ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾಳಿಂಗ ಸರ್ಪವೇ ಈತನ ಬೆಸ್ಟ್‌ ಫ್ರೆಂಡ್‌; ಇವರಿಬ್ಬರ ಈ ನಂಟು ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌

ವ್ಯಕ್ತಿಯೊಬ್ಬ ತಾನು ಸಾಕಿದ ಬೃಹತ್ ನಾಗರಹಾವಿನ ಜೊತೆ ಕುಳಿತು ಅದರ ತಲೆಯ ಮೇಲೆ ತನ್ನ ತಲೆಯನ್ನು ಇಟ್ಟು ಮುದ್ದಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಕಾಳಿಂಗ ಸರ್ಪವೇ ಈತನ ಬೆಸ್ಟ್‌ ಫ್ರೆಂಡ್‌; ವಿಡಿಯೊ ನೋಡಿ!

Profile pavithra Apr 5, 2025 3:14 PM

ನವದೆಹಲಿ: ಹಾವನ್ನು ನೋಡಿದವರು ಹೆದರಿ ಕಂಗೆಟ್ಟು ಓಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಸಾಕಿದ ಬೃಹತ್ ನಾಗರಹಾವಿನ ಜೊತೆ ಕುಳಿತು ಅದರ ತಲೆಯ ಮೇಲೆ ತಲೆ ಇಟ್ಟು ಮುದ್ದಿಸಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ವಿಡಿಯೊದಲ್ಲಿ ಹಾವು ಹೆಡೆ ಎತ್ತಿ ಅತ್ತಿತ್ತ ನೋಡುತ್ತಾ ಇರುವುದು ಸೆರೆಯಾಗಿದೆ. ಆದರೆ ವ್ಯಕ್ತಿಯೊಬ್ಬ ಸ್ವಲ್ಪ ಕೂಡ ಹೆದರದೆ ಅದರ ಬಳಿ ಹೋಗಿ ಅದರ ತಲೆಯ ಮೇಲೆ ತನ್ನ ತಲೆಯನ್ನು ಇಟ್ಟಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಾಗಿನಿಂದ ಇದು 69 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಆರಂಭದಲ್ಲಿ ಈ ಪೋಸ್ಟ್‌ ಮೂರು ದಶಲಕ್ಷಕ್ಕೂ ಹೆಚ್ಚು ನೆಟ್ಟಿಗರ ಗಮನ ಸೆಳೆದಿತ್ತು. ಈ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಕ್ತಿಯ ಧೈರ್ಯವನ್ನು ಹೊಗಳಿದ್ರೆ ಇತರರು ಅಂತಹ ಅಪಾಯಕಾರಿ ಹಾವಿನೊಂದಿಗೆ ಇಷ್ಟು ಹತ್ತರದಲ್ಲಿ ಕುಳಿತುಕೊಳ್ಳುವುದರ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಒಬ್ಬರು ಕಾಮೆಂಟ್ ಮಾಡಿ, ಇದು ಹುಚ್ಚು! ಎಂದು ಬರೆದಿದ್ದಾರೆ. ಇನ್ನೊಬ್ಬರು, ಅವರು ತಾನೊಬ್ಬ ಅದ್ಭುತ ಹಾವಾಡಿಗ ಅಂದುಕೊಂಡಿದ್ದಾರೆ, ಆದರೆ ಈ ಒಂದು ತಪ್ಪು ನಡೆ ನಂತರ ಇದರ ಅಂತ್ಯ ಅತ್ಯಂತ ಕೆಟ್ಟದಾಗುವ ಸಾಧ್ಯತೆ ಇದೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ಹಾವಿನ ಹಲ್ಲುಗಳನ್ನು ತೆಗೆದುಹಾಕಲಾಗಿದೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಯಾರಾದರೂ ತಮ್ಮ ಜೀವವನ್ನು ಈ ರೀತಿ ಹೇಗೆ ಅಪಾಯಕ್ಕೆ ತಳ್ಳುತ್ತಾರೆ? ನಾಗರಹಾವುಗಳು ಸಾಕುಪ್ರಾಣಿಗಳಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಕೃತಿಗೆ ಗೌರವ ಕೊಡುವುದು ಮುಖ್ಯ, ಆದರೆ ಇದು ಅಪಾಯದೊಂದಿಗೆ ಆಡುವ ಆಟವಾಡುತ್ತಿದೆ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಇನ್ನೊಬ್ಬರು ತಮಾಷೆ ಮಾಡುತ್ತಾ, ಈ ಮನುಷ್ಯ ಯಾರು, ಮತ್ತು ಅವನು ನನ್ನನ್ನು ಏಕೆ ಸ್ಪರ್ಶಿಸುತ್ತಿದ್ದಾನೆ ಎಂದು ಹಾವು ಬಹುಶಃ ಆಶ್ಚರ್ಯ ಪಡುತ್ತಿದೆ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: 'ವಂದೇ ಮಾತರಂ’ ಹಾಡಿದ ಮೇಘಾಲಯದ ಹುಡುಗಿಯರು; ದೇಶಭಕ್ತಿಯ ಹಾಡಿಗೆ ನೆಟ್ಟಿಗರು ಫಿದಾ

ಇತ್ತೀಚೆಗೆ ಫೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬನ ತಲೆಗೆ ವಿಷಕಾರಿ ಹಾವೊಂದು ತಲೆಗೆ ಕಚ್ಚಿದೆ. ಆದರೆ ಟೋಪಿ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಫೋನ್‍ನಲ್ಲಿ ಮಾತನಾಡುತ್ತಿರುವಾಗ ವಿಷಕಾರಿ ಹಾವೊಂದು ಬೇಲಿಯಿಂದ ಮೇಲೆ ಹತ್ತಿ ಬಂದು ವ್ಯಕ್ತಿಯ ತಲೆಗೆ ಕಚ್ಚಿದೆ. ಆದರೆ ಆತ ತಲೆಗೆ ಟೋಪಿ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಹಾವಿನ ಹಲ್ಲಿಗೆ ಆ ಟೋಪಿ ಸಿಲುಕಿಕೊಂಡಿದೆ. ಇದರಿಂದ ಆ ವ್ಯಕ್ತಿಗೆ ಯಾವುದೇ ಹಾನಿಯಾಗಲಿಲ್ಲ. ಟೋಪಿ ತನ್ನ ತಲೆಯಿಂದ ಹೊರಬಂದ ಕೂಡಲೇ ವ್ಯಕ್ತಿಗೆ ಪರಿಸ್ಥಿತಿಯ ಅರಿವಾಗಿದೆ. ಮೊದಲಿಗೆ ಯಾರೋ ತಮಾಷೆಯಾಗಿ ತನ್ನ ಟೋಪಿಯನ್ನು ತೆಗೆದಿರಬಹುದು ಎಂದುಕೊಂಡ ಆತ ಹಿಂತಿರುಗಿ ನೋಡಿದಾಗ ಹಾವನ್ನು ಕಂಡು ಹೌಹಾರಿದ್ದಾನೆ.