ಬಿರಿಯಾನಿ ಬಾಕ್ಸ್ ಸಿಕ್ಕ ತಕ್ಷಣ ಕುಣಿದಾಡಿದ ಬಾಲಕ; ಕ್ಯಾಮೆರಾದಲ್ಲಿ ಸೆರೆಯಾಯ್ತು ಮುಗ್ಧ ಮನಸ್ಸಿನ ಖುಷಿ, ವಿಡಿಯೋ ನೋಡಿ
Viral Video: ಪುಟ್ಟ ಹುಡುಗನೊಬ್ಬನು ತನ್ನ ಮನೆಗೆ ಬಂದ ಬಿರಿಯಾನಿ ಪಾರ್ಸೆಲ್ ಅನ್ನು ಅತ್ಯಂತ ಖುಷಿಯಿಂದ , ಉತ್ಸಾಹದಿಂದ ಸ್ವಾಗತಿಸಿದ್ದ ವಿಡಿಯೋ ಇತ್ತೀಚೆಗಷ್ಟೇ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಬಿರಿಯಾನಿ ಪಾರ್ಸೆಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಖುಷಿಯಿಂದ ತನ್ನ ತಂದೆಯನ್ನು ಕರೆಯುತ್ತಿದ್ದ ಈ ದೃಶ್ಯವು ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಬಿರಿಯಾನಿ ಕಂಡು ಖುಷಿ ಪಟ್ಟ ಬಾಲಕ -
ಕೊಲ್ಕತ್ತಾ, ಜ. 4: ಭಾರತದಲ್ಲಿ ಬಹುತೇಕ ಜನರಿಗೆ ಬಿರಿಯಾನಿ ಊಟ ಎಂದರೆ ಬಹಳ ಇಷ್ಟ. ಹಬ್ಬ, ಮದುವೆ ರಿಸೆಪ್ಶನ್, ಹುಟ್ಟುಹಬ್ಬ, ವಾರ್ಷಿಕೋತ್ಸವ ಎಲ್ಲ ಆಚರಣೆಗೆ ವಿಶೇಷ ಖಾದ್ಯವಾಗಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ಮಕ್ಕಳಿಂದ ವೃದ್ಧರವರೆಗೂ ಬಿರಿಯಾನಿ ಪ್ರಿಯರಿದ್ದು ನೆಂಟರಿಷ್ಟರೆಲ್ಲ ಒಟ್ಟಿಗೆ ಕೂತು ಇದನ್ನು ಸವಿಯಲು ಬಹುತೇಕರು ಇಷ್ಟಪಡುತ್ತಾರೆ. ಮನೆಯಿಂದ ದೂರ ಉಳಿದ ನಗರವಾಸಿಗಳಿಗಾಗಿ ಅನೇಕ ಹೊಟೇಲ್ , ರೆಸ್ಟೋರೆಂಟ್ ನಲ್ಲಿಯೂ ಬಿರಿಯಾನಿ ಸಿಗಲಿದ್ದು ಇದನ್ನು ಹೆಚ್ಚಾಗಿ ಜನರು ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಮನೆಯಲ್ಲಿ ಸವಿಯಲು ಇಷ್ಟಪಡುತ್ತಾರೆ. ಅಂತೆಯೇ ಪುಟ್ಟ ಹುಡುಗನೊಬ್ಬನು ತನ್ನ ಮನೆಗೆ ಬಂದ ಬಿರಿಯಾನಿ ಪಾರ್ಸೆಲ್ ಅನ್ನು ಅತ್ಯಂತ ಖುಷಿಯಿಂದ , ಉತ್ಸಾಹದಿಂದ ಸ್ವಾಗತಿಸಿದ್ದ ವಿಡಿಯೋ ಇತ್ತೀಚೆಗಷ್ಟೇ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಬಿರಿಯಾನಿ ಪಾರ್ಸೆಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಖುಷಿಯಿಂದ ತನ್ನ ತಂದೆಯನ್ನು ಕರೆಯುತ್ತಿದ್ದ ಈ ದೃಶ್ಯವು ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.
ನಮಗೆ ಇಷ್ಟವಾದ ವಸ್ತು ಅಥವಾ ಆಹಾರ ಅನಿರೀಕ್ಷಿತವಾಗಿ ನಮಗೆ ಸಿಕ್ಕರೆ ಬಹಳ ಖುಷಿಯಾಗುತ್ತೇವೆ. ದೊಡ್ಡವರು ಇಂತಹ ಖುಷಿಯನ್ನು ನಗುವಿನ ಮೂಲಕ ತೋರ್ಪಡಿಸಿದರೆ ಚಿಕ್ಕ ಮಕ್ಕಳು ಖುಷಿಯಿಂದ ಕುಣಿದಾಡಿ ಬಿಡುತ್ತಾರೆ. ಅಂತೆಯೇ ವೈರಲ್ ವಿಡಿಯೋದಲ್ಲಿ ಕೂಡ ಬಾಲಕ ಬಿರಿಯಾನಿ ಪ್ಯಾಕೆಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ಬಿರಿಯಾನಿ ಎಂಬ ಪದವನ್ನು ಉತ್ಸಾಹದಿಂದ ಪುನರಾವರ್ತಿಸುವುದನ್ನು ಕಾಣಬಹುದು. ಈ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು ಪುಟ್ಟ ಹುಡುಗನು ತನ್ನಿಷ್ಟದ ಬಿರಿಯಾನಿಯನ್ನು ಒಳಗೆ ತರುತ್ತಲೇ ಆದಷ್ಟು ಬೇಗ ಬಡಿಸಲು ತನ್ನ ತಂದೆಯನ್ನು ಕೇಳುತ್ತಿರುವ ದೃಶ್ಯವನ್ನು ಕಾಣಬಹುದು.
ವಿಡಿಯೋ ಇಲ್ಲಿದೆ:
ಆ ಪುಟ್ಟ ಹುಡುಗನ ನಿಷ್ಮಲ್ಮಶ ನಗು, ಉತ್ಸಾಹವು ನೆಟ್ಟಿಗರ ಮನ ಸೆಳೆದಿದೆ. ಬಹಳ ಸಮಯದಿಂದ ಆ ಹುಡುಗ ಈ ಕ್ಷಣಕ್ಕಾಗಿ ಕಾಯುತ್ತಿದ್ದಂತೆ ವಿಡಿಯೋದಲ್ಲಿ ಕಾಣಬಹುದು. ಇದು ಮನೆಯಲ್ಲಿ ನಡೆಯುವ ಸಾಮಾನ್ಯ ಸಂಗತಿಯಾಗಿದ್ದರೂ ಆ ವಯಸ್ಸಿನಲ್ಲಿ ಚಿಕ್ಕ ಪುಟ್ಟ ಸಂಗತಿಗಳು ನಮಗೆ ಎಷ್ಟು ಖುಷಿ ನೀಡುತ್ತದೆ ಎಂಬುದಕ್ಕೆ ಇತ್ತೀಚಿನ ಈ ವಿಡಿಯೋ ಒಂದು ಸಾಕ್ಷಿ ಇದ್ದಂತೆ.
Viral Video: ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ: ಮುಗ್ಧತೆಗೆ ಮನಸೋತ ನೆಟ್ಟಿಗರು!
ಈ ವಿಡಿಯೋವನ್ನು ಆ ಹುಡುಗನ ಮನೆಯವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದು ಅನಂತರ ಅದೇ ಕ್ಲಿಪ್ ಅನ್ನು ಇನ್ ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ವಿಶೇಷ ಕ್ಯಾಪ್ಶನ್ ಸಹ ನೀಡಿದ್ದಾರೆ. ಬಿರಿಯಾನಿ ನೋಡಿದಾಗಲೇ ನಮಗೆ ಸಂತೋಷವಾಗುತ್ತದೆ ಎಂಬ ಶೀರ್ಷಿಕೆಯು ಕೂಡ ಹೈಲೈಟ್ ಆಗಿದೆ. ಈ ವಿಡಿಯೋ ಹಂಚಿಕೊಂಡ ಕೆಲವೇ ಹೊತ್ತಿಗೆ 3ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಅದರ ಜೊತೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಈ ಬಗ್ಗೆ ಕಾಮೆಂಟ್ ಮಾಡಿದ್ದ ಬಳಕೆದಾರರೊಬ್ಬರು, ಆ ಹುಡುಗನ ಖುಷಿ ಕಂಡರೆ ನನಗೆ ನನ್ನ ಬಾಲ್ಯವೇ ಮರುಕಳಿಸಿದಂತಿದೆ. ಆ ವಯಸ್ಸಿನಲ್ಲಿ ನಮಗೆ ಸಿಗುವ ಎಲ್ಲ ಕ್ಷಣವನ್ನು ನಾವು ಎಂಜಾಯ್ ಮಾಡುತ್ತೇವೆ. ಈ ವಿಡಿಯೋ ಕಂಡ ಮೇಲೆ ನನಗೂ ಒಂದು ಪ್ಲೇಟ್ ಬಿರಿಯಾನಿ ಆರ್ಡರ್ ಮಾಡಿ ತಿನ್ನಬೇಕು ಎಂಬ ಮನಸ್ಸಾಯಿತು ಎಂದು ಕಾಮೆಂಟ್ ಮಾಡಿದ್ದಾರೆ