ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರ‍್ಯಾಪಿಡೋ ಸವಾರಿಯ ಜತೆ ಬೆಂಗಳೂರಿನಲ್ಲಿ ಹಾಲಿನ ಬ್ಯುಸಿನೆಸ್‌ಗೆ ಮಾರ್ಕೆಟಿಂಗ್ ರಿಸರ್ಚ್: ಒಡಿಶಾ ಯುವಕನ ವಿಶಿಷ್ಟ ಸಾಹಸ

Viral Video: ಒಡಿಶಾ ಮೂಲದ ಮಾಜಿ ಐಟಿ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ಸ್ವಂತ ಹಾಲಿನ ಫಾರ್ಮ್ ಉದ್ಯಮವಾಗಿ ಬೆಳೆಸುವ ಯೋಜನೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ರ‍್ಯಾಪಿಡೋ ಓಡಿಸುತ್ತ ಹಾಲಿನ ಉತ್ಪನ್ನಗಳ ಬಗ್ಗೆ ಮಾರ್ಕೆಟಿಂಗ್ ರಿಸರ್ಚ್ ಕೂಡ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಡೇರಿ ವ್ಯವಹಾರಕ್ಕಾಗಿ ರ‍್ಯಾಪಿಡೋ ಓಡಿಸಲು ಮುಂದಾದ ಐಟಿ ಉದ್ಯೋಗಿ

ಸಾಂದರ್ಭಿಕ ಚಿತ್ರ -

Profile
Pushpa Kumari Oct 6, 2026 8:28 PM

ಬೆಂಗಳೂರು, ಅ. 6: ಕಂಪನಿಯೊಂದರ ಉದ್ಯೋಗಿಯಾಗಿರುವ ಬದಲು ಹೆಚ್ಚಿನವರಿಗೆ ಸ್ವಂತ ಉದ್ಯಮ ಆರಂಭಿಸುವ ಆಸಕ್ತಿ ಇರುತ್ತದೆ. ಅದರಲ್ಲೂ ಹೊಸ ಉದ್ಯಮ ಆರಂಭ ಮಾಡುವ ಮೊದಲು ಬಹಳಷ್ಟು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದೀಗ ಒಡಿಶಾ ಮೂಲದ ಮಾಜಿ ಐಟಿ ಉದ್ಯೋಗಿಯೊಬ್ಬರು ಸ್ವಂತ ಹಾಲಿನ ಫಾರ್ಮ್ ಉದ್ಯಮವಾಗಿ ಬೆಳೆಸುವ ಯೋಜನೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಜನರ ನಾಡಿಮಿಡಿತ ಅರಿತುಕೊಳ್ಳಲು ಅವರು ಬೆಂಗಳೂರಿನಲ್ಲಿ ರ‍್ಯಾಪಿಡೋ ಓಡಿಸುತ್ತ ಮಾರ್ಕೆಟಿಂಗ್ ರಿಸರ್ಚ್ ಮಾಡುತ್ತಿದ್ದಾರೆ. ಸದ್ಯ ಇವರ ಈ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ (Viral News) ವ್ಯಕ್ತ ಪಡಿಸುತ್ತಿದ್ದಾರೆ.

ಐಟಿ ಉದ್ಯೋಗಿಯೊಬ್ಬರು ತಮ್ಮ ಕುಟುಂಬದ ಡೇರಿ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಮುಖ್ಯ ನಿರ್ಧಾರವನ್ನು  ತೆಗೆದುಕೊಂಡಿದ್ದಾರೆ. ಅವರು ಕಚೇರಿಯಲ್ಲಿ ಕುಳಿತು ಮಾರುಕಟ್ಟೆಯನ್ನು ಅಧ್ಯಯನ ಮಾಡುವ ಬದಲು, ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಸವಾರಿ ಮಾಡಿ ಗ್ರಾಹಕರೊಂದಿಗೆ ನೇರವಾಗಿ ಮಾತನಾಡುತ್ತಾ ಹಾಲಿನ ಉತ್ಪನ್ನಗಳ ಬಗ್ಗೆ ಅಭಿಪ್ರಾಯ ಕೇಳುತ್ತಿದ್ದಾರೆ.

​ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಸಾಫ್ಟ್‌‌ವೇರ್ ಉದ್ಯೋಗಿಯಾಗಿದ್ದ ದಿನೇಶ್ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಐಟಿ ಕೆಲಸಕ್ಕೆ ರಾಜೀನಾಮೆ ನೀಡಿ ರ‍್ಯಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ವರುಣ್ ರಾಜ್ ಎಂಬ ಪ್ರಯಾಣಿಕನ ಬಳಿ, ʼʼಸರ್ ಹಾಲಿನ ಉತ್ಪನ್ನಗಳ ಬಗ್ಗೆ ನಿಮಗೇನು ಅನಿಸುತ್ತದೆ? ಹಾಲು ಹೊರತುಪಡಿಸಿ ಇನ್ನು ಯಾವ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುತ್ತೀರಿ?ʼʼ ಎಂದು ಪ್ರಶ್ನಿಸಿದ್ದಾರೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ

ಇದರಿಂದ ಅಚ್ಚರಿಗೊಂಡ ವರುಣ್ ಕಾರಣ ಕೇಳುದಾಗ ದಿನೇಶ್ ತಮ್ಮ ಯೋಜನೆ ಮತ್ತು ಕಥೆಯನ್ನು ಹಂಚಿಕೊಂಡಿದ್ದಾರೆ. ಒಡಿಶಾದಲ್ಲಿ ದಿನೇಶ್ ಅವರ ಕುಟುಂಬಕ್ಕೆ ಸ್ವಂತ ಹಾಲಿನ ಫಾರ್ಮ್ ಇದೆ. ಅದನ್ನು ದೊಡ್ಡ ಮಟ್ಟದ ಉದ್ಯಮವಾಗಿ ಬೆಳೆಸುವ ಯೋಜನೆ ಹೊಂದಿದ್ದಾರೆ. ಆದರೆ ಕೇವಲ ಕಚೇರಿಯಲ್ಲಿ ಕುಳಿತು ಯೋಚನೆ ಮಾಡುವುದಕ್ಕಿಂತ ನೇರವಾಗಿ ಗ್ರಾಹಕರ ಬಳಿ ಕೇಳಲು ನಿರ್ಧರಿಸಿದ್ದಾರೆ. ಹೀಗೆ ಬೈಕ್ ಓಡಿಸುವುದರಿಂದ ಹಣವೂ ಸಿಗುತ್ತದೆ, ಜತೆಗೆ ನೈಜ ಗ್ರಾಹಕರ ಅಭಿಪ್ರಾಯ ಅಗತ್ಯಗಳೂ ಸ್ಪಷ್ಟವಾಗಿ ತಿಳಿಯುತ್ತವೆ ಎಂದು ದಿನೇಶ್ ವಿವರಿಸಿದ್ದಾರೆ.