Viral Video: ಸೇಲ್ಸ್ ಟ್ಯಾಕ್ಸ್ ಕಚೇರಿಯ ಹೊರಗೆ ವಕೀಲರ ಮಾರಾಮಾರಿ; ಏನಿದು ವಿವಾದ? ವಿಡಿಯೊ ನೋಡಿ
ಉತ್ತರ ಪ್ರದೇಶದ ಗಾಜಿಯಾಬಾದ್‍ನ ಸೇಲ್ಸ್ ಟ್ಯಾಕ್ಸ್ ಕಚೇರಿಯ ಹೊರಗೆ ವಕೀಲರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜಗಳದಲ್ಲಿ ವಕೀಲೆಯೊಬ್ಬಳು ಗಾಯಗೊಂಡಿದ್ದಾಳೆ ಎನ್ನಲಾಗಿದೆ. ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗಿದೆ.
![ವಕೀಲರ ಬಿಗ್ ಫೈಟ್; ವೈರಲಾಯ್ತು ಶಾಕಿಂಗ್ ವಿಡಿಯೊ!](https://cdn-vishwavani-prod.hindverse.com/media/original_images/lawyer_hitting_case.jpg)
ವಕೀಲೆಯ ಮೇಲೆ ಹಲ್ಲೆ
![Profile](https://vishwavani.news/static/img/user.png)
ಗಾಜಿಯಾಬಾದ್: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ, ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಜನರೇ ಸಾರ್ವಜನಿಕರ ಮುಂದೆ ಹೊಡೆದಾಡಿಕೊಳ್ಳಲು ಶುರುಮಾಡಿದ್ದಾರೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಸೇಲ್ಸ್ ಟ್ಯಾಕ್ಸ್ ಕಚೇರಿಯ ಹೊರಗೆ ನಡೆದಿದೆ. ಮಂಗಳವಾರ(ಫೆಬ್ರವರಿ 11) ಸೇಲ್ಸ್ ಟ್ಯಾಕ್ಸ್ ಕಚೇರಿಯ ಹೊರಗೆ ವಕೀಲರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಗರದ ಮೋಹನ್ ನಗರ ಪ್ರದೇಶದಲ್ಲಿ ನಡೆದ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಈ ಜಗಳದಲ್ಲಿ ಮಹಿಳಾ ವಕೀಲೆಯೊಬ್ಬಳು ಗಾಯಗೊಂಡು ರಕ್ತಸಿಕ್ತಳಾಗಿದ್ದಳು.
ವೈರಲ್ ಆದ ವಿಡಿಯೊದಲ್ಲಿ, ಮಹಿಳಾ ವಕೀಲೆ ಸೇರಿದಂತೆ ಇಬ್ಬರು ವಕೀಲರು ಕಕ್ಷಿದಾರರ ಕುರಿತು ಇಬ್ಬರು ವ್ಯಕ್ತಿಗಳ ಜೊತೆ ಜಗಳವಾಡುವುದು ಸೆರೆಯಾಗಿದೆ. ವಕೀಲೆ ವ್ಯಕ್ತಿಗಳಿಬ್ಬರ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಜಗಳದ ಸಂದರ್ಭದಲ್ಲಿ ಒಬ್ಬನಿಗೆ ವಕೀಲೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕೋಪಗೊಂಡ ವ್ಯಕ್ತಿ ಮಹಿಳಾ ವಕೀಲೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಮಹಿಳಾ ವಕೀಲೆಗೆ ಗಾಯವಾಗಿದೆ ಎನ್ನಲಾಗಿದೆ.
#Ghaziabad के दो वीडियो हैं।
— Rao Virendra Singh (@raovsingh) February 12, 2025
गाजियाबाद के साहिबाबाद इलाके का मोहन नगर थाना और सेल्स टैक्स ऑफिस में क्लाइंट की छीना झपटी का सीन ।
नए क्लाइंट पकड़ने के फेर में महिला अधिवक्ता और पुरुष अधिवक्ता भिड़े। दोनों पक्ष में जमकर चले लात घूंसे और हुई खूनी मारपीट।
खुद Video देखें और फैसला… pic.twitter.com/oUkBAUgFwE
ವರದಿಯ ಪ್ರಕಾರ, ಟ್ಯಾಕ್ಸ್ ಕಟ್ಟದ ಕಾರಣ ಸೇಲ್ಸ್ ಟ್ಯಾಕ್ಸ್ ತಂಡ ಟ್ರಕ್ ಅನ್ನು ವಶಪಡಿಸಿಕೊಂಡಿದೆ. ವಕೀಲರು ಟ್ರಕ್ ಚಾಲಕನೊಂದಿಗೆ ಮಾತನಾಡಿ ಟ್ರಕ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಮಹಿಳಾ ವಕೀಲೆ ಟ್ರಕ್ ಚಾಲಕನೊಂದಿಗೆ ಪ್ರಕರಣದ ಬಗ್ಗೆ ಮಾತನಾಡಲು ಪ್ರಯತ್ನಿಸಿದ ವೇಳೆ ಈ ಜಗಳ ನಡೆದಿತ್ತು.
ವಿಡಿಯೊ ವೈರಲ್ ಆದ ನಂತರ ಉತ್ತರ ಪ್ರದೇಶ ಪೊಲೀಸರು ಈ ವಿಷಯವನ್ನು ತಿಳಿದುಕೊಂಡು ಕ್ರಮ ಕೈಗೊಳ್ಳುವಂತೆ ಗಾಜಿಯಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಈ ಘಟನೆಯ ಬಗ್ಗೆ ಕಾಂಗ್ರೆಸ್, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. "ಗಾಜಿಯಾಬಾದ್‍ನಲ್ಲಿ ಗೂಂಡಾಗಳು ಮಹಿಳಾ ವಕೀಲೆಯನ್ನು ಕ್ರೂರವಾಗಿ ಥಳಿಸಿದ್ದಾರೆ. ಅದರಲ್ಲಿ ಅವಳು ತೀವ್ರವಾಗಿ ಗಾಯಗೊಂಡಿದ್ದಾಳೆ. ಅಪರಾಧ ಪೀಡಿತ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಮತ್ತು ಶಾಂತಿ ಸಿಗಲು ಸಾಧ್ಯವಿಲ್ಲ. ಮಹಿಳಾ ವಕೀಲರೊಂದಿಗೆ ಇಂತಹ ಘಟನೆ ನಡೆದರೆ, ಸಾಮಾನ್ಯ ಮಹಿಳೆಯರ ಗತಿ ಏನು?” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನ್ಯಾಯಾಲಯದ ಹೊರಗೆ ಕಕ್ಷಿದಾರರಿಗೆ ಹಿಗ್ಗಾಮುಗ್ಗಾ ಥಳಿಸಿದ ವಕೀಲರು; ವಿಡಿಯೊ ನೋಡಿ
ಈ ಪ್ರಕರಣದ ಬಗ್ಗೆ ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ.