ನಾಗರಿಕ ಪ್ರಜ್ಞೆಯ ಕೊರತೆ: ವಂದೇ ಭಾರತ್ ರೈಲಿನಲ್ಲಿ ಫುಲ್ ವಾಲ್ಯೂಮ್‌ನಲ್ಲಿ ವಿಡಿಯೊ ನೋಡುವ ʼಮಹಾನುಭಾವರುʼ
Viral Video: ಸಾರ್ವಜನಿಕವಾಗಿ ಶಿಸ್ತು ಕಾಪಾಡದಿರುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು, ಜನ ಸಾಮಾನ್ಯರಿಗೆ ತೊಂದರೆ ಎಸಗುವುದು ಹೀಗೆ ನಾಗರಿಕ ಪ್ರಜ್ಞೆ ಕೊರತೆಯ ಹಲವು ವಿಡಿಯೊಗಳು ವೈರಲ್ ಆಗುತ್ತಿವೆ. ಇದೀಗ ವಂದೇ ಭಾರತ್ ರೈಲಿನಲ್ಲಿ ದೊಡ್ಡ ವಾಲ್ಯೂಮ್ ಮೂಲಕ ರೀಲ್ಸ್ ನೋಡುವವರ ವಿರುದ್ಧ ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ವಂದೇ ಭಾರತ್ ರೈಲು (ಸಂಗ್ರಹ ಚಿತ್ರ) -
ನವದೆಹಲಿ, ಜು. 6: ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ಜನರು ಬೇಕಾಬಿಟ್ಟಿಯಾಗಿ ವರ್ತಿಸುವ ಅನೇಕ ಘಟನೆಗಳು ನಡೆಯುತ್ತಿವೆ. ಸಾರ್ವಜನಿಕವಾಗಿ ಶಿಸ್ತು ಕಾಪಾಡದೇ ಹಾನಿ ಮಾಡುವುದು, ಜನ ಸಾಮಾನ್ಯರಿಗೆ ತೊಂದರೆ ಎಸಗುವುದು ಹೀಗೆ ನಾಗರಿಕ ಪ್ರಜ್ಞೆ ಕೊರತೆಯ ಹಲವು ವಿಡಿಯೊಗಳು ವೈರಲ್ (Viral News) ಆಗುತ್ತಿವೆ. ಇದೀಗ ವಂದೇ ಭಾರತ್ ರೈಲಿನಲ್ಲಿದೊಡ್ಡ ವಾಲ್ಯೂಮ್ ಮೂಲಕ ರೀಲ್ಸ್ ನೋಡುವವರ ವಿರುದ್ಧ ವ್ಯಕ್ತಿಯೊಬ್ಬ ಆಕ್ರೋಶಗೊಂಡಿದ್ದು ಜನರಿಗೆ ಕನಿಷ್ಠ ಶಿಸ್ತು ಆದರೂ ಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಂದೇ ಭಾರತ್ ರೈಲಿನಲ್ಲಿ ಅನೇಕ ಪ್ರಯಾಣಿಕರು ಮೊಬೈಲ್‌ನಲ್ಲಿ ರೀಲ್ಸ್ ವೀಕ್ಷಿಸುತ್ತಿದ್ದರೆ, ಇತರರು ಪ್ರಯಾಣದ ಸಮಯದಲ್ಲಿ ಜೋರಾಗಿ ಮಾತನಾಡುತ್ತಿದ್ದರು ಎಂದು ಸಹ ಪ್ರಯಾಣಿಕರೊಬ್ಬರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಯುರೋಪ್ ಮತ್ತು ಭಾರತದ ರೈಲಿನಲ್ಲಿ ಪ್ರಯಾಣಿಸಿದ ಅವರು ಎರಡು ಕಡೆಯಲ್ಲಿನ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
I travel across Europe by trains. People mind their business, read books, or the ones listening to music have their headphones on. Once in a while all you can hear is an infant crying.
