ಯುದ್ಧದ ನಡುವೆ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡ ಪ್ರಯಾಣಿಕರಿಗೆ ಕತಾರ್ ಏರ್‌ವೇಸ್‌ನಿಂದ ಊಟ, ವಸತಿ ವ್ಯವಸ್ಥೆ; ಭಾರತೀಯನಿಂದ ಮೆಚ್ಚುಗೆ
Viral News: ಕತಾರ್ ಏರ್‌ವೇಸ್ ಮತ್ತು ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಅರ್ಷದ್ ಕಲೀಬುಲ್ಲಾ ಎಂಬುವವರು ತಮಗಾದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಏರ್‌ವೇಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಕೂಡ ಶ್ಲಾಘಿಸಿದ್ದಾರೆ.
ಕತಾರ್ ಏರ್‌ವೇಸ್ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತೀಯ ವ್ಯಕ್ತಿ. -
ದೋಹಾ, ಮಾ. 2: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಿಂದಾಗಿ (Israel-Iran War) ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿ ದಾಳಿ ನಡೆಸಿದೆ. ಸದ್ಯ ಭಾರತೀಯ ಪ್ರಜೆಗಳಿಗೆ 'ರೆಡ್ ಅಲರ್ಟ್' ಸೂಚನೆ ನೀಡಲಾಗಿದ್ದು ದುಬೈ, ದೋಹಾ, ಬಹ್ರೇನ್ ಮತ್ತು ಕುವೈತ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲೆಡೆ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದ್ದು ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಈ ಉದ್ವಿಗ್ನತೆಯ ನಡುವೆ ಕತಾರ್ ಏರ್‌ವೇಸ್ ಮತ್ತು ದೋಹಾದ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಭಾರತೀಯ ವ್ಯಕ್ತಿಯೊಬ್ಬರು ತಮ್ಮ ಅನುಭವ ಶೇರ್ ಮಾಡಿಕೊಂಡಿದ್ದಾರೆ.
ಕತಾರ್ ಏರ್‌ವೇಸ್‌ನ ಪ್ರಯಾಣಿಕ ಮತ್ತು ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಅರ್ಷದ್ ಕಲೀಬುಲ್ಲಾ ತಮಗಾದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಏರ್‌ವೇಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಕೂಡ ಶ್ಲಾಘಿಸಿದ್ದಾರೆ.
ಅರ್ಷದ್ ಕಲೀಬುಲ್ಲಾ ಅವರ ಎಕ್ಸ್ ಪೋಸ್ಟ್:
This is an appreciation post for @qatarairways and @HIAQatar.
— Ershad Kaleebullah (@r3dash) March 1, 2026
- Food coupons were distributed to everyone at the airport. You could just redeem them at the food court. For all meals, no less.
- We had decided to stay at the lounge until the airspace opened. In fact, we went… pic.twitter.com/ReWr1PDB2U
ಸಂಘರ್ಷದ ಸಮಯದಲ್ಲಿ ವಿಮಾನಯಾನ ಸಂಸ್ಥೆಯು ಎಲ್ಲ ಪ್ರಯಾಣಿಕರನ್ನು ಹೇಗೆ ನೋಡಿ ಕೊಂಡಿದೆ ಎಂದು ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಅವರಿಗೆ ಆಹಾರ ಕೂಪನ್‌ಗಳು ಹಾಗೂ ಇರಲು ವಾಸ್ತವ್ಯವನ್ನು ನೀಡಿದೆ ಎಂದು ಉಲ್ಲೇಖಿಸಿದ್ದಾರೆ. ಮಾರ್ಚ್ 1ರ ಮಧ್ಯರಾತ್ರಿ 12:30ಕ್ಕೆ ಸುರಕ್ಷತೆಯ ದೃಷ್ಟಿಯಿಂದ ಇಡೀ ವಿಮಾನ ನಿಲ್ದಾಣವನ್ನು ಖಾಲಿ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ತಾಳ್ಮೆಯಿಂದ ಮತ್ತು ನಗುಮೊಗದಿಂದ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಿದ್ದಾರೆ.
ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!
ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ದೋಹಾದ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಅವರ ಊಟದ ಜವಾಬ್ದಾರಿಯನ್ನು ಕೂಡ ಏರ್‌ವೇಸ್ ವಹಿಸಿ ಕೊಂಡಿತ್ತು. ನಮ್ಮನ್ನು ಸಿಬ್ಬಂದಿ ತುಂಬಾ ಕಂಫರ್ಟಬಲ್ ಆಗಿ ಇರಿಸಿಕೊಂಡಿದ್ದಾರೆ ಎಂದು ಅರ್ಷದ್ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಕರು ಏರ್‌ವೇಸ್‌ನ ಮಾನವೀಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ತಾವು ಅನುಭವಿಸಿದ ಘಟನೆಯನ್ನು ನೆನೆದು, "ಹೋಟೆಲ್ ವೋಚರ್‌ಗಾಗಿ 3 ಗಂಟೆ ಕಾಯಬೇಕಾಯಿತುʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.