ಬಾಲಿಯ ರೆಸಾರ್ಟ್‌ನಲ್ಲಿ ಕದ್ದು ಮಾಡಿ ಸಿಕ್ಕಿಬಿದ್ದ ಭಾರತೀಯ ಪ್ರವಾಸಿಗರು: ವಿದೇಶದಲ್ಲಿ ನಮ್ಮ ದೇಶದ ಮಾನ ಹರಾಜು ಹಾಕಿದವರ ವಿರುದ್ಧ ನೆಟ್ಟಿಗರು ಕಿಡಿ
Viral Video: ಭಾರತವು ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದರೂ ಕೆಲವೊಂದು ವ್ಯಕ್ತಿಗಳ ಸಾರ್ವಜನಿಕ ಸ್ಥಳದ ಅಸಭ್ಯ ವರ್ತನೆ ಭಾರತದ ಹೆಸರನ್ನೇ ಹಾಳುಗೆಡುವುವಂತೆ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಲಿ ರೆಸಾರ್ಟ್‌ನಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ಕಳವು ಮಾಡಿರುವ ಘಟನೆ ನಡೆದಿದೆ. ರೆಸಾರ್ಟ್ ಸಿಬ್ಬಂದಿ ನಡೆಸಿದ ಪರಿಶೀಲನೆ ನಡೆಸಿದ ವೇಳೆ ಈ ವೇಳೆ ಇದು ಬೆಳಕಿಗೆ ಬಂದಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
ಬಾಲಿ ರೆಸಾರ್ಟ್‌ನಲ್ಲಿ ಭಾರತೀಯ ಪ್ರವಾಸಿಗರಿಂದ ಕಳ್ಳತನ -
ಬಾಲಿ, ಏ. 22: ಇತ್ತೀಚೆಗೆ ಭಾರತೀಯ ಪ್ರವಾಸಿಗರ ಮೀತಿ ಮೀರಿದ ವರ್ತನೆಗಳು ಟೀಕೆಗೆ ಕಾರಣವಾಗುತ್ತಿದೆ. ಭಾರತವು ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದರೂ ಕೆಲವೊಂದು ವ್ಯಕ್ತಿಗಳ ಸಾರ್ವಜನಿಕ ಸ್ಥಳದ ಅಸಭ್ಯ ವರ್ತನೆ ಭಾರತದ ಹೆಸರನ್ನೇ ಹಾಳುಗೆಡುವುವಂತೆ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಲಿ ರೆಸಾರ್ಟ್‌ನಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ಕಳವು ಮಾಡಿರುವ ಘಟನೆ ನಡೆದಿದೆ. ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
ಬಾಲಿಯ ಗಿಯಾನ್ಯಾರ್ ಪ್ರದೇಶದ ಐಷಾರಾಮಿ ರೆಸಾರ್ಟ್‌ನಲ್ಲಿ ಕಳವು ಮಾಡಿದ ನಾಲ್ವರು ಭಾರತೀಯ ಪ್ರವಾಸಿಗರು ಸಿಕ್ಕಿ ಬಿದ್ದಿದ್ದಾರೆ. ಚೆಕ್-ಔಟ್ ಸಮಯದಲ್ಲಿ ಸಿಬ್ಬಂದಿ ಲಗೇಜ್‌ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭಗಳಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ಏಪ್ರಿಲ್ 19ರಂದು ಹೋಟೆಲ್‌ನಿಂದ ಚೆಕ್-ಔಟ್ ಮಾಡುವಾಗ ರೂಮ್‌ನಲ್ಲಿದ್ದ ಕೆಲವು ವಸ್ತುಗಳು ಕಾಣೆ ಯಾಗಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ.
ವಿಡಿಯೊ ನೋಡಿ:
INDIAN TOURISTS DO NOT LEARN 🤦🏻🤦🏻
— Tarun Gautam (@TARUNspeakss) April 21, 2026
Indian tourists, who stayed at Ubud, Bali (Indonesia) were caught by hotel-staff stealing stuff from the hotel.
Why would you go to a foreign country and do such cheap act/crime??
This is embarrassing to watch as an Indian. pic.twitter.com/ETtxJArCgl
ಪ್ರವಾಸಿಗರು ಏಪ್ರಿಲ್ 16ರಂದು ಅಸ್ವಾರಾ ರೆಸಾರ್ಟ್ ಉಬುಡ್‌ಗೆ ಮೂರು ದಿನ ಮತ್ತು ಎರಡು ರಾತ್ರಿ ವಾಸ್ತವ್ಯಕ್ಕಾಗಿ ಎರಡು ಕೊಠಡಿಗಳನ್ನು ಬುಕ್ ಮಾಡಿದ್ದರು. ಚೆಕ್‌ಔಟ್ ಆದಾಗ ಅಲ್ಲಿದ್ದ ಕೆಲವು ವಸ್ತು ಕಾಣೆಯಾಗಿರುವುದು ಗಮನಿಸಿ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಅನುಮಾನಗೊಂಡ ಹೋಟೆಲ್ ಮ್ಯಾನೇಜ್‌ಮೆಂಟ್ ಲಗೇಜ್ ತಪಾಸಣೆ ನಡೆಸಲು ಮುಂದಾಗಿದೆ. ಆರಂಭದಲ್ಲಿ ಇದಕ್ಕೆ ನಿರಾಕರಿಸಿದರೂ ತಪಾಸಣೆ ನಡೆಸಿದಾಗ ಬ್ಯಾಗ್‌ನೊಳಗೆ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.
ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ವಿಡಿಯೊ ವೈರಲ್
ವಶಪಡಿಸಿಕೊಂಡ ವಸ್ತುಗಳಲ್ಲಿ ಸ್ನಾನದ ಟವೆಲ್, ಪೂಲ್ ಟವೆಲ್, ಹೇರ್ ಡ್ರೈಯರ್, ಕಿಮೋನೊ ಶೈಲಿಯ ಡ್ರೆಸ್, ಡೋರ್‌ಮ್ಯಾಟ್, ಟಿವಿ ರಿಮೋಟ್ ಬಾಕ್ಸ್ ಮತ್ತು ಊಟದ ತಟ್ಟೆ ಸೇರಿದೆ. ಇದರ ಹೊರತಾಗಿಯೂ ರೆಸಾರ್ಟ್ ಕಾನೂನುಬದ್ಧವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರವಾಸಿಗರು ಎಲ್ಲ ವಸ್ತುಗಳನ್ನು ಹಿಂತಿರುಗಿಸಿದ್ದು ಔಪಚಾರಿಕ ಪೊಲೀಸ್ ದೂರು ದಾಖಲಿಸದೆ ಸಮಸ್ಯೆಯನ್ನು ಪರಿಹರಿಸಲಾಯಿತು.
ಈ ವಿಡಿಯೊ ಸಾಮಾಜಿಕ ವೈರಲ್ ಆಗುತ್ತಿದ್ದಂತೆ, ಅನೇಕರು ಭಾರತೀಯ ಪ್ರವಾಸಿಗರ ಈ ನಡೆಯನ್ನು ಟೀಕಿಸಿದ್ದಾರೆ. ನೆಟ್ಟಿಗರೊಬ್ಬರು ಇಂತಹ ವರ್ತನೆಯಿಂದ ನಮಗೆ ಕೆಟ್ಟ ಹೆಸರು ಎಂದು ಬರೆದಿದ್ದಾರೆ. ಮತ್ತೊಬ್ಬರು ಇವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ.