ದಾರಿ ತಪ್ಪಿದ ವಿದ್ಯಾರ್ಥಿಗಳ ಹೋರಾಟ: ಪಂಜಾಬ್‌ನ ಮಾಲ್‌ನಿಂದ ಲಕ್ಷಗಟ್ಟಲೆ ರೂಪಾಯಿ ಮೌಲ್ಯದ ದುಬಾರಿ ವಸ್ತು ಕದ್ದೊಯ್ದ ಪ್ರತಿಭಟನಾಕಾರರು
Viral Video: ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಉಂಟಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಕಾಲೇಜಿನ ಆಸ್ತಿ ಹಾನಿಗೊಳಿದ್ದಾರೆ. ಜತೆಗೆ ಮಾಲ್ ಒಂದರಿಂದ ದುಬಾರಿ ವಸ್ತುಗಳನ್ನು ದೋಚಿದ್ದಾರೆ.
ಪಂಜಾಬ್ LPU ಕ್ಯಾಂಪಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ -
ಚಂಡೀಗಢ, ಸೆ. 29: ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ (LPU) ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಕಾರಣಕ್ಕೆ ಆರಂಭವಾದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ನಡೆಯುತ್ತಿರುವ ಹೋರಾಟ ಈಗ ದಾರಿ ತಪ್ಪಿದೆ. ಪ್ರತಿಭಟನಾಕಾರರು ಕ್ಯಾಂಪಸ್‌ನಲ್ಲಿರುವ ಯೂನಿ ಮಾಲ್, ಆಡಳಿತ ಭವನ ಸೇರಿ ಆಸ್ತಿಪಾಸ್ತಿಗಳನ್ನು ಧ್ವಂಸ ಗೊಳಿಸುತ್ತಿರುವ ವಿಡಿಯೊಗಳು (Viral News) ವೈರಲ್ ಆಗಿವೆ.
ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ಎನುವ ಆರೋಪ ಕೇಳಿ ಬಂದಿದೆ. ಅದಾಗ್ಯೂ ಈ ಆರೋಪ ಇನ್ನೂ ದೃಢಪಟ್ಟಿಲ್ಲ. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಕಾಲೇಜಿನ ಆಸ್ತಿಗೆ ಹಾನಿ ಎಸಗಿದ್ದಾರೆ.
ವಿಡಿಯೊ ನೋಡಿ:
The issue is very real . A girl was assaulted / raped inside the LPU campus hostel but these absolute lowlifes used it as an excuse to literally loot and destroy the campus and now the actual tragedy is getting buried and deflected for a vandalism issue . Idiots pic.twitter.com/BewgdR1aMJ
— Naman Rana (@NamanRana28) September 27, 2026
ಅಷ್ಟೇ ಅಲ್ಲದೆ ಹಿಂಸಾತ್ಮಕ ಪ್ರತಿಭಟನೆಗಳ ವೇಳೆ ವಿದ್ಯಾರ್ಥಿಗಳು ಅಂಗಡಿಗಳನ್ನು ಲೂಟಿ ಮಾಡಿ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಜಲಂಧರ್-ಫಗ್ವಾರ ರಾಷ್ಟ್ರೀಯ ಹೆದ್ದಾರಿಯನ್ನು ಹಲವು ಗಂಟೆಗಳ ಕಾಲ ತಡೆದು ಸಂಚಾರಕ್ಕೆ ಅಡ್ಡಿಪಡಿಸಲಾಯಿತು. ರಸ್ತೆ ತಡೆ ತೆರವುಗೊಳಿಸಲು ನಿರಾಕರಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಬೇಕಾಯಿತು.
ಕತ್ತಿನಲ್ಲಿ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು
ಈ ಪರಿಸ್ಥಿತಿ ನಿಯಂತ್ರಿಸಲು ಕ್ಯಾಂಪಸ್‌ನಲ್ಲಿ 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಪೊಲೀಸರ ಪ್ರಾಥಮಿಕ ತನಿಖೆಯಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದ್ದು, ಅತ್ಯಾಚಾರ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಯೂನಿವರ್ಸಿಟಿಯು ಕ್ಯಾಂಪಸ್‌ನಲ್ಲಿ ದೌರ್ಜನ್ಯ ನಡೆದಿದೆ ಎಂಬ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದು, ಇವೆಲ್ಲವೂ ಉದ್ದೇಶಪೂರ್ವಕವಾಗಿ ಹರಡಿಸಲಾದ ವದಂತಿ ಎಂದು ಹೇಳುತ್ತಿದೆ.