ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಂಪನಿ ಕೆಲಸ ತೊರೆದು ಫಲೂದಾ ಮಾರಾಟ ಮಾಡಿದ ಬೆಂಗಳೂರಿನ ಈ ವ್ಯಕ್ತಿ ಇಂದು 18ಕ್ಕೂ ಹೆಚ್ಚು ಮಳಿಗೆಗಳ ಒಡೆಯ!

Viral News: ಇಲ್ಲೊಬ್ಬರು ಕೈತುಂಬಾ ಸಂಬಳ ನೀಡುತ್ತಿದ್ದ ಕಾರ್ಪೊರೇಟ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸಲು ಹೊರಟಿದ್ದು ಡಬಲ್ ಪಟ್ಟು ಲಾಭ ಗಳಿಸುತ್ತಿದ್ದಾರೆ. ಪ್ರದೀಪ್ ಕಣ್ಣನ್ ಎನ್ನುವ ವ್ಯಕ್ತಿ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ಯಶಸ್ವಿ ಉದ್ಯಮಿಯಾಗಿ ಮಿಂಚಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ‌.

ಕಂಪನಿ ಕೆಲಸ ತೊರೆದು ಫಲೂದಾ ಮಾರಾಟ ಮಾಡಿದ ವ್ಯಕ್ತಿ ಇಂದು ಕೋಟ್ಯಾಧಿಪತಿ!

ಫಲೂಡಾ ಮಾರಾಟ ಮಾಡಿದ ವ್ಯಕ್ತಿ ಇಂದು ಕೋಟ್ಯಾಧಿಪತಿ -

Profile
Pushpa Kumari Feb 11, 2026 6:56 PM

ಬೆಂಗಳೂರು,ಫೆ.11: ಶಿಕ್ಷಣ ಪಡೆದ ಹೆಚ್ಚಿನ ಜನರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಚಿಸುತ್ತಾರೆ. ಒಳ್ಳೆಯ ಗೌರವದ ಜೊತೆಗೆ ಸಂಬಳವೂ ಸಿಗಬೇಕು ಎಂದು ಕನಸು ಇಟ್ಟು ಕೊಂಡವರು ಹಲವಾರು ಇದ್ದಾರೆ. ಆದರೆ ಇಲ್ಲೊಬ್ಬರು ಕೈತುಂಬಾ ಸಂಬಳ ನೀಡುತ್ತಿದ್ದ ಕಾರ್ಪೊರೇಟ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸಲು ಹೊರಟಿದ್ದು ಡಬಲ್ ಪಟ್ಟು ಲಾಭ ಗಳಿಸುತ್ತಿದ್ದಾರೆ. ಪ್ರದೀಪ್ ಕಣ್ಣನ್ ಎನ್ನುವ ವ್ಯಕ್ತಿ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ಯಶಸ್ವಿ ಉದ್ಯಮಿಯಾಗಿ ಮಿಂಚಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ‌.

ಬೆಂಗಳೂರಿನ ಓರಾಕಲ್ ಕಂಪನಿಯಲ್ಲಿ‌ ಹುದ್ದೆಯಲ್ಲಿದ್ದ ಪ್ರದೀಪ್ ಕಣ್ಣನ್ ಎಂಬುವವರು ತಮ್ಮದೆ ಊರಿನ ತಮಿಳುನಾಡಿನ ಕರೂರಿಗೆ ಮರಳಿ 'ದಿ ಫಲೂಡಾ ಶಾಪ್' (The Falooda Shop) ಎಂಬ ಅಂಗಡಿ ಯೊಂದನ್ನು ತೆರೆದು ಲಾಭ ಗಳಿಸುತ್ತಿದ್ದಾರೆ. 2019 ರಲ್ಲಿ, ಪ್ರದೀಪ್ ಕಣ್ಣನ್ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಒರಾಕಲ್‌ನಲ್ಲಿ ಕಾರ್ಯಾಚರಣೆ ಮುಖ್ಯಸ್ಥರಾಗಿ ತಮ್ಮ ಹೆಚ್ಚಿನ ಸಂಬಳದ ಕೆಲಸವನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಸ್ವಂತ ಉದ್ಯಮ ಮಾಡುವ ನಿಟ್ಟಿನಲ್ಲಿ ರಾಜೀನಾಮೆ ನೀಡುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.



