರೀಲಂಕಾದ ಶಿಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರವಾಸಿ ವ್ಲಾಗರ್, ನಟಿ ಶೆನಾಜ್ ಟ್ರೆಜರಿ -

Profile
Pushpa Kumari May 28, 2026 8:28 PM

ದೆಹಲಿ, ಮೇ 28: ಭಾರತವು ಪ್ರೇಕ್ಷಣೀಯ ಸ್ಥಳ ಹಾಗೂ ಆತಿಥ್ಯದ ವಿಚಾರಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಆಗಮಿಸುವ ವಿದೇಶಿಗರು ಭಾರತದ ಶ್ರೇಷ್ಠತೆಯನ್ನು ಕೊಂಡಾಡಿದ ಅನೇಕ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಭಾರತೀಯರು ನಾಗರಿಕ ಪ್ರಜ್ಞೆಯನ್ನೇ ಮರೆಯುತ್ತಿದ್ದಾರಾ ಎನ್ನುವ ಅನುಮಾನ ಮೂಡತೊಡಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ, ತಾಜ್ಯವನ್ನು ಎಸೆದು ಸುಂದರ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಪ್ರಸಿದ್ಧ ಪ್ರವಾಸಿ ವ್ಲಾಗರ್ ಹಾಗೂ ನಟಿ ಶೆನಾಜ್ ಟ್ರೆಜರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಶೇರ್ ಮಾಡಿದ್ದು (Viral News) ಭಾರತವೇ ಅತ್ಯಂತ ಕೊಳಕು ದೇಶ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಶಿಸ್ತಿ ಪಾಲಿಸದೆ ಇರುವ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿವೆ. ಇಲ್ಲಿನ ಜನರ ಅಶಿಸ್ತಿನ ವರ್ತನೆ ಬಗ್ಗೆ ಹಲವು ವಿಡಿಯೊಗಳು ವೈರಲ್ ಆಗಿವೆ. ಇದೀಗ ಪ್ರಸಿದ್ಧ ಪ್ರವಾಸಿ ವ್ಲಾಗರ್ ಶೇರ್ ಮಾಡಿರುವ ದೃಶ್ಯ ಭಾರತದ ಸ್ವಚ್ಛತೆ, ನಾಗರಿಕ ಪ್ರಜ್ಞೆ ಹಾಗೂ ಪ್ರವಾಸೋದ್ಯಮದ ಕುರಿತು ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ.

ವಿಡಿಯೊ ನೋಡಿ:



ಶ್ರೀಲಂಕಾದ ಪ್ರಸಿದ್ಧ ಎಲ್ಲಾ (Ella) ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಶೆನಾಜ್, ಸ್ವಚ್ಛ ಆವರಣದಲ್ಲಿ ನಡೆದುಕೊಂಡು ಹೋಗುವುದನ್ನು ಚಿತ್ರೀಕರಿಸಿದ್ದಾರೆ‌. ಇಲ್ಲಿನ ಶಾಂತ ವಾತಾವರಣ ಮತ್ತು ರಮಣೀಯ ಪರಿಸರವನ್ನು ಅವರು ಮೆಚ್ಚಿಕೊಂಡಿದ್ದಾರೆ‌. ಸುತ್ತಲೂ ಯಾವುದೇ ಕಸವಿಲ್ಲದೆ, ನಿಲ್ದಾಣವು ಪ್ರಶಾಂತವಾಗಿದೆ.

ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಈ ಕ್ಲಿಪ್ ಅನ್ನು ಪ್ರಸಿದ್ಧ ಎಲ್ಲಾ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಇದು ಹೆಚ್ಚು ಭೇಟಿ ನೀಡುವ ಶ್ರೀಲಂಕಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುಂದರ ರೈಲು ಪ್ರಯಾಣಗಳು, ಹಚ್ಚ ಹಸಿರಿನ ಬೆಟ್ಟಗಳಿಗೆ ಹೆಸರುವಾಸಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯುವತಿ "ನಾವು ಸತ್ಯವನ್ನು ಒಪ್ಪಿಕೊಳ್ಳೋಣ. ನಾವೇ (ಭಾರತ) ಅತ್ಯಂತ ಕೊಳಕು ದೇಶ" ಎಂದು ಶೆನಾಜ್ ನೇರವಾಗಿ ಕ್ಯಾಮರಾ ಮುಂದೆ ಹೇಳಿಕೊಂಡಿದ್ದಾರೆ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇಂಟರ್‌ನೆಟ್‌ ಬಳಕೆದಾರರಲ್ಲಿ ಬಹುತೇಕರು ಶೆನಾಜ್ ಅವರ ಅಭಿಪ್ರಾಯವನ್ನು ಒಪ್ಪಿಕೊಂಡರು. ಭಾರತದಲ್ಲಿ ಸುಂದರ ತಾಣಗಳಿಗೆ ಕೊರತೆಯಲ್ಲ. ಆದರೆ ಸಾರ್ವಜನಿಕ ಶಿಸ್ತು ಮತ್ತು ತ್ಯಾಜ್ಯ ನಿರ್ವಹಣೆಯ ಕೊರತೆ ಢಾಳಾಗಿ ಕಾಣಿಸುತ್ತಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಭಾರತೀಯರು ವಿದೇಶಗಳಿಗೆ ಹೋದಾಗ ಅಲ್ಲಿನ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಅದೇ ನಿಯಮಗಳನ್ನು ಸ್ವದೇಶದಲ್ಲಿ ಪಾಲನೆ ಮಾಡುವುದಿಲ್ಲʼʼ ಎಂದು ದೂರಿದ್ದಾರೆ.