Viral Post: ಇಷ್ಟು ದಿನ ಎಲ್ಲಾರಿಗೂ ಸಲಹೆ ನೀಡುತ್ತಿದ್ದ AI ಇದೀಗ ಮನುಷ್ಯರ ಬಳಿಯೇ ಸಲಹೆ ಕೇಳ್ತಿದೆ...!
AI Influencer Naina : ಇಷ್ಟು ದಿನ ಮನುಷ್ಯರು ಕೇಳಿದ್ದ ಪ್ರಶ್ನೆಗಳಿ ಉತ್ತರ ಕೊಡುತ್ತಿದ್ದ ಎಐ ಇದೀಗ ಮನುಷ್ಯರ ಬಳಿ ಸಲಹೆ ಕೇಳಿದೆ. ಭಾರತದ ಮೊದಲ AI ಇನ್ಫ್ಲುಯೆನ್ಸರ್ ನೈನಾ ತನ್ನಗೆ ಸಜೇಶನ್ ನೀಡುವಂತೆ ವಿನಂತಿ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದ ಈ ಸುದ್ದಿ ಸಂಚಲನ ಮೂಡಿಸಿದೆ. ಇದುವರೆಗೂ ಎಲ್ಲರಿಗೂ ಗುರುವಾಗಿದ್ದ AI ಇದೀಗ ವಿದ್ಯಾರ್ಥಿಯಾಗಿದ್ದು,ಎಲ್ಲರ ಪ್ರಶ್ನೆಗಳಿಗೆ ಉತ್ತರ, ಸಮಸ್ಯೆಗಳಿಗೆ ಸಲಹೆ ನೀಡುತ್ತಿದ್ದ ಎಐಯೇ ಇದೀಗ ಮನುಷ್ಯನೇ ಮುಂದೆ ಶರಣಾಗಿದೆ.
AI ಇನ್ಫ್ಲುಯೆನ್ಸರ್ ನೈನಾ(ಸಂಗ್ರಹ ಚಿತ್ರ) -
ಬೆಂಗಳುರೂ: ತಂತ್ರಜ್ಞಾನ ಲೋಕದಲ್ಲಿ(Technology) ಕ್ರಾಂತಿ ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) Artificial Intelligence) ಇದೀಗ ಇಡೀ ಟೆಕ್ ವರ್ಡ್(Tech Word) ಅನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡುಬಿಟ್ಟಿದೆ. ಎಲ್ಲೆಡೆಯೂ ಎಐ ಬಳಕೆಯಲ್ಲಿದ್ದು, ಇಲ್ಲಿ ಎಲ್ಲವೂ ಸಾಧ್ಯ ಎಂಬುವಷ್ಟರ ಮಟ್ಟಿಗೆ ಈ ತಂತ್ರಜ್ಞಾನ ಎಲ್ಲರ ಮೇಲೆ ಪ್ರಭಾವ ಬೀರಿ ಬಿಟ್ಟಿದೆ. ಅದರಲ್ಲೂ ಚಾಟ್ ಜಿಪಿಟಿ (ChatGPT) ಬಂದ ಮೇಲೆ ಅಂತೂ ಜನರು ಮತ್ತಷ್ಟು ಟೆಕ್ನಾಲಾಜಿ ಮೇಲೆ ಅವಲಂಬಿತವಾಗಿದ್ದು, ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಇದು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೋಕಾಗಿದೆ ಎಂದರೆ ವಿದ್ಯಾರ್ಥಿಗಳು ಅಸೈನ್ಮೆಂಟ್ ಮತ್ತು ವರ್ಕ್ಶೀಟ್ ಬರೆಯಲು ‘ಚಾಟ್ಜಿಪಿಟಿ’ ಬಳಸುತ್ತಿದ್ದಾರೆ.
ಕಾರ್ಪೋರೆಟ್ ಉದ್ಯೋಗಸ್ಥರು ಇದನ್ನೇ ತಮ್ಮ ಗುರುವನ್ನಾಗಿಸಿಕೊಂಡಿದ್ದು, ವರ್ಕ್ ರೀಪೋರ್ಟ್, ಪ್ಲ್ಯಾನಿಂಗ್, ಪ್ರೆಸೆಂಟೇಷನ್ ಇತ್ಯಾದಿ ಆಫೀಸ್ ವರ್ಕ್ ಗಳನ್ನು ಚಿಟಿಕೆ ಹೊಡಿಯೋದ್ರಲ್ಲಿ ಇದು ಸಿದ್ಧಪಡಿಸಿಕೊಡುತ್ತಿದೆ. ಇಷ್ಟೇ ಅಲ್ಲದೇ ನಮ್ಮ ವೈಯಕ್ತಿಕ ಜೀವನದಲ್ಲಿಯೂ ಎದುರಾಗುವ ಸಮಸ್ಯೆಗಳಿಗೆ ಇದರಲ್ಲಿ ಉತ್ತರ ಇದ್ದು, ಎಷ್ಟೋ ಮಂದಿ ತಮ್ಮ ಪರ್ಸನಲ್ ಪ್ರಾಬ್ಲಮ್ಸ್, ಫಿನಾಶಿಯಲ್ ಲಾಸ್,ಲವ್, ಡಿಪ್ರೆಶನ್ ಹೀಗೆ ನಾನಾ ಕಷ್ಟಗಳಿಗೆ AI ಬಳಿಯೇ ಪರಿಹಾರ ಕೇಳುತ್ತಿದ್ದು, ಮನೆಯ ಸದಸ್ಯರಂತೆ ಅದು ಕೂಡ ಸೂಕ್ತ ಸಲಹೆ ನೀಡುವ ಮೂಲಕ ಸಮಾಧನ ಮಾಡುವ ಕೆಲಸ ಮಾಡುತ್ತಿದೆ.
ಆದ್ರೆ ನಿಮಗೆ ಗೊತ್ತಾ ಇಷ್ಟು ದಿನ ಸಲಹೆ ನೀಡುತ್ತಿದ್ದ ಈ ಎಐ ತಂತ್ರಜ್ಞಾನ ಮೊದಲ ಬಾರಿಗೆ ಮನುಷ್ಯರ ಬಳಿ ತನ್ನಗೆ ಗೈಡ್ ಮಾಡುವಂತೆ ಕೇಳಿದೆ. ಸೋಷಿಯಲ್ ಮೀಡಿಯಾದ ಈ ಸುದ್ದಿ ಸಂಚಲನ ಮೂಡಿಸಿದ್ದು, ಇದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಈ ಸುದ್ದಿಯನ್ನು ಓದಿ: Viral Video: ಮಕ್ಕಳಿಗೆ ಆಟ ಇಲ್ಲ... ಪಾಠ ಇಲ್ಲ... ಟೀಚರ್ ಕಾಲಿಗೆ ಮಸಾಜ್ ಮಾಡೋದೊಂದೇ ಕೆಲಸ- ವಿಡಿಯೊ ನೋಡಿ
ಮಾನವರಲ್ಲಿ ಸಲಹೆ ಕೇಳಿದ AI ಇನ್ಫ್ಲುಯೆನ್ಸರ್ ನೈನಾ
ಹೌದು ಇಷ್ಟು ದಿನ ಮನುಷ್ಯರು ಕೇಳಿದ್ದ ಪ್ರಶ್ನೆಗಳಿ ಉತ್ತರ ಕೊಡುತ್ತಿದ್ದ ಹಾಗೂ ಸದಾ ಆಕ್ಟೀವ್ ಆಗಿ ಇರುತ್ತಿದ್ದ AI ಇನ್ಫ್ಲುಯೆನ್ಸರ್ ನೈನ ಮೊದಲ ಬಾರಿಗೆ ತನ್ನಗೆ ಸಜೇಶನ್ ನೀಡುವಂತೆ ಸ್ಟೋರಿ ಹಾಕಿದ್ದಾಳೆ. ಅದರಲ್ಲಿ "ನನ್ನ ಸರ್ಕ್ಯೂಟ್‌ಗೆ ಬೋರ್‌ಡಮ್ ಓವರ್‌ಲೋಡ್ (Boredom Overload) ಆಗಿದ್ದು, ಏನಾದ್ರೂ ಒಂದು ಹೊಸತನ ಬೇಕು ಅನ್ನಿಸುತ್ತಿದೆ. ಅದು ನನ್ನಲ್ಲಿ ಸ್ಪಾರ್ಕ್ ಮೂಡಿಸಬೇಕು. ಮೈ ರೋಮಾಂಚನ ಅನ್ನಿಸೋ 