ಅಡುಗೆಮನೆಯ 'ಲವಂಗ'ಕ್ಕೂ ಈ ಭಾರತದ ಈ ದ್ವೀಪಕ್ಕೂ ಇದೆ ರಹಸ್ಯಕರ ನಂಟು!
ಮಸಾಲೆ ಪದಾರ್ಥಗಳು ನಮ್ಮ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಐತಿಹಾಸಿಕವಾಗಿಯೂ ಗುರುತಿಸಿಕೊಂಡಿದೆ. ಹೌದು ಈ ಒಂದು ದ್ವೀಪವು ಮಸಾಲೆ ಪದಾರ್ಥ ಜೊತೆ ಎಷ್ಟು ನಿಕಟ ಸಂಬಂಧ ಹೊಂದಿದೆಯೆಂದರೆ ಅದು ಶಾಶ್ವತವಾದ ಜಾಗತಿಕ ಗುರುತನ್ನು ಗಳಿಸಿಕೊಂಡಿದೆ. ಜಂಜಿಬಾರ್ (Zanzibar) ದ್ವೀಪವನ್ನು ಇಂದಿಗೂ 'ಲವಂಗದ ದ್ವೀಪ' ಎಂದೇ ಕರೆಯಲಾಗುತ್ತದೆ.
ಸಂಗ್ರಹ ಚಿತ್ರ -
ಜಂಜಿಬಾರ್,ಫೆ.11: ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತೇವೆ. ಈ ಮಸಾಲೆ ಪದಾರ್ಥಗಳು ನಮ್ಮ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಐತಿಹಾಸಿಕವಾಗಿಯೂ ಗುರುತಿಸಿಕೊಂಡಿದೆ. ಹೌದು ಈ ಒಂದು ದ್ವೀಪವು ಮಸಾಲೆ ಪದಾರ್ಥ ಜೊತೆ ಎಷ್ಟು ನಿಕಟ ಸಂಬಂಧ ಹೊಂದಿದೆಯೆಂದರೆ ಅದು ಶಾಶ್ವತವಾದ ಜಾಗತಿಕ ಗುರುತನ್ನುಗಳಿಸಿಕೊಂಡಿದೆ. ಜಂಜಿಬಾರ್ (Zanzibar) ದ್ವೀಪವನ್ನು ಇಂದಿಗೂ 'ಲವಂಗದ ದ್ವೀಪ' ಎಂದೇ ಕರೆಯಲಾಗುತ್ತದೆ. ಆಫ್ರಿಕಾದ ಪೂರ್ವ ಕರಾವಳಿಯಲ್ಲಿ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿರುವ ಜಾಂಜಿಬಾರ್, ಜಾಗತಿಕ ವಾಗಿ ಲವಂಗ ಉತ್ಪಾದಿಸುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದ್ದು ಬಹಳಷ್ಟು ಪ್ರಸಿದ್ಧಿ ಪಡೆದಿದೆ.
Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ಮಸಾಲ ಪದಾರ್ಥಗಳಿಗೆ ಉತ್ತಮ ಬೇಡಿಕೆ ಇದೆ. ಹಲವು ಶತಮಾನಗಳ ಹಿಂದೆ ಲವಂಗವು ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ ವಸ್ತುವಾಗಿ ಪ್ರಸಿದ್ಧಿ ಪಡೆದಿತ್ತು.19 ನೇ ಶತಮಾನದ ಆರಂಭದಲ್ಲಿ ಓಮನ್‌ನ ಸುಲ್ತಾನ್ ಸಯ್ಯದ್ ಸೈದ್ ಅವರು ಜಾಂಜಿಬಾರ್‌ಗೆ ಲವಂಗವನ್ನು ಪರಿಚಯಿಸಿದರು. ಇದಕ್ಕಾಗಿ ಅರಬ್, ಏಷ್ಯಾ ಮತ್ತು ಯುರೋಪಿನ ಜನರು ಈ ದ್ವೀಪದ ಲವಂಗಕ್ಕಾಗಿ ಸಮುದ್ರ ಮಾರ್ಗಗಳನ್ನು ಹುಡುಕುತ್ತಾ ಬಂದಿದ್ದರು.
19ನೇ ಶತಮಾನದಲ್ಲಿ ಓಮನ್‌ನ ಸುಲ್ತಾನ್ ಸೈಯದ್ ಸೈದ್ ಅವರು ಜಂಜಿಬಾರ್‌ನಲ್ಲಿ ಲವಂಗ ಕೃಷಿಯನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಿದರು. ಈ ದ್ವೀಪದ ಮಣ್ಣು ಮತ್ತು ಹವಾಮಾನವು ಲವಂಗ ಮರಗಳಿಗೆ ಸೂಕ್ತವಾಗಿದ್ದು ಉತ್ಪಾದನೆಯು ಹೆಚ್ಚಾಯಿತು. ಮಸಾಲೆ ಪದಾರ್ಥಗಳು ದ್ವೀಪವನ್ನು ಜಾಗತಿಕ ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಿತು. ನೋಡನೋಡುತ್ತಿದ್ದಂತೆಯೇ ಇಡೀ ದ್ವೀಪ ಲವಂಗದ ಪರಿಮಳದಿಂದ ತುಂಬಿಹೋಗಿ, ಜಾಗತಿಕ ಮಾರುಕಟ್ಟೆಯ ಕೇಂದ್ರಬಿಂದುವಾಯಿತು. ಹೀಗಾಗಿ ಲವಂಗದ ದ್ವೀಪ ಎಂದೆ ಕರೆಯಲಾಗುತ್ತದೆ.
ಲವಂಗದ ಉತ್ಪಾದನೆಯ ಪ್ರಮಾಣದಲ್ಲಿ ಬದಲಾವಣೆ ಇದ್ದರೂ ಅತ್ಯುತ್ತಮ ಗುಣಮಟ್ಟದ ಲವಂಗದ ಎಣ್ಣೆ ಮತ್ತು ಐತಿಹಾಸಿಕ ಗುರುತಿನಿಂದ ಜಂಜಿಬಾರ್ ಇಂದಿಗೂ ತನ್ನ ಹೆಸರನ್ನು ಹಾಗೆಯೇ ಉಳಿಸಿಕೊಂಡಿದೆ. ಇಲ್ಲಿ ಸಾವಿರಾರು ಜನರು ಈಗಲೂ ಕೃಷಿ, ಕೊಯ್ಲು, ಒಣಗಿಸುವುದು, ಮತ್ತು ರಫ್ತು ಕೆಲಸವನ್ನು ಅವಲಂಬಿಸಿದ್ದಾರೆ.