— Nishant Kumar (@nishkumar1977) July 5, 2026
I'm right now in a Vande Bharat train. Literally 30% passengers are watching YouTube or insta…
ನಿಶಾಂತ್ ಕುಮಾರ್ ಎಂಬವರು ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ʼʼನಾನು ಯುರೋಪ್‌ನಾದ್ಯಂತ ರೈಲಿನಲ್ಲಿ ಬಹಳಷ್ಟು ಬಾರಿ ಪ್ರಯಾಣಿಸಿದ್ದೇನೆ. ಅಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ತಮ್ಮೊಳಗೆ ಸಮಯ ಕಳೆಯುತ್ತಾರೆ. ಪುಸ್ತಕಗಳನ್ನು ಓದುತ್ತಾರೆ ಅಥವಾ ಹೆಡ್‌ಫೋನ್‌ಗಳ ಮೂಲಕ ಸಂಗೀತವನ್ನು ಕೇಳಿ ರೈಲುಗಳಲ್ಲಿ ಶಾಂತ ವಾತಾವರಣ ಸೃಷ್ಟಿಸುತ್ತಾರೆʼʼ ಎಂದು ತಿಳಿಸಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ
ʼʼಆದರೆ ಭಾರತದ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ. ಇಲ್ಲಿನ ವಂದೇ ಭಾರತ್‌ನಂತಹ ಪ್ರೀಮಿಯಂ ರೈಲಿನಲ್ಲೂ ಜನರ ಜೋರಾದ ಮಾತನಾಡುತ್ತಾರೆʼʼ ಎಂದು ಹೇಳಿದ್ದಾರೆ. ಜತೆಗೆ ಮೊಬೈಲ್ ಗದ್ದಲದಿಂದ ತಮಗಾದ ಕಿರಿಕಿರಿಯನ್ನು ಅವರು ಹಂಚಿ ಕೊಂಡಿದ್ದಾರೆ. ʼʼನಾನೀಗ ಭಾರತದ ವಂದೇ ಭಾರತ್ ರೈಲಿನಲ್ಲಿದ್ದೇನೆ. ಇಲ್ಲಿ ಶೇ. 30ರಷ್ಟು ಪ್ರಯಾಣಿಕರು ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಸ್ಪೀಕರ್ ಆನ್ ಮಾಡಿಕೊಂಡು ನೋಡುತ್ತಿದ್ದಾರೆ. ಜೋರಾಗಿ ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಇತರ ಪ್ರಯಾಣಿಕರಿಗೂ ತೊಂದರೆ ಮಾಡುತ್ತಿದ್ದಾರೆ. ನಾಗರಿಕ ಜವಾಬ್ದಾರಿಯ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಿರುವ ಹೊರತಾಗಿಯೂ ಇಂತಹ ನಡವಳಿಕೆಗಳು ಏಕೆ ಮುಂದುವರಿಯುತ್ತವೆ?ʼʼ ಎಂದು ಪ್ರಶ್ನಿಸಿದ್ದಾರೆ.
ಅನೇಕರು ರೈಲುಗಳು, ಬಸ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಂದಮ ತಗಾದ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ʼʼಈ ಬಗ್ಗೆ ಪ್ರಶ್ನಿಸಿದರೆ ಕೆಲವರು ನನ್ನ ಫೋನ್, ನನ್ನ ಸೀಟ್, ನಾನು ಬಯಸಿದ್ದನ್ನು ಮಾಡಬಹುದು ಎಂದು ಉಡಾಫೆಯ ಉತ್ತರ ನೀಡುತ್ತಾರೆʼʼ ಎಂಬುದಾಗಿ ಹೇಳಿದ್ದಾರೆ. ಮತ್ತೊಬ್ಬರು, ʼʼಜನರ ಮನಸ್ಥಿತಿ ಎಲ್ಲಿಯವರೆಗೆ ಅಂದರೆ ಸ್ವಲ್ಪ ಸೌಂಡ್ ಕಮ್ಮಿ ಮಾಡಿ ಅಂದರೆ, ನಮ್ಮ ಮೇಲೆಯೇ ಜಗಳಕ್ಕೆ ಬರುತ್ತಾರೆʼʼ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.