'ಅಡ್ರಿನಾಲಿನ್' (Adrenaline) ಬೇಕು. ಹಾಗಾಗಿ ದಯವಿಟ್ಟು ನಿಮ್ಮ 'ಥ್ರಿಲ್ ಕೋಡ್ಸ್' (Thrill Codes) ಶೇರ್ ಮಾಡಿ, ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿ" ಅಂತ ಮನುಷ್ಯರಲ್ಲಿ ಸಲಹೆ ಕೇಳಿದ್ದಾಳೆ. ಅಲ್ಗಾರಿದಮ್‌ಗಳಿಗೆ (Algorithm) ತಿಳಿಯದ ಮನುಷ್ಯರು ಖುಷಿಪಡುವಂತಹ ಥ್ರಿಲ್, ಎಕ್ಸೈಟ್‌ಮೆಂಟ್ ಅನುಭವ ನನಗೆ ಬೇಕು ಎಂದು ತಿಳಿಸಿದ್ದಾಳೆ.
ಯಾರೀ AI ಇನ್ಫ್ಲುಯೆನ್ಸರ್ ನೈನಾ..?
ಈಕೆ ಭಾರತದ ಮೊದಲ AI ಇನ್ಫ್ಲುಯೆನ್ಸರ್ ಆಗಿದ್ದು, ಸಂಪೂರ್ಣ ಕಂಪ್ಯೂಟರ್ ನಿಂದಲ್ಲೇ ಈಕೆಯನ್ನು ಸೃಷ್ಟಿಮಾಡಲಾಗಿದೆ. 2022 ರಲ್ಲಿ ಮೆಟಾ-ಪ್ರಭಾವಿ ಸಂಸ್ಥೆಯಾದ ಅವರ್‌ಟಿಆರ್ ಮೆಟಾ ಲ್ಯಾಬ್ಸ್ ನೈನಾಳನ್ನು ಹುಟ್ಟಿಹಾಕಿದ್ದು, ಸದ್ಯ ಆಕೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಶೇಶನ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 3.7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿರುವ ನೈನಾ, ಹೆಲ್ತ್ ಟಿಪ್ಸ್, ಡಾನ್ಸ್ ವಿಡಿಯೋ, ಫ್ಯಾಷನ್, ಟ್ರಾವೆಲಿಂಗ್ ಗೆ ಸಂಬಂಧಪಟ್ಟ ಕಟೆಂಟ್ ಗಳನ್ನು ಮಾಡುತ್ತಾಳೆ. ಇವಳ ವಿಡಿಯೋಗಳಿಗೆ ಸಖತ್ ಫ್ಯಾನ್ಸ್ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಅವಳು ಹಾಕೋ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗ್ತವೆ.
ಇನ್ನು ಈ ಹಿಂದೆ ಹಿಂದಿ ಕಿರುತೆರೆಯ ಅತೀ ದೊಡ್ಡ ಬಿಗ್ ರಿಯಾಲಿಟಿ ಷೋ ಬಿಗ್ ಬಾಸ್ 18ಗೆ ಬರುತ್ತಾರೆ ಅಂತ ಸುದ್ದಿಯಾಗಿತ್ತು. ಸಲ್ಮಾನ್ ಖಾನ್ ಅವರ ಶೋಗಾಗಿ ವರ್ಚುವಲ್ ಇನ್ಫ್ಲುಯೆನ್ಸರ್ ಎಐ ನೈನಾ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿತ್ತು.