Snake Bite: ಹಾವಿನ ಜತೆ ಬೈಕ್ ಏರಿ ಹೊರಟ ವ್ಯಕ್ತಿ; ಮುಂದಾಗಿದ್ದು ಘೋರ ದುರಂತ
ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ 35 ವರ್ಷದ ದೀಪಕ್ ಮಹಾವರ್ ಎಂಬಾತ ಕುತ್ತಿಗೆಗೆ ವಿಷಕಾರಿ ಕಾಳಿಂಗ ಸರ್ಪವನ್ನು ಸುತ್ತಿಕೊಂಡು ಬೈಕ್ ಚಲಾಯಿಸುತ್ತಿದ್ದಾಗ, ಹಾವು ಕಡಿದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹಾವನ್ನು ಸುತ್ತಿಕೊಂಡು ತಿರುಗಾಡುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಹಾವು ಕಡಿತದಿಂದ ಮೃತಪಟ್ಟ ವ್ಯಕ್ತಿ

ಭೋಪಾಲ್: ಮಧ್ಯ ಪ್ರದೇಶದ (Madhya Pradesh) ಗುನಾ (Guna) ಜಿಲ್ಲೆಯಲ್ಲಿ 35 ವರ್ಷದ ದೀಪಕ್ ಮಹಾವರ್ ಎಂಬಾತ ಕುತ್ತಿಗೆಗೆ ವಿಷಕಾರಿ ಕಾಳಿಂಗ ಸರ್ಪವನ್ನು (Venomous Cobra ) ಸುತ್ತಿಕೊಂಡು ಬೈಕ್ ಚಲಾಯಿಸುತ್ತಿದ್ದಾಗ, ಹಾವು ಕಡಿದು(Snake Bite) ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಈ ಘಟನೆಗೂ ಮುನ್ನ ದೀಪಕ್ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ತಿರುಗಾಡುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದ ದೀಪಕ್, ಸಾವಿರಾರು ಹಾವುಗಳನ್ನು ರಕ್ಷಿಸಿದ್ದಾರೆ. ಆ ಮೂಲಕ ಎಲ್ಲರಿಂದಲೂ ಗುರುತಿಸಲ್ಪಟ್ಟಿದ್ದರು. ಇತ್ತೀಚೆಗೆ ಕಾಳಿಂಗ ಸರ್ಪವನ್ನು ಹಿಡಿದು ಗಾಜಿನ ಪಾತ್ರೆಯಲ್ಲಿ ಇರಿಸಿದ್ದರು. ಶ್ರಾವಣ ಮಾಸದ ಮೆರವಣಿಗೆಯಲ್ಲಿ ತೋರಿಸಲು ಈ ಹಾವನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಘಟನೆಯ ದಿನ, ದೀಪಕ್ ತನ್ನ ಮಕ್ಕಳಾದ ರೌನಕ್ (12) ಮತ್ತು ಚಿರಾಗ್ (14) ಅವರನ್ನು ಶಾಲೆಗೆ ಬಿಟ್ಟು ಬೈಕ್‌ನಲ್ಲಿ ಹೋಗುವಾಗ ಕುತ್ತಿಗೆಗೆ ಹಾವನ್ನು ಹಾರದಂತೆ ಸುತ್ತಿಕೊಂಡಿದ್ದರು. ಆ ಸಂದರ್ಭದಲ್ಲಿ, ಕಾಳಿಂಗ ಸರ್ಪವು ಆತನನ್ನು ಆಕಸ್ಮಿಕವಾಗಿ ಕಡಿದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಯ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಷದ ಪರಿಣಾಮವನ್ನು ತಗ್ಗಿಸಲು ಆ್ಯಂಟಿವೆನಮ್ ಔಷಧ ನೀಡಲಾಗಿತ್ತಾದರೂ, ವೈದ್ಯಕೀಯ ಸಹಾಯದಲ್ಲಿ ವಿಳಂಬವಾದ ಕಾರಣ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಈ ಸುದ್ದಿಯನ್ನು ಓದಿ:Viral Video: ಕನ್ನ ಹಾಕಲು ಹೋಗಿ ಭರ್ಜರಿ ಗೊರಕೆ ಹೊಡೆದು ನಿದ್ದೆ! ಖದೀಮನ ವಿಡಿಯೊ ನೋಡಿ
ದೀಪಕ್‌ನ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಈಗ ಆತನ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮತ್ತು ದಿಗ್ಭ್ರಮೆಯನ್ನುಂಟು ಮಾಡಿದೆ. ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದ ದೀಪಕ್‌ನ ಈ ದುರಂತ ಸಾವು, ವನ್ಯಜೀವಿ ಸಂರಕ್ಷಣೆಯ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಎತ್ತಿ ತೋರಿಸಿದೆ.