ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಟ್-ಅಂಡ್-ರನ್ ಪ್ರಕರಣ: ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್ ಚಾಲಕ

Viral Video: ಹರಿಯಾಣ ನೋಂದಣಿಯ ಮಹೀಂದ್ರಾ ಥಾರ್ ಕಾರೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಮುಂಬೈನ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ...

ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಪರಾರಿಯಾದ ಮಹೀಂದ್ರಾ ಥಾರ್ ಚಾಲಕ

ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಪರಾರಿಯಾದ ಮಹೀಂದ್ರಾ ಥಾರ್ ಚಾಲಕ -

Profile
Pushpa Kumari Jul 10, 2026 9:19 PM

ಮುಂಬೈ,ಜು.10: ಇತ್ತೀಚೆಗೆ ಹಿಟ್- ಅಂಡ್- ರನ್ ಪ್ರಕರಣಗಳು ದಿನಕ್ಕೊಂದು ವರದಿಯಾಗುತ್ತಲೇ ಇವೆ‌. ಇದೀಗ ಹರಿಯಾಣ ನೋಂದಣಿಯ ಮಹೀಂದ್ರಾ ಥಾರ್ ಕಾರೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಮುಂಬೈನ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ಬೇರೆಯವರ ಜೀವದ ಜೊತೆ ಆಟ ಆಡುತ್ತಿರುವ ಇಂತಹ ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ವೈರಲ್ ಆದ ವಿಡಿಯೊ ಪ್ರಕಾರ HR 98 X 5101 ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರು ಅಪಾಯಕಾರಿಯಾಗಿ ಸಂಚಾರಿಸುತ್ತಿರುವ ದೃಶ್ಯ ಕಂಡು ಬಂದಿದೆ.ಈ ದೃಶ್ಯಾವಳಿಗಳು ಅಜಾಗರೂಕ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ:



ವೈರಲ್ ಕ್ಲಿಪ್ ಪ್ರಕಾರ, ಥಾರ್ ಕಾರೊಂದು ಇಬ್ಬರು ಪ್ರಯಾಣಿಕರಿದ್ದ ಬೈಕ್ ಗೆ ಡಿಕ್ಕಿ ಹೊಡೆದು, ಇಬ್ಬರೂ ಪ್ರಯಾಣಿಕರನ್ನು ರಸ್ತೆಗೆ ಎಸೆದಿದೆ. ಆದರೆ ಅವರನ್ನು ಉಪಚರಿಸುವ ಬದಲು ಅವರ ಸ್ಥಿತಿಯನ್ನು ಪರಿಶೀಲಿಸದೆ ಕಾರು ಚಾಲಕ ವಾಹನ ಚಲಾಯಿಸುವುದನ್ನು ಮುಂದುವರಿಸುತ್ತಾನೆ. ಅಷ್ಟೇ ಅಲ್ಲದೆ ​ಕೆಲವೇ ಸೆಕೆಂಡುಗಳಲ್ಲಿ ಅದೇ ವೇಗದಲ್ಲಿ ಮತ್ತೊಂದು ದ್ವಿಚಕ್ರ ವಾಹನಕ್ಕೂ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ.

Viral Video: ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ

ಈ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಮೀರಾ ಭಯಂದರ್ ವಸೈ ವಿರಾರ್ ಪೊಲೀಸರು, ಅಪರಿಚಿತ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಅಪರಿಚಿತ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 281 ರ ಅಡಿ ಮತ್ತು ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 184 ಮತ್ತು 187 ರ ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.