Viral Video: ಡಾಲಿ ಚಾಯ್‍ವಾಲಾಗೆ ಪ್ರತಿಸ್ಪರ್ಧಿ ಈ ಬಾದಾಮಿ ಹಾಲು ಮಾರಾಟಗಾರ; ವಿಡಿಯೊ ನೋಡಿ
ರಾಜಸ್ಥಾನದ ಮಾರಾಟಗಾರನೊಬ್ಬ ಅದ್ಭುತವಾದ ರೀತಿಯಲ್ಲಿ ಪ್ರದರ್ಶನ ನೀಡುತ್ತಾ ಬಾದಾಮಿ ಹಾಲನ್ನು ಗ್ರಾಹಕರಿಗೆ ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಅವನು ನಾಗ್ಪುರದ ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾನನ್ನು ಮೀರಿಸುತ್ತಾನೆ ಎಂದು ಹಾಡಿ ಹೊಗಳಿದ್ದಾರೆ.


ನಾಗ್ಪುರದ ಡಾಲಿ ಚಾಯ್‍ವಾಲ ತನ್ನ ಚಾ ನೀಡುವ ಸ್ಟೈಲ್ ಮೂಲಕವೇ ಜನಪ್ರಿಯತೆ ಗಳಿಸಿದ್ದಾನೆ. ಇದೀಗ ಆತನಿಗೆ ರಾಜಸ್ಥಾನಿ ಬಾದಾಮಿ ಹಾಲು ಮಾರಾಟಗಾರನೊಬ್ಬ ಸೆಡ್ಡು ಹೊಡೆಯಲು ಮುಂದಾಗಿದ್ದಾನೆ. ಯಾಕೆಂದರೆ ಆತ ಗ್ರಾಹಕರಿಗೆ ಅದ್ಭುತ ರೀತಿಯಲ್ಲಿ ಬಾದಾಮ್ ಹಾಲು ವಿತರಿಸಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಆತ ಅದ್ಭುತವಾದ ರೀತಿಯಲ್ಲಿ ಬಾದಾಮಿ ಹಾಲು ಮಾರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಕೆಲವರು ಈ ಕೆಲಸದಲ್ಲಿ ಅವನು ನಾಗ್ಪುರದ ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾನನ್ನು ಮೀರಿಸುತ್ತಾನೆ ಎಂದು ಹೊಗಳಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಆತ ರಾಜಸ್ಥಾನಿ ಸಾಂಪ್ರದಾಯಿಕ ಉಡುಪಿನಲ್ಲಿ, ತಿರುಗುವ ಕುರ್ಚಿ ಮೇಲೆ ಕುಳಿತುಕೊಂಡು ತಿರುಗುತ್ತಾ ಒಂದು ಜಗ್‌ನಿಂದ ಇನ್ನೊಂದು ಜಗ್‌ಗೆ ಹಾಲು ಸುರಿದಿದ್ದಾನೆ. ಇದರಲ್ಲಿನ ಆತನ ಕೌಶಲ್ಯ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವಿಡಿಯೊ ನೋಡಿ...
'ಹ್ಯಾಪಿ ಹೋಮ್ ಮೇಕರ್ ಮಿಧು' ಎಂಬ ಸೋಶಿಯಲ್ ಮೀಡಿಯಾ ಹ್ಯಾಂಡಲ್‍ನಲ್ಲಿ ಹಂಚಿಕೊಂಡ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 2.66 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಹಲವಾರು ನೆಟ್ಟಿಗರು ಆ ವ್ಯಕ್ತಿಯ ವಿಶಿಷ್ಟ ಕೌಶಲ್ಯ ಮತ್ತು ಅವನ ಕೆಲಸದ ಬಗೆಗಿನ ಪ್ರೀತಿಯನ್ನು ಹೊಗಳಿದ್ದಾರೆ. "ಅವನ ಸ್ಟೈಲ್ ಉತ್ತಮವಾಗಿದೆ" ಒಬ್ಬ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ಭೌತಶಾಸ್ತ್ರ ಮತ್ತು ಸಂಪ್ರದಾಯಗಳು ಒಟ್ಟಿಗೆ ಬೆರೆಸಲಾಗಿದೆ" ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ಇದನ್ನು "ಮ್ಯಾಜಿಕಲ್" ಎಂದು ಕರೆದಿದ್ದಾರೆ ಮತ್ತು ಭೌತಶಾಸ್ತ್ರದ ಬಗ್ಗೆ ಅವರ ಸಹಜ ತಿಳುವಳಿಕೆ "ಅದ್ಭುತ" ಎಂದು ಇನ್ನೊಬ್ಬರು ಹೇಳಿದ್ದಾರೆ.
ಅವರಲ್ಲಿ ಒಬ್ಬರು ನಾನು ಅವನ ಈ ಚಾಕಚಕ್ಯತೆಯನ್ನು ನೇರವಾಗಿ ನೋಡಿದ್ದೇನೆ. ಅವನು ಹಾಲು ನೀಡಿದಾಗ ಅವನ ಕೈಗಳಲ್ಲಿ ಸುಟ್ಟಗಾಯಗಳನ್ನು ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ. ಮತ್ತು ಕೈಯಲ್ಲಿರುವ ಗಾಯಗಳ ಬಗ್ಗೆ ಕೇಳಿದಾಗ, ಅವನು ಮುಗುಳ್ನಕ್ಕನು ಮತ್ತು ಒಂದೇ ಒಂದು ಮಾತನ್ನೂ ಹೇಳಲಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ನಟಿ ಟೀನಾ ದತ್ ಫುಲ್ ಖುಷಿಯಾಗಿ ಕಾಮೆಂಟ್‌ನಲ್ಲಿ ಫೈರ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಜಿಪ್‍ಲೈನ್ ಮಾಡುವಾಗ ಕೆಳಗೆ ಉರುಳಿ ಬಿದ್ದ ಪುರೋಹಿತ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ವಿಡಿಯೊದಲ್ಲಿರುವ ವ್ಯಕ್ತಿಯನ್ನು ನಾಗ್ಪುರದ ಅತ್ಯಂತ ಜನಪ್ರಿಯ ಡಾಲಿ ಚಾಯ್‌ವಾಲಾಗೆ ಹೋಲಿಸಲಾಗಿದೆ. ಅವನು ತನ್ನ ವಿಶಿಷ್ಟ ಚಹಾ ತಯಾರಿಸುವ ಶೈಲಿಯನ್ನು ಒಳಗೊಂಡ ಅನೇಕ ವಿಡಿಯೊಗಳ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಿದ್ದನು. ಡಾಲಿ ಚಾಯ್‌ವಾಲಾನ ಟೀ ಸ್ಟಾಲ್‍ಗೆ ಕಳೆದ ವರ್ಷ ಉದ್ಯಮಿ ಬಿಲ್ ಗೇಟ್ಸ್ ಭೇಟಿ ನೀಡಿದ್ದರು. ಇದನ್ನು ನೆನಪಿಸಿಕೊಳ್ಳುತ್ತಾ ಮೂರನೇ ವ್ಯಕ್ತಿಯೊಬ್ಬರು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ "ತಪ್ಪು ವಿಳಾಸಕ್ಕೆ ಹೋಗಿದ್ದಾರೆ" ಎಂದು ತಮಾಷೆ ಮಾಡಿದ್ದಾರೆ.