Sherfane Rutherford: ಗುಜರಾತ್ ಟೈಟನ್ಸ್‌ನಿಂದ ಸ್ಟಾರ್ ಆಟಗಾರನನ್ನು ಟ್ರೇಡ್ ಡೀಲ್ ಮಾಡಿಕೊಂಡ ಮುಂಬೈ ಇಂಡಿಯನ್ಸ್!
ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಶಾರ್ದುಲ್ ಠಾಕೂರ್ ಅವರನ್ನು ಟ್ರೇಡ್ ಡೀಲ್ ಮಾಡಿಕೊಂಡ ಬೆನ್ನಲ್ಲೆ ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ತಂಡದಿಂದ ಸ್ಟಾರ್ ಆಲ್‌ರೌಂಡರ್ ಶೆರ್ಫೆನ್ ಋದರ್‌ಫೋರ್ಡ್ ಅವರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಈ ಬಗ್ಗೆ ಮುಂಬೈ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಿಳಿಸಿದೆ.
ಮುಂಬೈ ಇಂಡಿಯನ್ಸ್‌ಗೆ ಮರಳಿದ ಶೆರ್ಫೆನ್ ಋದರ್‌ಫೋರ್ಡ್. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ನವೆಂಬರ್ 13 ರಂದು ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಶಾರ್ದುಲ್ ಠಾಕೂರ್ ಅವರನ್ನು ಟ್ರೇಡ್ ಡೀಲ್ ಮಾಡಿಕೊಂಡ ಬೆನ್ನಲ್ಲೆ, ಗುಜರಾತ್ ಟೈಟನ್ಸ್ ತಂಡದಿಂದ ವಿಂಡೀಸ್ ಆಲ್‌ರೌಂಡರ್ ಶೆರ್ಫೆನ್ ಋದರ್‌ಫೋರ್ಡ್ (Sherfane Rutherford) ಅವರನ್ನು ಟ್ರೇಡ್ ಡೀಲ್ ಮಾಡಿಕೊಂಡಿದೆ. ಆ ಮೂಲಕ ತನ್ನ ತಂಡದ ಸಂಯೋಜನೆಯನ್ನು ಬಲಿಷ್ಠಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಶೆರ್ಫೆನ್ ಋದರ್‌ಫೋರ್ಡ್ ಅವರನ್ನು ಟ್ರೇಡ್ ಡೀಲ್ ಮಾಡಿಕೊಂಡ ಬಗ್ಗೆ ಮುಂಬೈ ಇಂಡಿಯನ್ಸ್ ತಂಡ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಹಿರಂಗಪಡಿಸಿದೆ. ಆ ಮೂಲಕ ವಿಂಡೀಸ್ ಆಲ್‌ರೌಂಡರ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಈ ಹಿಂದೆ ಅವರು 2020ರ ಟೂರ್ನಿಯಲ್ಲಿ ಮುಬೈ ಪರ ಆಡಿದ್ದರು ಹಾಗೂ ಆಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಎಂಐ ಚಾಂಪಿಯನ್ ಆಗಿತ್ತು. ಈ ಸೀಸನ್‌ನಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ.
IPL 2026 Mini Auction: ಮೊಹಮ್ಮದ್ ಶಮಿ ಮೇಲೆ ಕಣ್ಣಿಟ್ಟಿರುವ ಎರಡು ಫಾಂಚೈಸಿಗಳು!
ಇನ್ನು ಇವರು 2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಋದರ್‌ಫೋರ್ಡ್ ಆಡಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್ ಆಗಿತ್ತು. ಈ ವೇಳೆಯೂ ಇವರಿಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ.
ಋದರ್‌ಫೋರ್ಡ್ ಅವರು 2025ರ ಐಪಿಎಲ್ ಟೂರ್ನಿಯಲ್ಲಿ 2.6 ಕೋಟಿ ರು. ಗಳಿಗೆ ಗುಜರಾತ್ ಟೈಟನ್ಸ್ ಪರ ಆಡಿದ್ದರು. ಇಲ್ಲಿ ಇವರು ಆಡಿದ್ದ 13 ಪಂದ್ಯಗಳಿಂದ 291 ರನ್‌ಗಳನ್ನು ಕಲೆ ಹಾಕಿದ್ದರು. ಇವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಆಡಿದ 23 ಪಂದ್ಯಗಳಿಂದ 397 ರನ್‌ಗಳನ್ನು ಕಲೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.
IPL 2026: 2 ಕೋಟಿ ರು. ಗಳಿಗೆ ಲಖನೌದಿಂದ ಮುಂಬೈ ಇಂಡಿಯನ್ಸ್‌ಗೆ ಸೇರಿದ ಶಾರ್ದುಲ್ ಠಾಕೂರ್!
ವೆಸ್ಟ್ ಇಂಡೀಸ್ ಆಲ್‌ರೌಂಡರ್ ಶೆರ್ಫೆನ್ ಋದರ್ಫೋರ್ಡ್, ಗುಜರಾತ್ ಟೈಟನ್ಸ್ (GT) ತಂಡದಿಂದ ಯಶಸ್ವಿ ವಹಿವಾಟಿನ ನಂತರ 2026ರ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. 2.6 ಕೋಟಿ ರು.ಗಳಿಗೆ ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈ ಸೇರಿದ್ದಾರೆ."
"27ರ ಪ್ರಾಯದ ಆಲ್‌ರೌಂಡರ್ ಇಲ್ಲಿಯತನಕ ಆಡಿದ 44 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ ಆರನೇ ವಿಕೆಟ್‌ಗೆ ಅತಿ ಹೆಚ್ಚು ರನ್ ಜೊತೆಯಾಟವನ್ನು ಆಡಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಇವರ ಹೆಸರಿನಲ್ಲಿದೆ. ಇವರು ಹಾಗೂ ಆಂಡ್ರೆ ರಸೆಲ್ ಅವರು ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಆರನೇ ವಿಕೆಟ್‌ಗೆ 139 ರನ್‌ಗಳನ್ನು ಕಲೆ ಹಾಕಿದ್ದರು.