ಅವರು 'ದಿ ಫಲೂಡಾ ಶಾಪ್' ಎಂಬ ಸಾಧಾರಣ ಆಹಾರ ಉದ್ಯಮವನ್ನು ಮೊದಲಿಗೆ ಪ್ರಾರಂಭಿ ಸಿದ್ದು ಆರು ವರ್ಷಗಳ ಶ್ರಮದ ನಂತರ ಇಂದು ಅವರು ಬೆಂಗಳೂರು ಸೇರಿದಂತೆ ವಿವಿಧೆಡೆ 18ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ಕಣ್ಣನ್ ಬೆಂಗಳೂರಿನಲ್ಲಿ ತಮ್ಮ ಮೊದಲ ಫಲೂಡಾ ಶಾಪ್ ಔಟ್‌ಲೆಟ್ ತೆರೆಯಲು ಎಷ್ಟು ವೆಚ್ಚವಾಯಿತು ಎಂಬುದರ ವಿವರವನ್ನು ಸಾಮಾ ಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಣ್ಣನ್ ಪ್ರಕಾರ, ಮೊದಲ ಫಲೂಡಾ ಶಾಪ್ ಔಟ್‌ಲೆಟ್ ತೆರೆಯಲು ಒಟ್ಟು 22 ಲಕ್ಷ ರೂ. ಹೂಡಿಕೆಯ ಅಗತ್ಯವಿದೆ ಎಂದಿದ್ದಾರೆ.

Viral News: ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ, ಎಲ್ಲಿದೆ ಈ ಕಂಟ್ರಿ?

ಬಾಡಿಗೆ ಠೇವಣಿಗಾಗಿ ಅವರು 2.4 ಲಕ್ಷ ರೂ.ಗಳನ್ನು ಮತ್ತು ಅಗತ್ಯ ಪರವಾನಗಿಗಳು ಮತ್ತು ನೋಂದಣಿ ಗಳನ್ನು ಪಡೆಯಲು 60,000 ರೂ.ಗಳನ್ನು ಖರ್ಚು ಮಾಡಿದರು. ಅತಿದೊಡ್ಡ ಭಾಗವಾದ 10 ಲಕ್ಷ ರೂ.ಗಳನ್ನು ಪೀಠೋಪಕರಣಗಳು ಮತ್ತು ಒಳಾಂಗಣಗಳಿಗೆ ಬಳಸಲಾ ಯಿತು. ಸಿಬ್ಬಂದಿ ಸದಸ್ಯರಿಗೆ 80,000 ರೂ.ಗಳನ್ನು ಪಾವತಿಸಲಾಯಿತು. ಹೀಗೆ ಒಟ್ಟು 22 ಲಕ್ಷ ರೂ. ಹೂಡಿಕೆಯ ಮೂಲಕ ಈ ಮಳಿಗೆ ತೆರೆದಿದ್ದಾರೆ.

ಉದ್ಯಮದ ಯಶಸ್ಸಿನ ಬಗ್ಗೆ ಹಂಚಿಕೊಂಡ ಪ್ರದೀಪ್ ನಮಗೆ ಇಂಟೀರಿಯರ್ ವಿನ್ಯಾಸಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಗ್ರಾಹಕರು ಆಗಿದ್ದಾರೆ. ಹಾಗಾಗಿ ರುಚಿ ಮತ್ತು ಗುಣಮಟ್ಟ ಇದ್ದರೆ ಮಾತ್ರ ಉದ್ಯಮ ಉಳಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ. ಸದ್ಯ ಇವರ ಈ ಪೋಸ್ಟ್ ವೈರಲ್ ಆಗುತ್ತಿ ದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಹಣವನ್ನು ಸರಿಯಾಗಿ ಹೇಗೆ ಹೂಡಿಕೆ ಮಾಡಬೇಕು ಎನ್ನುವುದಕ್ಕೆ ಇವರು ಅತ್ಯುತ್ತಮ ಉದಾಹರಣೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.