ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ: ಸಹಾಯ ಮಾಡುವ ಬದಲು ಚೆಲ್ಲಿದ ಪಾಮ್ ಆಯಿಲ್ ಸಂಗ್ರಹಿಸಲು ಮುಗಿಬಿದ್ದ ಸ್ಥಳೀಯರು; ವಿಡಿಯೊ ವೈರಲ್
Viral Video: ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ತೋಡಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪಾಮ್ ಆಯಿಲ್ ಕೊಂಡೊಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆದರೆ ಸ್ಥಳೀಯ ಜನರು ಗಾಯಗೊಂಡ ಚಾಲಕನಿಗೆ ನೆರವಾಗುವ ಬದಲು ಬಕೆಟ್ ಕ್ಯಾನ್ ಹಿಡಿದು ಎಣ್ಣಿ ತುಂಬಿಸಲು ಮುಗಿಬಿದ್ದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ -
ಭೋಪಾಲ್, ಆ. 24: ಇಂದು ಮಾನವೀಯತೆ ಅನ್ನೋದು ಮರೆಯಾಗಿದೆ. ಯಾರಾದರೂ ಅಪಾಯದಲ್ಲಿದ್ದಾರೆ ಎಂದಾಗ ಸಹಾಯ ಮಾಡುವ ಬದಲು ತಮ್ಮ ಲಾಭವನ್ನೇ ನೋಡಿಕೊಳ್ಳುವವರು ಹೆಚ್ಚು. ಇದಕ್ಕೆ ಸಾಕ್ಷಿ ಎನ್ನುವಂತೆ ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ತೋಡಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪಾಮ್ ಆಯಿಲ್ ಕೊಂಡೊಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಆದರೆ ಸ್ಥಳೀಯ ಜನರು ಗಾಯಗೊಂಡ ಚಾಲಕನಿಗೆ ನೆರವಾಗುವ ಬದಲು ಬಕೆಟ್, ಕ್ಯಾನ್ ಹಿಡಿದು ಎಣ್ಣೆ ತುಂಬಿಸಲು ಮುಗಿಬಿದ್ದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಮಧ್ಯ ಪ್ರದೇಶದ ಗುಣಾದಲ್ಲಿರುವ ಕಂದಕ ಮೈದಾನದ ಬಳಿ ಸಂಸ್ಕರಿಸಿದ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿತ್ತು. ರಸ್ತೆಯ ಬದಿಯಲ್ಲಿ ತೈಲ ಚೆಲ್ಲುತ್ತಿದ್ದಂತೆ, ಸ್ಥಳೀಯರು ಬಕೆಟ್ ಮತ್ತು ಪಾತ್ರೆಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ನಿಯಂತ್ರಣ ಮಾಡಲು ಮುಂದಾದರೂ ಎಣ್ಣೆ ದೋಚಿಕೊಳ್ಳುವಲ್ಲಿಯೇ ನಿರತರಾಗಿದ್ದಾರೆ.
ವಿಡಿಯೊ ನೋಡಿ:
मध्य प्रदेश : गुना जिले में रिफाइंड तेल से भरा टैंकर पलटा। तेल लूटने के लिए मारामारी मच गई। लोग घर से बाल्टी–डब्बे लेकर पहुंच गए। pic.twitter.com/JcysaDkSav
— Sachin Gupta (@Sachingupta) August 24, 2026
ವರದಿಗಳ ಪ್ರಕಾರ, ಇಂದೋರ್‌ನಿಂದ ಮಂಡಿದೀಪ್‌ಗೆ ಪ್ರಯಾಣಿಸುತ್ತಿದ್ದ ಟ್ಯಾಂಕರ್ ಪ್ರಯಾಣಿಕನ ಸಮತೋಲನ ಕಳೆದುಕೊಂಡು ಪಲ್ಟಿಯಾಗಿದೆ. ಇದರ ಪರಿಣಾಮ ತೈಲ ರಸ್ತೆಯ ಬದಿಗೆ ಚೆಲ್ಲಿ, ಹತ್ತಿರದ ಚರಂಡಿಗಳು ಮತ್ತು ಪೊದೆಗಳಿಗೆ ಹರಿದಿದೆ. ತೈಲ ಸೋರಿಕೆಯಾಗುತ್ತಲೇ ಇದ್ದುದರಿಂದ, ಸುತ್ತಮುತ್ತಲಿನ ಜನರು ಜಮಾಯಿಸಿದರು.
ರಸ್ತೆಗೆ ಮದ್ಯದ ಬಾಟಲ್ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ
ಚಾಲಕನು ಅಪಾಯದಲ್ಲಿದ್ದರೂ ನೆರವಾಗುವ ಬದಲು ಸ್ಥಳೀಯರು ಎಣ್ಣೆ ದೋಚಲು ಮುಂದಾಗಿದ್ದಾರೆ. ರಸ್ತೆಯಲ್ಲಿ ಎಣ್ಣೆ ಇರುವುದರಿಂದ ಜಾರಿ ಬೀಳುವ ಅಪಾಯವಿದೆ ಅಥವಾ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು. ಆದರೆ ಜನರು ಇದಕ್ಕೂ ಕಿವಿಗೊಡಲಿಲ್ಲ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಅಲ್ಲಿದ ತೈಲವನ್ನು ಸಂಗ್ರಹಿಸಲು ಜನರು ಪದೇ ಪದೆ ಟ್ಯಾಂಕರ್ ಬಳಿ ಧಾವಿಸುತ್ತಿರುವುದನ್ನು ದೃಶ್ಯಗಳು ತೋರಿಸಿವೆ.
ಹಲವರು ಸ್ಥಳೀಯರ ನಡವಳಿಕೆಯನ್ನು ಟೀಕಿಸಿದ್ದಾರೆ. ನೆಟ್ಟಿಗರೊಬ್ಬರು, ʼʼನೂರು ರುಪಾಯಿ ಉಳಿಸಲು ತಮ್ಮ ಜೀವಗಳನ್ನು ಪಣಕ್ಕಿಡುತ್ತಾರೆ. ನಿಜವಾಗಿಯೂ ವಿಚಿತ್ರ ನಡವಳಿಕೆʼʼ ಎಂದರು. ಮತ್ತೊಬ್ಬರು, ʼʼನಾಗರಿಕ ಪ್ರಜ್ಞೆ ಇಲ್ಲ, ನಾಚಿಕೆ ಇಲ್ಲ, ಅದಕ್ಕಾಗಿಯೇ ಭಾರತವು ಹೀಗಿದೆʼʼ ಎಂದು ತಿಳಿಸಿದರು. ಇನ್ನೊಬ್ಬರು, ʼʼಅನೇಕರಿಗೆ ಮಾನವ ಜೀವಕ್ಕಿಂತ ಉಚಿತ ತೈಲ ಮುಖ್ಯʼʼ ಎಂದು ಟೀಕಿಸಿದರು.